ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು: ಡಾ. ಸುಶೀಲ್ ಕಲಾಲ್

ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು: ಡಾ. ಸುಶೀಲ್  ಕಲಾಲ್ We should all resolve to build an equal society: Dr. Sushil Kalal

ಕೊಪ್ಪಳ 16 :ಮಹನಿಯರತ್ಯಾಗ ಬಲಿದಾನ, ದೂರದೃಷ್ಟಿಯ ಫಲವಾಗಿ ನಮಗೆ  ಇಂದು ಸ್ವಾತಂತ್ರ್ಯ ಸಿಕ್ಕಿದೆ, ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ನಿರ್ಮಾಣವಾಗಲು ನಾವುಗಳು ಸೇರಿಒಗ್ಗೂಡಿ ಸಂಕಲ್ಪ ಮಾಡಬೇಕು ಎಂದು ಕೊಪ್ಪಳ ಸದ್ಭಾವನಾ ವೇದಿಕೆಯಅಧ್ಯಕ್ಷಡಾ, ಸುಶೀಲ್ ಕುಮಾರ್‌ಕಲಾಲ್ ಹೇಳಿದರು.

ಅವರು 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಸಂಜೆ ಕೊಪ್ಪಳದಲ್ಲಿ ಸದ್ಭಾವನಾ ವೇದಿಕೆ ವತಿಯಿಂದ ಏರಿ​‍್ಡಸಿದ ಸ್ವಾತಂತ್ರ ಭಾರತದ ಪ್ರಜೆ ಎಂಬ ನೆಲೆಯಲ್ಲಿ ನನ್ನ ಹೊಣೆಗಾರಿಕೆಗಳು ಎಂಬ ವಿಷಯದ ಬಗ್ಗೆ ಜರುಗಿದ ಚರ್ಚಾಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಾತಿಧರ್ಮ ಭೇದ ಭಾವ ಮಾಡದೆಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳಬೇಕು ನಾಡಿನಲ್ಲಿ ಶಾಂತಿ ನೆಲೆಸಬೇಕು ಒಗ್ಗೂಡಿ ಬಾಳಬೇಕು, ಸಮಾಜಮುಖಿ ಹಕ್ಕುಗಳು ಮತ್ತು ನಮ್ಮಕರ್ತವ್ಯಅರಿತು ಈ ನಾಡುಕಟ್ಟಬೇಕಾಗಿದೆ ,ತ್ಯಾಗ ಬಲಿದಾನಕ್ಕೆಅರ್ಥ ಬರಬೇಕೆಂದರೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳ ಪಾಲನೆಯಿಂದ ಮಾತ್ರಅದು ಸಾಧ್ಯವಾಗಲಿದೆಎಂದು ಹೇಳಿದ ಅವರು ನಮ್ಮ ಸದ್ಭಾವನಾ ವೇದಿಕೆ ವತಿಯಿಂದಇಂತಹಅರ್ಥಪೂರ್ಣಕಾರ್ಯಕ್ರಮಆಯೋಜಿಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಕೊಪ್ಪಳ ಸದ್ಭಾವನಾ ವೇದಿಕೆ ಅಧ್ಯಕ್ಷರಾದಡಾ. ಸುಶೀಲ್ ಕುಮಾರ್‌ಕಲಾಲ್ ಅಭಿನಂದಿಸಿದರು,  ಚರ್ಚಾಕೂಟದಆರಂಭದಲ್ಲಿ  ಸಾಹಿತಿ ಹಾಗೂ ಪತ್ರಕರ್ತಜಿಎಸ್ ಗೋನಾಳ್ ರವರು ಮಾತನಾಡಿದೇಶದ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವತಂತ್ರತಂದುಕೊಟ್ಟ ಮಹಾನ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬದುಕು ನಾವು ಕಟ್ಟಿಕೊಳ್ಳಬೇಕು ಎಂದರು,  ಗಣ್ಯರಾದ ಶಾಂತರಾಜ್‌ರವರು ಮಾತನಾಡಿ ಪ್ರತಿಯೊಬ್ಬ ಮನುಷ್ಯತನ್ನ ಕರ್ತವ್ಯಗಳನ್ನು ಪ್ರಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ  ಸ್ವತಂತ್ರ ಬಲ ಗೊಳ್ಳುತ್ತದೆ ,ಅನೇಕ ಜನ ಮಹನೀಯರತ್ಯಾಗ ಬಲಿದಾನ ದಿಂದ ಸಿಕ್ಕಿರುವ ಈ ಸ್ವತಂತ್ರ ವನ್ನು ದಿನಾಚರಣೆಯಲ್ಲಿ ಸ್ಮರಣೆ ಮಾಡುವುದು ನಮ್ಮೆಲ್ಲರಕರ್ತವ್ಯವಾಗಿದೆಎಂದರು.

ಹೋರಾಟಗಾರರಾದ ಡಿ ಎಚ್ ಪೂಜಾರ್ ,ಈಶ್ವರ್  ಕೊರ್ಲಳ್ಳಿ, ಹಿರಿಯ ಪತ್ರಕರ್ತ ಸಾಧಿಕ್ ಅಲಿ, ನಾಮದೇವಜಕಲಿ, ಫಹಿಮುದ್ದೀನ್ ಮತ್ತು ನ್ಯಾಯವಾದಿ ಅಮರೇಶ್ ಭೀಮನಗೌಡ ಪಾಟೀಲ್ ಮತ್ತಿತರರುತಮ್ಮ ವಿಚಾರ ಮಂಡನೆ ಮಾಡಿದರು, ವೇದಿಕೆಯ ಸದಸ್ಯತಾಜುದ್ದೀನ್‌ರವರುಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿದರೆ ವೇದಿಕೆಯ ಕಾರ್ಯದರ್ಶಿ ಸೈಯದ್ ಹಿದಾಯತ್ ಅಲಿ ರವರುಕೊನೆಯಲ್ಲಿ ವಂದಿಸಿದರು.