ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಒತ್ತು ನೀಡಬೇಕು : ಸಿದ್ನಾಳ

ಲೋಕದರ್ಶನ ವರದಿ

ಬೆಳಗಾವಿ 17:  ಕನ್ನಡ ಹೋರಾಟಗಾರರೆಂದು ಹೊಗಳಿಸಿಕೊಳ್ಳುವ ಅನೇಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಒತ್ತು ನೀಡಬೇಕೆಂದು ಹೇಳಿದರು.

ಕಿತ್ತೂರ ರಾಣಿ ಚನ್ನಮ್ಮ ಸಾಹಿತ್ಯ ಸಾಂಸ್ಕೃತಿಕ ಸಂಘ ಬೆಳಗಾವಿ ಕನರ್ಾಟಕ ಸಮೂಹ ಮಾಧ್ಯಮ ವೇದಿಕೆ ಹಾಗೂ ಹಸಿರುಕ್ರಾಂತಿ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ನಾಡಹಬ್ಬ ಉತ್ಸವ 2018 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವರು ಫಲಕಗಳ ಬಗ್ಗೆ ಹೋರಾಡುತ್ತಾರೆ. ಆದರೆ ಫಲಕಗಳಲ್ಲಿ ಕನ್ನಡವಿಲ್ಲ. ಕೇವಲ ಭಾಷಣ, ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗದೇ ಕನ್ನಡ ಬೆಳೆಸುವ ಕುರಿತು ಒತ್ತು ನೀಡಬೇಕೆಂದು ಅವರು ಹೇಳಿದರು.

    ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿಯರು ವಿದೇಶದಲ್ಲಿ ಸ್ಥಳೀಯ ಭಾಷೆ ಬಳಸಿದ್ದರೆ ಇಷ್ಟು ಜನಪ್ರಿಯತೆ ಗಳಿಸುತ್ತಿರಲಿಲ್ಲ. ಅವರು ಇಂಗ್ಲೀಷ ಬಳಸಿದ್ದಕ್ಕೆ ಎಲ್ಲ ಕಡೆಗೂ ಖ್ಯಾತಿ ಗಳಿಸಿದರು. ಕನ್ನಡಿಗರು ಸಂದರ್ಭಕ್ಕೆ ತಕ್ಕಂತೆ ಬೇರೆ ಭಾಷೆ ಬೆಳೆಸಿದರೂ ಕನ್ನಡ ಮೂಲ ಭಾಷೆ ಎನ್ನುವದನ್ನು ಮರೆಯಬಾರದು ಎಂದು ಅವರು ಹೇಳಿದರು.

    ನಿವೃತ್ ಪ್ರಾಂಶುಪಾಲರಾದ ಡಾ. ಎಸ್.ಎಲ್.ಕುಲಕಣರ್ಿಯವರು 'ಆಧುನಿಕ ಕವಿ ಕಂಡ ಕನ್ನಡ ನಾಡು' ಕುರಿತು ಉಪನ್ಯಾಸ ನೀಡಿದ ಅವರು, ವಿಜಯ ನಗರ ಕಾಲದಿಂದ ನಾಡ ಹಬ್ಬ ಆಚರಿಸುತ್ತ ಬಂದಿದ್ದೆವೆ. ಇದರ ಉದ್ದೇಶ ಜನರಲ್ಲಿ ಕನ್ನಡದ ಪ್ರಜ್ಞೆ ಬೆಳೆಸುವದಾಗಿದೆ. ಬರೆ ಹೇಳಿಕೆಗೆ ಸಿಮಿತರಾಗದೆ ನಾಯಕರಿಂದ ಕನ್ನಡದ ಬಗ್ಗೆ ಪ್ರಾಮಾಣಿಕ ಪ್ರಯತ್ನವಾಗಬೇಕು ಎಂದರು.

