ಫೆ.23 ರಂದು ನಿಮ್ಮೊಂದಿಗೆ ನಾವು ಕಾರ್ಯಕ್ರಮ : ವೆಂಕಟೇಶ ಬಡಿಗೇರ
ಕೊಪ್ಪಳ 21: ಕರ್ನಾಟಕ ಲಲಿತಕಲಾ ಅಕಾಡೆಮಿಯು ನಿಮ್ಮೊಂದಿಗೆ ನಾವು ಮಕ್ಕಳ ಚಿತ್ರಕಲಾ ಶಿಬಿರ, ಪ್ರಾತ್ಯಕ್ಷಿಕೆ ವಿಮರ್ಶೆ, ಪ್ರದರ್ಶನ ಕಾರ್ಯಕ್ರಮವನ್ನು ನಾಳೆ ದಿ. 23 ಬೆಳಗ್ಗೆ 10:30 ಕ್ಕೆ ಜಿಲ್ಲಾ ಆಡಳಿತ ಭವನ, ಕೊಪ್ಪಳದಲ್ಲಿ ಆಯೋಜಿಸಿದೆ ಎಂದು ಕರ್ನಾಟಕ ಲಲಿತ ಅಕಾಡೆಮಿ ಸದಸ್ಯ ಸಂಚಾಲಕ ವೆಂಕಟೇಶ್ ಬಡಿಗೇರ್ ಹೇಳಿದರು.ಅವರು ಶುಕ್ರವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಉದ್ಘಾಟನಾ ಸಮಾರಂಭದಲ್ಲಿ ಗೌರವ ಉಪಸ್ಥಿತಿಯನ್ನು ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಇವರು ಹಾಗೂ ಉದ್ಘಾಟಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನಿಮ್ಮೊಂದಿಗೆ ನಾವು" ಕಾರ್ಯಕ್ರಮದ ಉದ್ದೇಶ : ಇದು ಮಕ್ಕಳ ಕಾರ್ಯಕ್ರಮ, ಮಕ್ಕಳಲ್ಲಿ ಕಲೆಯ ಅರಿವು ಮೂಡಿಸುವುದು, ಹೊಸ ಆಯಾಮ, ಮಾಧ್ಯಮಗಳ ಪರಿಚಯ, ಕಲೆಯ ಬೆಳವಣಿಗೆ ಬಗ್ಗೆ, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸುವುದಾಗಿದೆ ಮತ್ತು ರಾಜು ತೇರದಾಳ ಕಲಾವಿದರಿಂದ ಪ್ರಾತ್ಯಕ್ಷಿಕೆ ಹಾಗೂ ತಿರುಪತಿ ಚಲವಾದಿ ಸಾಹಿತಿಗಳಿಂದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ವಿಮರ್ಶೆ ಮತ್ತು ಕಲಾಕೃತಿಗಳ ಪ್ರದರ್ಶನ ಹಾಗೂ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ್, ತಿರುಪತಿ ಚಲವಾದಿ ಉಪಸ್ಥಿತರಿದ್ದರು.