ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನಿಸುತ್ತಿರುವುದನ್ನು ಬಲವಾಗಿ ಖಂಡಿಸುತ್ತೇವೆ: ಮಲ್ಲಣ್ಣ ತಂಗಡಗಿ

We strongly condemn the insult to Nadahalli's portrait: Mallanna Thangadgi

ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನಿಸುತ್ತಿರುವುದನ್ನು ಬಲವಾಗಿ ಖಂಡಿಸುತ್ತೇವೆ: ಮಲ್ಲಣ್ಣ ತಂಗಡಗಿ 

ಮುದ್ದೇಬಿಹಾಳ, 06:  ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಅವರು ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಹೇಳಿಕೆಗಳನ್ನು ಕೊಟ್ಟಿದ್ದರಿಂದ ಬಿಜೆಪಿ ಕೇಂದ್ರ ಸಿಸ್ತು ಸಮೀತಿಯವರು ಯತ್ನಾಳವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ ವಿನಃ ಇದರಲ್ಲಿ ಮಾಜಿ ಶಾಸಕ ಎಎಸ್ ಪಾಟೀಲ(ನಡಹಳ್ಳಿ)ಯವರ ಯಾವೂದೇ ಪಾತ್ರವಿಲ್ಲ. ಆದರೇ ಮತಕ್ಷೇತ್ರದ ಕೆಲವರು ಈ ಸಮಯವನ್ನು ಬಳಸಿಕೊಂಡು ಯಾವೂದು ತಪ್ಪು ಮಾಡದ ಪಕ್ಷದ ಶಿಸ್ತಿನಿ ಶಿಪಾಯಿ ನಡಹಳ್ಳಿಯವರ ಭಾವಚಿತ್ರಕ್ಕೆ ಅಪಮಾನಿಸುತ್ತಿರುವುದನ್ನು ಬಲವಾಗಿ ಖಂಡಿಸುತ್ತೇನೆ ಜತೆಗೆ ಮುಂದೆ ಎಲ್ಲೇ ಪ್ರತಿಭಟನೆಗಳನ್ನು ಕೈಗೊಂಡರು ನಡಹಳ್ಳಿಯವರಿಗೆ ಅಪಮಾನಿಸುವ ಕಾರ್ಯ ಮಾಡಿದರೇ ನಾವು ಕೂಡ ತದೇ ತರ  ಹೋರಾಟ ನಡೆಸುವ ಮೂಲಕ ತಕ್ಕ ಉತ್ತರ ಕೋಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ದಲಿತ ಮುಖಂಡ ಮಲ್ಲಣ್ಣ ತಂಗಡಗಿ ತಿರುಗೇಟು ನೀಡಿದ್ದಾರೆ. 

ಪಟ್ಟಣದ ಮಾಜಿ ಶಾಸಕ ಎಎಸ್ ಪಾಟೀಲ(ನಡಹಳ್ಳಿ)ಯವರ ದಾಸೋಹ ನಿಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯತ್ನಾಳವರನ್ನು ಪಕ್ಷಕ್ಕೆ ಪುನ ಸೇರೆ​‍್ಡಮಾಡಿಕೊಳ್ಳುವಂತೆ ಹೋರಾಟ ಮಾಡಲಿ ಆ ರೀತಿ ಹೋರಾಟಕ್ಕೆ ನಮ್ಮದೇನು ವಿರೋಧವಿಲ್ಲ. ಆದರೇ ಯತ್ನಾಳ ಅವರ ಬಗ್ಗೆ ಇದೊಂದು ಬಿಜೆಪಿ ಪಕ್ಷದ ಆಂತರಿಕ ವಿಷಯ ಅದನ್ನು ಪಂಚಮಸಾಲಿ ಸಮಾಜಕ್ಕೆ ಎಳೆದೊಯ್ಯುವುದು ಸರಿಯಲ್ಲ ಇದೇ ದಿ, 7ರಂದು ಯತ್ನಾಳ ಅವರ ಪರವಾಗಿ ಕೆಲ ಕಾಂಗ್ರೇಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆಯನ್ನು ಹಿಂಪಡೆದು ಪಕ್ಷದಲ್ಲಿರಿಸಿಕೊಳ್ಳಬೇಕೇಂದು ಆಗ್ರಹಿಸುವ ಬದಲು ಯತ್ನಾಳವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರೆ​‍್ಡಗೊಳ್ಳುವಂತೆ ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಲಿ ಬಿಜೆಪಿ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ಕಾಂಗ್ರೇಸ್ ಮುಖಂಡರಿಗಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. 

