ಕ್ರೀಡಾ ಪಟುಗಳಿಗೆ ಬೆಳಕಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು :ಗೀರಿಶ ಬಿರಾದಾರ

We should all work hard to bring sportspersons into the limelight: Girisha Biradara

ಕ್ರೀಡಾ ಪಟುಗಳಿಗೆ ಬೆಳಕಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು :ಗೀರಿಶ ಬಿರಾದಾರ 

ವಿಜಯಪುರ 11 : ವಿಜಯಪುರಜಿಲ್ಲೆಯ ಪ್ರತಿಭಾನ್ವಿತಕ್ರೀಡಾ ಪಟುಗಳಿಗೆ ಬೆಳಕಿಗೆ ಬರುವಂತಹ ಕೆಲಸ ಇಂದು ನಾವೆಲ್ಲರೂ ಮಾಡಬೇಕಾಗಿದೆಎಂದು ಮಹಾನಗರ ಪಾಲಿಕೆ ಸದಸ್ಯರಾದಗೀರಿಶ ಬಿರಾದಾರ ಹೇಳಿದರು.  

ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಅಥ್ಲೇಟಿಕ್ಸ್‌ ಸ್ಪೋಟ್ಸ್‌ ಕ್ಲಬ್ ವಿಜಯಪುರ ಜಿಲ್ಲಾ ಮಟ್ಟದ ಮುಕ್ತ 14, 17 ವಯೋಮಿತಿ ಬಾಲಕ ಬಾಲಕಿಯರ ಅಥ್ಲೇಟಿಕ್ಸ್‌ ಸ್ಪರ್ಧೆಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರೀಡೆ ವಿದ್ಯಾರ್ಥಿಗಳ ಬೆಳವಣಿಗೆ ಮೂಲ ಕಾರಣೀಭೂತವಾಗಿದೆ. ಕ್ರೀಡೆಯಿಂದ ದೈಹಿಕವಾಗಿ ಆರೋಗ್ಯಕರವಾಗಿ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ವಿಜಯಪುರ ಜಿಲ್ಲೆಯಿಂದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಹಾಗೂ ಅಂತರ್ ರಾಜ್ಯಮಟ್ಟದಲ್ಲಿ ತಮ್ಮದೇ ಯಾದಛಾಪು ಮೂಡಿಸುವಲ್ಲಿ ಶ್ರಮಿಸಬೇಕು. ಹಾಗೂ ವಿಜಯಪುರಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಇಂತಹಕ್ರೀಡಾಆಯೋಜನೆ ಕಾರ್ಯಕ್ರಮಗಳ ಮೂಲಕ ಬಡ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿರುವುದು ಸಂತಸದ ಸಂಗತಿಎಂದರು.  

ಮುಖ್ಯ ಅತಿಥಿಯಾಗಿ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದರಾಹ ಶೇಖರದೈವಾಡಿ ಮಾತನಾಡಿ, ಸರ್ಕಾರದಿಂದ ಕ್ರೀಡಾಪಟುಗಳಿಗಾಗಿ ಸಾಕಷ್ಟು ಯೋಜನೆಗಳು ಇವೆ ಅದರ ಸದುಪಯೋಗ ಇಂದಿನ ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಮೋಬೈಲ್‌ಲೋಕದಿಂದ ಹೊರ ಬಂದು ಕ್ರೀಡಾಂಗಣದಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಿ ನಮ್ಮ ಜಿಲ್ಲೆ ಯೂ ಯಾವುದಕ್ಕೂ ಕಮ್ಮಿಯಿಲ್ಲ ಎಂದು ತೋರಿಸಬೇಕೆಂದರು. 

ಸಮಾಜ ಸೇವಕರಾದ ಫಯಾಜಕಲಾದಗಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಚಿದಾನಂದ ಅವಟಿ, ಎಲ್‌.ಬಿ. ಪಾಟೀಲ, ಡಿ.ಜಿ.ಮುಲ್ಲಾ, ಸುನಂದ ನುಚ್ಚಿ, ಐ.ಸಿ.ಪಠಾಣ, ಸಂತೋಷ ರಾಠೋಡ, ಮುಸ್ತಾಕ ಹಾದಿಮನಿ, ಮೊಹ್ಮದ ಇರ್ಫಾನ್ ಹಿಟ್ನಳ್ಳಿ, ಗೋಪಾಲ ಲಮಾಣಿ, ಸಚೀನರಾಠೋಡ ವೇದಿಕೆ ಮೇಲಿದ್ದರು. 

ಕಾರ್ಯಕ್ರಮದಲ್ಲಿ ಅಮೀತ ತಳವಾರ, ಶ್ರೀಧರ ರಾಠೋಡ,ಈರಯ್ಯ ಲಕ್ಕುಂಡಿಮಠ, ಶ್ರವಣಚವ್ಹಾಣ, ದಾನಯ್ಯ ಮಠಪತಿ, ಬಸವರಾಜ ನಾಗೋಡ, ಸೃಷ್ಠಿ ಹನಮಗೊಂಡ, ಲಕ್ಷ್ಮೀಕಮತಗಿ, ರಕ್ಷಿತ ಭಾವುಚಿ, ಮಲ್ಲಿಕಾರ್ಜುನ ಪೂಜಾರಿ, ಸುನೀಲ ಗಳವೆ, ಮಹಾದೇವಗೌರವ, ಯಶವಂತ, ತಶ್ಲೀನ ತಗ್ಗಿನಮನಿ, ಸಂದೀಪ ರಾಠೋಡ ಮುಂತಾದಇನ್ನಿತರಕ್ರೀಡಾ ಪಟುಗಳಿದ್ದರು.  

ಶ್ರೀಧರ ಜೋಶಿ ನಿರೂಪಿಸಿರು.ಗಣೇಶ ಭೋಸಲೆ ವಂದಿಸಿದರು.