ಹಾನಗಲ್ ಶ್ರೀಗಳ ಜನ್ಮಸ್ಥಳದಲ್ಲಿ ಹುಟ್ಟಿರುವ ನಾವುಗಳೇ ಮಹಾಪುಣ್ಯವಂತರು

We who are born in Hanagal Shri's birth place are very blessed

ಹಾನಗಲ್ ಶ್ರೀಗಳ ಜನ್ಮಸ್ಥಳದಲ್ಲಿ ಹುಟ್ಟಿರುವ ನಾವುಗಳೇ ಮಹಾಪುಣ್ಯವಂತರು

ರಾಣೇಬೆನ್ನೂರ 03 :  ನಾಡಿನುದ್ದಕ್ಕೂ ಪವಾಡ ಪುರುಷರೆಂದೇ ಹೆಸರಾದ ಆಧ್ಯಾತ್ಮಿಕ ತತ್ವಜ್ಞಾನಿ, ಅಂಧಕಾರದ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದ  ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಜನಿಸಿದ ಈ ಜಿಲ್ಲೆಯಲ್ಲಿ ಜನಿಸಿದ ನಾವುಗಳು ಮಹಾಪುಣ್ಯವಂತರು ಎಂದು ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.       ತಾಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ  ಶ್ರೀ ಹಾನಗಲ್ಲ ಗುರುಕುಮಾರ ಶಿವಯೋಗಿಗಳವರ 158 ನೇ ಜಯಂತಿ ಮಹೋತ್ಸವ ಹಾಗೂ 5ನೇ ವರ್ಷದ ಮಹಾರಥೋತ್ಸವ ನಿಮಿತ್ಯ ಜರುಗಿದ ಶ್ರೀ ಕುಮಾರೇಶ್ವರ ಜೀವನ ದರ್ಶನ ಪ್ರವಚನ ಕುಮಾರೇಶ್ವರ ಜ್ಯೋತಿಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಮಠಾಧೀಶರು ಹೇಗಿರಬೇಕು ಎಂಬ ಚೌಕಟ್ಟನ್ನು ಹಾಕಿಕೊಟ್ಟ ಬ್ರಿಟಿಷರ ಕಾಲದಲ್ಲೇ ಮಹಿಳೆಯರಿಗೆ ಪ್ರತ್ಯೇಕ ಶಾಲೆ ತೆರೆದ ಆಧ್ಯಾತ್ಮಿಕ ಜೊತೆ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದ ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು ಈ ಜಗತ್ತಿಗೆ ನೀಡಿದ ಕೊಡುಗೆ ಅಪಾರ ಎಂದರು.  ರೈತ ಮುಖಂಡ ರವೀಂದ್ರಗೌಡ ಎಫ್ ಪಾಟೀಲ ಮಾತನಾಡಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವುದಕ್ಕಾಗಿ ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು  ತಾಲೂಕಿನ ಹನುಮನಹಳ್ಳಿ, ಮುದೇನೂರು, ಲಿಂಗದಹಳ್ಳಿ ಗ್ರಾಮಗಳಲ್ಲಿ ಸಂಚರಿಸಿದ ಬಗ್ಗೆ ಚರಿತ್ರೆಯಲ್ಲಿ ದಾಖಲಾಗಿದೆ . ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗಾಗಿ ಅಖಿಲ ಭಾರತ ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ರೂಪಿಸಿದವರು ಶಿವಯೋಗಿ ಶ್ರೀಗಳು.ಇವರ ಆದರ್ಶಗಳು ಇಂದಿಗೂ ಜೀವಂತವಾಗಿವೆ ಎಂದರು.     ಜಯಂತೋತ್ಸವ ಮತ್ತು ರಥೋತ್ಸವದ ಈ ಕಾರ್ಯಕ್ರಮದ ನಿಮಿತ್ಯ ನಿರಂತರ 45 ದಿನಗಳ ಕಾಲ ನಡೆಯುವ ಪ್ರವಚನ ಮತ್ತು ಶ್ರೀ ಕುಮಾರೇಶ್ವರ ಜ್ಯೋತಿ ರಥಯಾತ್ರೆಯು ತಾಲೂಕಿನ ಜೋಹಿಸರಹರಳಹಳ್ಳಿ, ಎರೇಕುಪ್ಪಿಯಿಂದ ತಿರುಮಲದೇವರಕೊಪ್ಪದವರೆಗೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು.   ಜ್ಯೋತಿರಥದ ಭವ್ಯವಾದ ಮೆರವಣಿಗೆಗೆ ಮಹಿಳೆಯರ ಆರತಿ, ಬಾಜಾ, ಡೊಳ್ಳು, ಭಜಂತ್ರಿ, ಸಮಾಳದೊಂದಿಗೆ ಹಾಗೂ ಪೂರ್ಣಕುಂಭಹೊತ್ತ ಸುಮಂಗಲಿಯರ ಭವ್ಯ ಸ್ವಾಗತದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.  ಆನಂತರ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರಿ​‍್ಡಸಿದ್ದ  ವೇದಿಕೆಗೆ ಕರೆತಂದು ಅಲ್ಲಿ5 ದಿನಗಳವರೆಗೆ ನಡೆಯಲಿರುವ ಶ್ರೀ ಕುಮಾರರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಪ್ರಾರಂಭಿಸಲಾಯಿತು.     ಗುರುಕುಮಾರರ ಜೀವನ ದರ್ಶನ ಪ್ರವಚನವನ್ನು ಬೆಳಗಾವಿ ಕಾರಂಜಿ ಮಠದ  ಡಾ. ಶಿವಯೋಗಿ ದೇವರು ನೆರವೇರಿಸಿಕೊಟ್ಟರು. ಹೊಳಲದ  ಚನ್ನಬಸವದೇವರು,  ಹೇಮರಡ್ಡಿ ದಬಲಪರ, ಗೋವಿಂದಪ್ಪ ಹಳ್ಳಿ, ಭೀಮಪ್ಪ ಕಗನಾಳ, ಚನ್ನಪ್ಪ ಗೌಡ್ರ, ನಾಗಯ್ಯ ಮಠದ, ರುದ್ರ​‍್ಪ ಹಾದಿಮನಿ, ರಂಗಪ್ಪ ಕಡ್ಲಿಗೊಂದಿ, ಗದಿಗೆಪ್ಪ ಬಣಕಾರ, ಹನುಮಂತಪ್ಪ ಸಾದರ, ಜಗದೀಶ ದಾಸರಡ್ಡಿ, ಸೋಮರಡ್ಡಿ ಮೈದೂರು, ರಂಗಪ್ಪ ಸಾದರ, ಕೃಣ್ಣಪ್ಪ ಗೌಡರ, ಸಿದ್ದಪ್ಪ ಸಾದರ ಮುಂತಾದವರು ಇದ್ದರು.ಊ3-ಖಓಖ03-ಓಇಘಖ. ಂಓಆ. ಕಊಓಖಿಓ.