ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ

ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ JAC Freedom Cup football tournament kicks off

ಗದಗ ೨೪:  ನಗರದ ಜೆಎಸಿ ಹೈಸ್ಕೂಲ್ ಮೈದಾನದಲ್ಲಿ ೯ನೇ ವರ್ಷದ ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಇಂದು ಚಾಲನೆ ದೊರೆಯಲಿದ್ದು, ಒಟ್ಟು ೧೫ರಿಂದ ೨೦ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಜೆಎಸಿ ಪ್ರೌಢಶಾಲೆಯ ಅಧ್ಯಕ್ಷ ವಾಸಣ್ಣ ಕುರಡಗಿ ತಿಳಿಸಿದ್ದಾರೆ. 

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಗೆ ಉಪ ಪೊಲೀಸ್ ಅಧೀಕ್ಷಕ ವಿದ್ಯಾನಂದ ನಾಯಕ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರ ತಂಡಗಳು ಭಾಗವಹಿಸಲಿವೆ. ಕೆಎಲ್‌ಇ ಪ್ರೌಢಶಾಲೆ ಹಾಗೂ ಜೆಎಸಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ನಡುವೆ ಸ್ನೇಹಪರ ಪಂದ್ಯ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗಳಿಗೆ ಇದು ಉತ್ತೇಜನ ನೀಡಲಿದೆ ಎಂದರು. 

ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶ 

ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು, ಮಕ್ಕಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳಿಸುವುದು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರದ ಮನೋಭಾವ ಬೆಳೆಸುವ ಉದ್ದೇಶದಿಂದ ೨೦೧೬–೧೭್ಘ್ಚ್ಲ್ಚ್ತ ಈ ಫುಟ್ಬಾಲ್ ಪಂದ್ಯಾವಳಿಯನ್ನು ಆರಂಭಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಪಂದ್ಯಾವಳಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು. 

ಮಕ್ಕಳಲ್ಲಿ ರಾಷ್ಟಿöçÃಯ ಮನೋಭಾವ ಬೆಳೆಸುವ ಹಾಗೂ ಸ್ವಾತಂತ್ರö್ಯದ ಸವಿನೆನಪಿಗಾಗಿ ಪಂದ್ಯಾವಳಿಯನ್ನು ಆಗಸ್ಟ್ ತಿಂಗಳಲ್ಲೇ ಆಯೋಜಿಸಲಾಗುತ್ತಿದ್ದು, ಹೀಗಾಗಿ ಇದಕ್ಕೆ ‘ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿ’ ಎಂದು ಹೆಸರಿಡಲಾಗಿದೆ. ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ವಿವಿಧ ಶಾಲೆಗಳ ಸಹಕಾರವೂ ಉತ್ತಮವಾಗಿ ದೊರೆಯುತ್ತಿದೆ ಎಂದರು. 

ಮೊದಲ ವರ್ಷ ನಗರದಲ್ಲಿನ ೧೧ ಶಾಲೆಗಳ ತಂಡಗಳು ಭಾಗವಹಿಸಿದ್ದವು. ಪ್ರತಿ ವರ್ಷ ಭಾಗವಹಿಸುವ ತಂಡಗಳ ಸಂಖ್ಯೆ ಹೆಚ್ಚುತ್ತಿರುವುದು ಪಂದ್ಯಾವಳಿಯನ್ನು ಮುಂದುವರಿಸಿಕೊAಡು ಹೋಗಲು ಸಂತಸ ಹಾಗೂ ಉತ್ಸಾಹ ಮೂಡಿಸಿದೆ ಎಂದು ಹೇಳಿದರು. 

ವಿಜೇತರಿಗೆ ನಗದು ಬಹುಮಾನ 

ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಂದ್ಯಾವಳಿಯಲ್ಲಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. 

ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ?೨೫,೦೦೦ ನಗದು ಬಹುಮಾನ, ಆಕರ್ಷಕ ರೋಲಿಂಗ್ ಶೀಲ್ಡ್ ಹಾಗೂ ವಿಜೇತ ಟ್ರೋಫಿ. 

ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ?೧೨,೦೦೦ ನಗದು ಬಹುಮಾನ ಹಾಗೂ ರನ್ನರ್‌ಅಪ್ ಟ್ರೋಫಿ. 

ಅತ್ಯುತ್ತಮ ಗೋಲ್ಕೀಪರ್ಗೆ ೨,೦೦೦ ನಗದು ಬಹುಮಾನ. 

ಅತ್ಯುತ್ತಮ ಸ್ಟೆöçöÊಕರ್ಗೆ ೨,೦೦೦ ನಗದು ಬಹುಮಾನ. 

ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಆಕರ್ಷಕ ಶೀಲ್ಡö್ಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. 

ವೈಶಾಕ್ ಬಂಗಾರಶೆಟ್ಟರ್, ಪ್ರಕಾಶ ಏಕ್ಕಾಬಕ್ಕಿ, ರಾಮಚಂದ್ರ ಮೋನೆ, ಫರ್ಹಾನಾ, ಜ್ಯೋತಿ ಹಾಗೂ ಶಿವಕುಮಾರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.