ನವದೆಹಲಿ, ನ.2: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ನೀಡಿರುವ ಪ್ರದರ್ಶನವನ್ನು ಮುಂದುವರೆಸುತ್ತೇವೆ ಎಂದು
ರೋಹಿತ್ ಶರ್ಮಾ ತಿಳಿಸಿದ್ದಾರೆ.
ಬಾಂಗ್ಲಾ ದೇಶದ ವಿರುದ್ಧ
ಭಾರತ ಇಲ್ಲಿನ ಅರುಣ್ ಜೇಟ್ಲಿ ಅಂಗಳದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ಅವರು
ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
“ನನ್ನ ಮುಂದಿನ ಗುರಿ
ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ಮಾಡಿರುವ ಒಳ್ಳೆಯ ಕಾರ್ಯವನ್ನು ಮುನ್ನಡೆಸುವೆ. ಸಿಕ್ಕ ಅವಕಾಶವನ್ನು
ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡಿದ್ದೇನೆ. ವಿರಾಟ್ ಮಾಡಿರುವ ಕಾರ್ಯ ವನ್ನು ಮುಂದುವರೆಸುವೆ.” ಎಂದು
ರೋಹಿತ್ ತಿಳಿಸಿದ್ದಾರೆ.
“ಬಾಂಗ್ಲಾದೇಶ ಒಳ್ಳೆಯ
ತಂಡ. ಎದುರಾಳಿ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆ ತಂಡದಲ್ಲಿ ಶಕೀಬ್ ಹಾಗೂ ತಮೀಮ್ ಅನುಪಸ್ಥಿತರಾಗಿದ್ದಾರೆ.
ಆದರೂ ಅವರ ತಂಡದಲ್ಲಿ ಸ್ಥಿರತೆ ಇದೆ ಎಂದಿದ್ದಾರೆ..
“ನಾವು ಬಾಂಗ್ಲಾ ವಿರುದ್ಧ
ಉತ್ತಮ ಗುರಿ ನೀಡುವ ಯೋಜನೆ ಹೆಣೆದುಕೊಳ್ಳಲಾಗಿದೆ. ರಿಷಭ್ ಪಂತ್ ಅವರಿಗೆ ಅವಕಾಶವನ್ನು ಕೊಡಲಾಗುವುದು.
ಅಲ್ಲದೆ ಟಿ-20 ಟೂರ್ನಿ ಅವರು ಭರ್ಜರಿ ಪ್ರದರ್ಶನ ನೀಡಬಲ್ಲರು. ಅವರಿಗೆ ಇನ್ನಷ್ಟು ಅವಕಾಶವನ್ನು ನೀಡುವ
ಬಗ್ಗೆ ಚಿಂತನೆ ನಡೆದಿದೆ ಎಂದು ರೋಹಿತ್ ತಿಳಿಸಿದ್ದಾರೆ.