ಆಧುನಿಕ ಕವಿಗಳೂ ಕೂಡ ಕನರ್ಾಟಕದ ಬಗ್ಗೆ, ಕನ್ನಡದ ಬಗ್ಗೆ ಬಹಳ ವಿಷೇಶ ಮಾತುಗಳನ್ನು ಹೇಳಿದ್ದಾರೆ. ಇದನ್ನು ನಾವು ಅವರ ಹಾಡು - ಬರಹಗಳಲ್ಲಿ ಕಾಣಬಹುದಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾರುತಿ ಅಷ್ಟಗಿ ಮಾತನಾಡಿ ಕನರ್ಾಟಕ ಏಕೀಕರಣ ಸುಖಾ ಸುಮ್ಮನ್ನೆ ಸಿಕ್ಕಿದ್ದಲ್ಲ, ಇದಕ್ಕೆ ಅನೇಕರ ತ್ಯಾಗ ಬಲಿದಾನವಿದೆ ಎಂದರು. ಆದರೆ ದಕ್ಷಿಣ ಕನರ್ಾಟಕದಲ್ಲಿ ನಡೆಯುವ ಹಬ್ಬ- ಕಾರ್ಯಕ್ರಮಗಳಿಗೆ ಸಿಗುವ ಅದ್ಧೂರಿತನ ಉತ್ತರ ಕನರ್ಾಟಕ ಭಾಗದ ಹಬ್ಬ-ಕಾರ್ಯಕ್ರಮಗಳಿಗೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ದಕ್ಷಿಣ ಕನರ್ಾಟಕ ಭಾಗದ ಹಬ್ಬಗಳಿಗೆ ಸಚಿವರ ದಂಡೆ ಹೋಗುತ್ತದೆ. ಆದರೆ .. ಭಾಗದ ಕಿತ್ತೂರು ರಾಣಿ ಚನ್ನಮ್ಮನ ಉತ್ಸವ, ಕದಂಬ ಉತ್ಸವ, ರನ್ನ ಉತ್ಸವಗಳಿಗೆ ಅದ್ಧೂರಿತ ಏಕೆ ಇಲ್ಲ ಎಂದ ಅವರು ನಮ್ಮ ಬಗ್ಗೆ ಮಲತಾಯಿ ಧೋರಣೆ ಬೇಡ ಎಂದು ಅಗ್ರಹಿಸಿದರು.

    ಇದೇ ಸಂದರ್ಭದಲ್ಲಿ .ಭಾ.ವೀ.ಮಹಾಸಭೆಯ ಬೆಳಗಾವಿ ಘಟಕದ  ಮಾಜಿ ಅಧ್ಯಕ್ಷರಾದ ಬಿ.ವ್ಹಿ.ಕಟ್ಟಿ, ಕಲಾವಿದ ಸಿ.ಕೆ.ಮೆಕ್ಕೆದ, ಪತ್ರಕರ್ತ ಈಶ್ವರ ಹೊಟಿಮಾಜಿ ಉಪ ಮಹಾಪೌರೆ ಜ್ಯೋತಿ ಭಾವಿಕಟ್ಟಿ, ಸಮಾಜ ಸೇವಕಿ ಶ್ರೀಮತಿ ಪುಷ್ಪಾ ಕಿಲ್ಲೇಕರ, ಪಾಲಿಕೆ ಸದಸ್ಯ ರಮೇಶ ಕಳಸಣ್ಣವರ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಪಿ.ಬಿ.ಸ್ವಾಮಿ, ಆರ್.ಬಿ.ಪಾಟೀಲ, ಬಿ.ಎನ್.ಗೌಡರ, ಜಲತ್ಕುಮಾರ ಪುನಜಗೌಡ, .ರಾ.ಸುಳಕೂಡೆ, ವೀರನಗೌಡ ಪಾಟೀಲ, ಆರ.ಎಸ್.ಚಾಪಗಾಂವಿ, ಬಸವರಾಜ ಸೊಪ್ಪಿನಮಠ, ಜಗದೀಶ್ವರ ಪೂಜಾರ, ಗೋಪಾಲ ಕಟಾವರಕ, ಸುಭಾಷ ಘೇವಾರಿ, ಕರಡಿಮಠ, ಸಂಗಪ್ಪ ಅಂಗಡಿ, ಶಂಕರಯ್ಯಾ ಪೂಜಾರ, ಸಾಕ್ಷಿ ಶಿವಪೂಜಿಮಠ, ಮಹಾದೇವಿ, ಶೋಭಾ, ರಾಜೇಶ್ವರಿ, ಸುನಿತಾ ಉಪಸ್ಥಿತರಿದ್ದರು.

    ಗಂಗಾಂಬಿಕೆ ಮಹಿಳಾ ಮಂಡಳದಿಂದ ಪ್ರಾರ್ಥನೆ ಜರುಗಿತು. ಬಸವರಾಜ ಸುಣಗಾರ ಪ್ರಸ್ತಾವಿಕ ನುಡಿಗಳನ್ನು ಆಡಿದರು, ಎಸ್.ಆರ. ಹೀರೆಮಠ ನಿರೂಪಣೆ ಮಾಡಿದರು, ಸಂಪತಕುಮಾರ ಮುಚಳಂಬಿ ಸ್ವಾಗತ ಮತ್ತು ಸೋಮಶೇಖರ ಸೊಗಲದ ವಂದನಾರ್ಪಣೆ ಮಾಡಿದರು.