ಗದಗ 03: ರಾಜ್ಯಕ್ಕೆ ಮಳೆ ಬೆಳೆ ಕೊರತೆಯಿಲ್ಲ. ಆದರೆ ರಾಷ್ಟ್ರದಲ್ಲಿ ಪ್ರಾಕೃತಿಕ ದೋಷಗಳು, ಹಿಮಪಾತ, ಭೂಕಂಪ, ಸುನಾಮಿಗಳಂತಹ ಘಟನೆಗಳು ನಡೆಯುತ್ತವೆ ಎಂದು ಗದಗದಲ್ಲಿ ಕೋಡಿಮಠದ ಶ್ರೀಗಳು ನುಡಿದಿದ್ದಾರೆ.
ಸೋಮವಾರ ಗದಗನಲ್ಲಿ ರಾಜಕೀಯ ಹಾಗೂ ಪ್ರಕೃತಿ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು, ಸಿಎಂ ಬದಲಾವಣೆ ವಿಷಯವಾಗಿ ನಾನು ವ್ಯಕ್ತಿಯೋಚಕ ಭವಿಷ್ಯವನ್ನು ನುಡಿಯುವುದಿಲ್ಲ. ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕ-ಬುಕ್ಕರು ಹಾಲು ಮತದ ಸಮಾಜಕ್ಕೆ ಸೇರಿದವರು. ಹಾಲುಮತದ ಅಧಿಕಾರದಿಂದ ಮರಳಿ ಅಧಿಕಾರ ಪಡೆಯುವುದು ಕಷ್ಟ ಎಂದರು. ಇಂದಿನ ರಾಜಕೀಯ ಚಿಂತನೆ ಭದ್ರವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ, ಎಲ್ಲವೂ ಯುಗಾದಿ ನಂತರ ತಿಳಿಯುವುದು ಎಂದರು.