ಕ್ರೀಡಾಪಟುಗಳನ್ನು ಬೆಳಕಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು: ಗೀರೀಶ ಬಿರಾದಾರ
ವಿಜಯಪುರ 10: ವಿಜಯಪುರ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾ ಪಟುಗಳನ್ನು ಬೆಳಕಿಗೆ ತರುವಂತಹ ಕೆಲಸ ಇಂದು ನಾವೆಲ್ಲರೂ ಮಾಡಬೇಕಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಗೀರೀಶ ಬಿರಾದಾರ ಹೇಳಿದರು.
ಅವರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯಪುರ ಅಥ್ಲೇಟಿಕ್ಸ್ ಸ್ಪೋಟ್ಸ್ ಕ್ಲಬ್ ವಿಜಯಪುರ ಜಿಲ್ಲಾ ಮಟ್ಟದ ಮುಕ್ತ 14, 17 ವಯೋಮಿತಿ ಬಾಲಕ ಬಾಲಕಿಯರ ಅಥ್ಲೇಟಿಕ್ಸ್ ಸ್ಪರ್ಧೆಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ರೀಡೆ ವಿದ್ಯಾರ್ಥಿಗಳ ಬೆಳವಣಿಗೆ ಮೂಲ ಕಾರಣೀಭೂತವಾಗಿದೆ. ಕ್ರೀಡೆಯಿಂದ ದೈಹಿಕವಾಗಿ ಆರೋಗ್ಯಕರವಾಗಿ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ವಿಜಯಪುರ ಜಿಲ್ಲೆಯಿಂದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಹಾಗೂ ಅಂತರ್‌ರಾಜ್ಯಮಟ್ಟದಲ್ಲಿ ತಮ್ಮದೇಯಾದ ಛಾಪು ಮೂಡಿಸುವಲ್ಲಿ ಶ್ರಮಿಸಬೇಕು. ಹಾಗೂ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಇಂತಹ ಕ್ರೀಡಾ ಆಯೋಜನೆ ಕಾರ್ಯಕ್ರಮಗಳ ಮೂಲಕ ಬಡ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿರುವುದು ಸಂತಸದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಹಶೇಖರ ದೈವಾಡಿ ಮಾತನಾಡಿ, ಸರ್ಕಾರದಿಂದ ಕ್ರೀಡಾಪಟುಗಳಿಗಾಗಿ ಸಾಕಷ್ಟು ಯೋಜನೆಗಳು ಇವೆ ಅದರ ಸದುಪಯೋಗ ಇಂದಿನ ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಮೋಬೈಲ್‌ಲೋಕದಿಂದ ಹೊರ ಬಂದು ಕ್ರೀಡಾಂಗಣದಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಿ ನಮ್ಮ ಜಿಲ್ಲೆಯೂ ಯಾವುದಕ್ಕೂ ಕಮ್ಮಿಯಿಲ್ಲ ಎಂದು ತೋರಿಸಬೇಕೆಂದರು.
ಸಮಾಜ ಸೇವಕರಾದ ಫಯಾಜ ಕಲಾದಗಿ ಮಾತನಾಡಿದರು. ಚಿದಾನಂದ ಅವಟಿ, ಎಲ್.ಬಿ. ಪಾಟೀಲ, ಡಿ.ಜಿ.ಮುಲ್ಲಾ, ಸುನಂದ ನುಚ್ಚಿ, ಐ.ಸಿ.ಪಠಾಣ, ಸಂತೋಷ ರಾಠೋಡ, ಮುಸ್ತಾಕ ಹಾದಿಮನಿ, ಮೊಹ್ಮದ ಇರ್ಫಾನ್ ಹಿಟ್ನಳ್ಳಿ, ಗೋಪಾಲ ಲಮಾಣಿ, ಸಚೀನ ರಾಠೋಡ ವೇದಿಕೆ ಮೇಲಿದ್ದರು.
ಅಮೀತ ತಳವಾರ, ಶ್ರೀಧರ ರಾಠೋಡ, ಈರಯ್ಯ ಲಕ್ಕುಂಡಿಮಠ, ಶ್ರವಣ ಚವ್ಹಾಣ, ದಾನಯ್ಯ ಮಠಪತಿ, ಬಸವರಾಜ ನಾಗೋಡ, ಸೃಷ್ಠಿ ಹನಮಗೊಂಡ, ಲಕ್ಷ್ಮೀ ಕಮತಗಿ, ರಕ್ಷಿತ ಭಾವುಚಿ, ಮಲ್ಲಿಕಾರ್ಜುನ ಪೂಜಾರಿ, ಸುನೀಲ ಗಳವೆ, ಮಹಾದೇವ ಗೌರವ, ಯಶವಂತ, ತಶ್ಲೀನ ತಗ್ಗಿನಮನಿ, ಸಂದೀಪ ರಾಠೋಡ ಮುಂತಾದ ಇನ್ನಿತರ ಕ್ರೀಡಾ ಪಟುಗಳಿದ್ದರು. ಶ್ರೀಧರ ಜೋಶಿ ನಿರೂಪಿಸಿರು. ಗಣೇಶ ಭೋಸಲೆ ವಂದಿಸಿದರು.