ಲೋಕದರ್ಶನ ವರದಿ
ಕುಕನೂರ 25: ಸಮಾಜದಲ್ಲಿ ಎಲ್ಲಾರೊಂದಿಗೆ ಉತ್ತಮ ಸಂಬಂದದೊಂದಿಗೆ ನಮ್ಮ ನಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಾ ಧರ್ಮದ ಆಚರಣೆಯನ್ನ ಪಾಲಿಸುವುದು ಎಲ್ಲಾರ ಕರ್ತವ್ಯ ಎಂದು ಕುಕನೂರಿನ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಪಟ್ಟಣದ ಅನ್ನದಾನೀಶ್ವರ ಶಾಖಾಮಠ ಮತ್ತು ಅನ್ನದಾನೀಶ್ವರ ಲಿಂಗಾಧಾರಣ ಸಮಿತಿ ವತಿಯಿಂದ ಕುಕನೂರ ಪಟ್ಟಣದ ಕುಂತಳ ಮತ್ತು ವಿದ್ಯಾನಗರದಲ್ಲಿ ನಡೆದ 26ನೇ ದಿನದ ಮನೆ ಮನೆಗೆ ಲಿಂಗಧಾರಣ ರುದ್ರಾಕ್ಷೀಧಾರಣ ಮತ್ತು ಧರ್ಮ ಗುರುಗಳ ಭಾವಚಿತ್ರ ನೀಡುವ ಕಾರ್ಯದಲ್ಲಿ ನೇತೃತ್ವ ವಹಿಸಿ ಮಾತನಾಡುತ್ತಾ ನಾವು ಎಷ್ಟೇ ದೊಡ್ಡವರಾದರು ಧರ್ಮದ ಆಚರಣೆಯನ್ನ ಬಿಟ್ಟು ಬದುಕುಬಾರದು, ಸಂಸ್ಕಾರವಂತರಾದಗ ಮಾತ್ರ ಜನ ನಮ್ಮನ್ನ ಗೌರವಿಸಲು ಸಾಧ್ಯ, ಹಣದ ಶ್ರೀಮಂತಿಕೆಗಿಂತ ಸಂಸ್ಕಾರ ಶ್ರೀಮಂತಿಕೆ ಅತ್ಯಂತ್ಯ ಅವಶ್ಯ, ಕಾಯಕದೊಂದಿಗೆ ಧರ್ಮದ ಆಚಾರ ವಿಚಾರಗಳನ್ನ ಕಟ್ಟಿಕೊಂಡು ಬದುಕು ಸಾಗಿಸಬೇಕು ಎಂದರು.
ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಅಣ್ಣೀಗೇರಿ ವೀರಣ್ಣ ಮಾತನಾಡಿ ಪೂಜ್ಯರು ಮತ್ತು ಅನ್ನದಾನೀಶ್ವರ ಲಿಂಗದಾರಣ ಸಮಿತಿಯವರು ಮಾಡುತ್ತೀರುವ ಕಾರ್ಯ ಶ್ಲಾಘನೀಯವಾದದ್ದು ಇಂತಹ ಕಾರ್ಯಗಳಿಗೆ ಸಮಾಜದ ಎಲ್ಲಾ ಜನರ ಸಹಕಾರ ಅತ್ಯಂತ್ಯ ಅವಶ್ಯ, ನಾವೆಲ್ಲರು ಲಿಂಗಧರಿಸಿಕೊಂಡು ಧರ್ಮವಂತರಾಗಿ ಜೀವನ ನಡೆಸಬೇಕು, ನಮ್ಮ ಧರ್ಮದ ಎಲ್ಲಾ ಒಳಪಂಗಡಗಳು ಒಂದಾಗಿ ಹೊಗಬೇಕು ಅಂದಾಗ ಮಾತ್ರ ಸಮಾಜ ಸುಧಾರಣೆ ಸಾದ್ಯ, ಉಳ್ಳವರು ಇಂತಹ ಕಾರ್ಯಗಳಿಗೆ ಸಹಾಯ ಮಾಡಬೇಕು ಮತ್ತು ನಮ್ಮ ಸಮಾಜ ಧರ್ಮದ ಕಾರ್ಯಗಳಿಗೆ ಸದಾ ಜೊತೆಗಿರುತ್ತದೆ ಎಂದರು. ಕುಕನೂರಿನ ಪೂಜ್ಯರಿಗೆ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಅಣ್ಣೀಗೇರಿ ವೀರಣ್ಣ ತಮ್ಮ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು, ನಿರಂತರ 26ದಿನಗಳಲ್ಲಿ 3000 ಜನರಿಗೆ ಲಿಂಗದಾರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವುಕುಮಾರ ಸರಗಣಾಚಾರ್, ಸಂಗಮೇಶ ಕಲ್ಮಠ, ಜಗದೀಶಯ್ಯ ಕಳ್ಳಿಮಠ, ಶರಣಯ್ಯ ಕಂಬಾಳಿಮಠ, ಚಂದ್ರಯ್ಯ ಹಿರೇಮಠ, ಪ್ರಭು ಶಿವಶಿಂಪರ, ವಿನಾಯಕ ಸರಗಣಾಚಾರ, ಚಿನ್ನು ದ್ಯಾಂಪುರ, ಕುಮಾರಸ್ವಾಮಿ, ವಿನಾಯಕ ಯಾಳಗಿ, ಯೋಗೀಶ ಹಿರೇಮಠ, ಸಿದ್ದಣ್ಣ ಹಳ್ಳೂರು, ಬಸಪ್ಪ ಮಟ್ಟಿ, ಆನಂದ ಯತ್ನಟ್ಟಿ, ನಾಗಪ್ಪ ಬಂಗಿ ಮತ್ತು ಇತರರು ಇದ್ದರು.