2013ರಲ್ಲಿ ಈ ಭಾಗದ ನಾಲತವಾಡ ಪ್ರತಿಷ್ಠಿತ ರಾಜಕೀಯ ಮನೆತನದ ವಿಮಲಾಬಾಯಿ ದೇಶಮುಖ ಅವರಗೆ ನಿಗದಿಗೊಂಡಿದ್ದ  ಜೆಡಿಎಸ್ ಟಿಕೆಟ್ ಪಂಚಮಸಾಲಿ ಸಮಾಜದಲ್ಲದವರಾದ ಪ್ರಭುಗೌಡ ದೇಸಾಯಿಯವರಿಗೆ ನೀಡಲಾಯಿತು. ಆಗ ಪಂಚಮಸಾಲಿ ಸಮಾಜ ಗಮನನಕ್ಕೆ ಬರಲಿಲ್ಲವೇರೀಡೀ ದೇಶದಲ್ಲಿಯೇ ಬಿಜೆಪಿ ಪಕ್ಷ ಸಿಸ್ತಿನ ಪಕ್ಷ ಪಕ್ಷಕ್ಕಿಂತ ಯಾರೂ ಕೂಡ ದೊಡ್ಡವರಲ್ಲಿ ಇದೇ ವಿಷಯವನ್ನೇ ಮಾಧ್ಯಮದವರು ಮಾಜಿ ಶಾಸಿಕ ಎ ಎಸ್ ಪಾಟೀಲ(ನಡಹಳ್ಳಿ)ಯವರನ್ನು ಪ್ರಶ್ನಿಸಿದ್ದಕ್ಕೆ ಉತ್ತರ ಕೊಟ್ಟಿದ್ದಾರೆ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ನಡಹಳ್ಳಿಯವರ ಮದ್ಯ ತಂದು ಅವರ ಸಾಮಾಜಿಕ ಸೇವೆ ಜನಬೆಂಬಲ ಸಹಿಸಿಕೊಳ್ಳದೇ ಅವರ ಘನತೆಗೆ ಚ್ಯುತಿ ತರಬೇಕೆನ್ನುವ ಉದ್ದೇಶದಿಂದ ಮತಕ್ಷೇತ್ರದಲ್ಲಿ ನಡಹಳ್ಳಿಯವರ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡೀಯೂರ​‍್ಪನವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ತುಳಿದು ಅಪಮಾನಿಸುವುದು ಯಾವ ನ್ಯಾಯ. 

ಈ ಮೊದಲಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಯಾವ ಕಾರ್ಯಕರ್ತರಿಗೂ ಒಳ್ಳೆಯದಾಗಿಲ್ಲ ಯಾವತ್ತಿಗೂ ತಾಲೂಕಿನ ಒಬ್ಬ ಕಾರ್ಯಕರ್ತರಿಗೂ ಮಾತನಾಡಿಸಿಲ್ಲ ಸಧ್ಯ ವಿಜಯಪುರ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿಯವರ ಸೌಮ್ಯ ಹಾಗೂ ಸರಳ ಸಜ್ಜನಕೆ ವ್ಯಕ್ತಿತ್ವವನ್ನು ಹೊಂದಿದ್ದಾರೆ  ಸಧ್ಯ ವಿಜಯಪುರ ಜಿಲ್ಲೆಯ ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚಾಗಿದೆ ಬಿಜೆಪಿ ಕಾರ್ಯಕರ್ತರು ಪುಃನ ಪಕ್ಷಕ್ಕೆ ಸೇರೆ​‍್ಡ ಮಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಗುರಲಿಂಗಪ್ಪ ಅಂಗಡಿಯವರ ಹಾಗೂ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ನೇತೃತ್ವದಲ್ಲಿ ಮುದ್ದೇಬಿಹಾಳ ಸೇರಿದಂತೆ ಜಿಲ್ಲೇಯಾದ್ಯಂತ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷದ ಶಕ್ತಿ ಹೆಚ್ಚಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು. 

ಈ ವೇಳೆ ಮುಖಂಡರಾದ ಮುನ್ನಾಧನಿ ನಾಡಗೌಡ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ದಲಿತ ಮುಖಂಡ ಹರೀಷ ನಾಟಿಕಾರ, ತಾಲೂಕಾ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಪರುಶುರಾಮ ನಾಲತವಾಡ, ಪ್ರೇಮಶಿಂಗ್ ಚವ್ಹಾಣ, ಗಿರಿಶಗೌಡ ಪಾಟೀಲ, ಏಕನಾಥ ಸೀತಿಮನಿ, ಗುರುಪಾದ ವಡ್ಡರ, ಸಂಜು ಬಾಗೇವಾಡಿ, ಲಕ್ಷ್ಮಣ ಬಿಜ್ಜೂರ, ಅಶೊಕ ಚಿನಿವಾರ, ಗೌರಮ್ಮ ಹುನಗುಂದ ಸೇರಿದಂತೆ ಹಲವರು ಇದ್ದರು.