ಖನಗಾಂವ್: ಪ್ರೌಢ ಶಾಲೆಯ 10 ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
ಬೆಳಗಾವಿ, 03 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ್ ಬಿ.ಕೆ ಗ್ರಾಮದಲ್ಲಿ ನೂತನ ಪ್ರೌಢಶಾಲೆಯ ಸುಮಾರು 10 ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಮುಖಂಡರು ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸುಮಾರು 1.22 ಕೋಟಿ ರೂ,ಗಳ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಇದೇ ಸಮಯದಲ್ಲಿ ಗುಣಮಟ್ಟದ ಕೊಠಡಿಗಳನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಬಸವರಾಜ ಬೆಕ್ಕಿನಕೇರಿ, ಬಸವರಾಜ ಬಂಗೆನ್ನವರ್, ಕರೆಪ್ಪ ಬಂಗೆನ್ನವರ, ಭೀಮಸೇನ ಚಚಡಿ, ಹನಮಂತ ಬಂಗೆನ್ನವರ್, ಎಸ್.ಐ ಮುರಾದಬಾದಿ, ಗ್ರಾಮ ಪಂಚಾಯತ್ ಸದಸ್ಯರಾದ ತುಕಾರಾಂ ಡಿಂಡಲಕೊಪ್ಪಿ, ಲಕ್ಷ್ಮೀ ಬಗನಾಳ, ವಿಠ್ಠಲ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.