ಈ ಕ್ಷೇತ್ರಕ್ಕೆ ನ್ಯಾಯ ನೀಡುತ್ತೇವೆ : ಸಚಿವ ಜಮೀರ ಅಹ್ಮದ

We will give justice to this constituency: Minister Jameer Ahmad

ಶಿಗ್ಗಾವಿ 01: ಮಾಜಿ ಶಾಸಕ ಖಾದ್ರಿಯವರ ಸಹಕಾರದೊಂದಿಗೆ, ನಮ್ಮ ಸರ್ಕಾರ ಜನಪರ ಆಡಳಿತ ಮತ್ತು ಬಡವರ ಪರವಾದ ಗ್ಯಾರಂಟಿ ಯೋಜನೆಗಳು ಮತ್ತು ಕ್ಷೇತ್ರದ ಜನತೆ ಬೆಂಬಲ ನೀಡಿ ಯಾಸೀರಖಾನ ಪಠಾಣ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದು ಈ ಕ್ಷೇತ್ರಕ್ಕೆ ನ್ಯಾಯ ನೀಡುತ್ತೇವೆ ಎಂದು ಸಚಿವ ಜಮೀರ ಅಹ್ಮದ ಹೇಳಿದರು. 

ತಾಲೂಕಿನ ಹುಲಗೂರಿನಲ್ಲಿ ಅಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನತೆಯ ಕಣ್ಣು ಶಿಗ್ಗಾವಿ ಉಪ ಚುನಾವಣೆಯ ಮೇಲೆ ಇತ್ತು, ರಾಜ್ಯ ಬಿಜೆಪಿ ನಾಯಕರು ಈ ಕ್ಷೇತ್ರದ ಗೆಲುವಿನ ನೀರೀಕ್ಷೆಯಲ್ಲಿದ್ದರು. ಈ ಕ್ಷೇತ್ರದ ಜನತೆಯ ಆಶೀರ್ವಾದದೊಂದಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಲವಾರು ಅಧಿಕಾರ ಸಿಕ್ಕು, ಮುಖ್ಯಮಂತ್ರಿಗಳಾಗುವ ಯೋಗ ವಲಿದು ಬಂದಿದ್ದರೂ ಅಭಿವೃದ್ಧಿ ಕಾರ್ಯ ಮಾಡದ ಹಿನ್ನೆಲೆಯಲ್ಲಿ, ಈ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದರು.  

ಅಜ್ಜಂಪೀರ ಖಾದ್ರಿಯವರು ಸರ್ವ ಸಮಾಜದ ನಾಯಕನಾಗಿದ್ದು ಎಲ್ಲಾ ಧರ್ಮದವರನ್ನು ಅಪ್ಪಿಕೊಳ್ಳುವ ಮೂಲಕ ಈ ಶರಣರ ನಾಡಿನಲ್ಲಿ ಭಾವೈಕ್ಯತೆ ಸಂದೇಶವನ್ನು ಪಾಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ಕ್ಷೇತ್ರದ ಉಪಚುನಾವಣೆಗೆ ಬಂದಾಗ ಅವರ ಶಕ್ತಿಯ ಅನಾವರಣವನ್ನು ಕಂಡು ಬೆರಗಾಗಿದ್ದರು. ಈ ಎಲ್ಲಾ ಕಾರಣಗಳಿಂದ  ಖಾದ್ರಿಯವರನ್ನು ರಾಜ್ಯನಾಯಕರನ್ನಾಗಿ ಬೆಳಸುವ ತೀರ್ಮಾ ಮಾಡಿ ಕ್ಯಾಭಿನೇಟ ದರ್ಜೆಯ ಹುದ್ದೆ ನೀಡುವ ಮೂಲಕ ಈ ಭಾಗದಲ್ಲಿ ಪ್ರಭಲ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದರು. 

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ, ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಲು ಸುಮಾರು 20 ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೆ, ಈ ಬಾರಿ ಪಕ್ಷದ ಮುಖಂಡು, ಕಾರ್ಯಕರ್ತರು ಗಟ್ಟಿಯಾಗಿ ನಿಂತು ಬಹಳ ವರ್ಷಗಳ ಕನಸನ್ನು ನಸಾಗಿಸಿದ್ದಾರೆ. ಇದು ಕಾರ್ಯಕರ್ತರ ಗೆಲುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಾ ಮತ್ತು ಪಕ್ಷದ ವರಿಷ್ಟ ನಾಯಕರ ಜನಪರ ಆಡಳಿತಕ್ಕೆ ಸಿಕ್ಕ ಜಯವಾಗಿದೆ ಎಂದರು. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ನಸೀರ ಅಹ್ಮದ, ಸೋಮಣ್ಣಾ ಬೇವಿನ ಮರದ, ಪ್ರೇಮಾ ಪಾಟೀಲ, ಭಸನಗೌಡಾ ಪಾಟೀಲ, ಮಂಜುನಾಥ ತಿಮ್ಮಾಪುರ, ವಸಂತಾ ಬಾಗೂರ ಸೇರಿದಂತೆ ಇತರರಿದ್ದರು.