ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ೨೬ ನೇ ವಾರ್ಷಿಕ ಸಾಮಾನ್ಯ ಸಭೆ
26th Annual General Meeting of Durgamata Credit Souharda Sahakari Sangha
ಲೋಕದರ್ಶನ ವರದಿ
ಸಂಕೇಶ್ವರ ೨೪ : ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ೨೬ ನೇ ವಾರ್ಷಿಕ ಸಾಮಾನ್ಯ ಸಭೆಯು ಆಝಾದ ರೋಡದಲ್ಲಿರುವ ಸಹಕಾರಿಯ ಸ್ವಂತ ಮಾಲ್ಕೀಯ ಕಟ್ಟಡದ ಕಾರ್ಯಾಲಯದಲ್ಲಿ ಸಹಕಾರಿಯ ಅಧ್ಯಕ್ಷರಾದ ರಾಜೇಂದ್ರ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿತು.
ಸಭೆಯಲ್ಲಿ ಹಿಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಗಿಕರಿಸಿದ ಠರಾವುಗಳನ್ನು ಓದಿ ಸರ್ವಾನುಮತದಿಂದ ದೃಢೀಕರಿಸಲಾಯಿತು, ಸನ್ ೨೦೨೫-೨೬ ನೇ ಸಾಲಿನ ಲಾಭ ಹಾನಿ ಹಾಗೂ ಅಢಾವೆ ಪತ್ರಿಕೆಗಳನ್ನು ಓದಿ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು, ಸಹಕಾರಿಯ ೨೦೨೬-೨೭ ನೇ ಸಾಲಿಗಾಗಿ ಆಡಳಿತ ಮಂಡಳಿಯು ತಯಾರಿಸಿದ ಅಂದಾಜು ಪತ್ರಿಕೆ ಮತ್ತು ಸಹಕಾರಿ ಇಲಾಖೆಯಿಂದ ದಾಖಲಿಸಿದ ದಾವಾ ಪಂಚಾಯತ ಕೇಸ ಕುರಿತು ಚರ್ಚಿಸಲಾಯಿತು ಮತ್ತು ನಿರ್ದೇಶಕರಿಗೆ ಮತ್ತು ಅವರ ಸಂಬAಧಿಕರಿಗೆ ನೀಡಿದ ಸಾಲಗಳು ಮತ್ತು ಮುಂಗಡಗಳು ಮತ್ತು ಸುಸ್ತಿ ಸಾಲಗಳು ಯಾವುದಾದರೂ ಇದ್ದಲ್ಲಿ ಅವುಗಳ ಪರೀಶಿಲನೆ ಹಾಗೂ ಸುಸ್ತಿ ಸಾಲಗಳ ವಸೂಲಾತಿಗೆ ಕ್ರಮ ಕೊಳ್ಳುವ ಬಗ್ಗೆ ಸಂಘದ ಸದಸ್ಯರಿಂದ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷರು ರಾಜೇಂದ್ರ ಪಾಟೀಲರು ಮಾತನಾಡುತ್ತಾ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಸಹಕಾರಿಯು ೨೫ ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬಕ್ಕೆ ದಾಪುಗಾಲು ಹಾಕುರಿತ್ತಿರುವುದು ತುಂಬ ಹೆಮ್ಮೆಯ ವಿಷಯವಾಗಿದೆ ಎಂದು ಸದಸ್ಯರಿಗೆ ತಿಳಿಸಿದಲ್ಲದೇ ಮುಂದುವರೆದು ಮಾತನಾಡುತ್ತಾ ಸಾಲ ಪಡೆಯುತ್ತಿರುವವರಿಗೆ ಸದಸ್ಯರು ಜಾಮೀನು ನೀಡಬೇಕು ಪರಸ್ಪರ ಸಹಕಾರದಿಂದ ಸಂಸ್ಥೆಗಳು ಬೆಳೆಯುತ್ತಿವೆ, ಆದರೆ ಕೆಲವು ಸದಸ್ಯರು ಸಾಲದ ಮರುಪಾವತಿ ಮಾಡದೇ ಇರುವುದು ದುರದುಷ್ಟಕರ ಬೆಳವಣಿಗೆ ಹೇಳಿದಲ್ಲದೇ ಜಾಮೀನದಾರರು ಸಾಲ ಪಡೆದುಕೊಂಡವರಿಗೆ ಜಾಮೀನುವಾಗುವುದು ಸಾಲ ಪಡೆದುಕೊಂಡವರಷ್ಟೆ ಅವರ ಜವಾಬ್ದಾರಿ ಆಗಿರುತ್ತದೆ.
ಆದ ಕಾರಣ ಸದಸ್ಯರು ಸಾಲಗಾರನಿಗೆ ಜಾಮೀನು ಆಗುವುದು ಸಾಲಗಾರನ ಸಾಮರ್ಥ್ಯದ ಬಗ್ಗೆ ಅಳೆದು ತೂಗಿ ವಿಚಾರ ಮಾಡಿ ಜಾಮೀನು ಮಾಡಬೇಕೆಂದು ಸದಸ್ಯರಲ್ಲಿ ರಾಜೇಂದ್ರ ಪಾಟೀಲರು ಮನವಿ ಮಾಡಿಕೊಂಡರು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ಬಸವರಾಜ ಬಾಗಲಕೋಟಿ, ಸಂಜಯ ಶಿರಕೋಳಿ, ಅರವಿಂದ ಕೇಸ್ತಿ, ಮಹೇಶ ಮೆಹತಾ, ಮಾರ್ತಂಡ ಗೋಟುರಿ, ರಘುನಾಥ ಬೋಂಗಾಳೆ, ನೀಲಾದೇವಿ ಕಮತಗಿ, ಸಂಜಯ ನಾಯಿಕ, ಮಧುಕರ ಕಾಂಬಳೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಲ್ಲಪ್ಪಾ ಶೇಗುಣಶಿ ಇವರು ಸಂಘದ ವರದಿ ವಾಚನ ಓದಿ ಸದಸ್ಯರಿಗೆ ತಿಳಿಸಿದರು, ದುಂಡಪ್ಪಾ ಸಂಸುದ್ದಿ, ಶೋಭಾ ಕರ್ದೇಗೌಡಾ, ಸಚೀನ ಸಂಸುದ್ದಿ, ಸುನೀಲ ಸಂಗಾಯಿ, ಬಿನಾ ವಂಟಮೂರಿ, ಬಸವರಾಜ ಹಂಜಾನಟ್ಟಿ, ಲತಾ ಸಮ್ಮತಶೆಟ್ಟಿ, ದುರದುಂಡಿ ಫಡಿ, ಈ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಮರ ನಲವಡೆ, ಆನಂದ ಶಿರಕೋಳಿ, ಅಭಿಜೀತ ಕುರಣಕರ, ಹಾಗೂ ಮುಂತಾದವರು ಉಪಸ್ಥಿತರಿದ್ದರು. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೪೫೧೨೯೦೨.೮೨ ಲಾಭ ಗಳಿಸಿದೆ, ಸಂಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಇವರಿಂದ ಸಂಘದ ಸದಸ್ಯರಿಗೆ ಕೆಲವೊಂದು ಗೃಹ ಬಳಕೆಯ ವಸ್ತುಗಳನ್ನು ನೀಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 