ಲೋಕದರ್ಶನ ವರದಿ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳನ್ನು ದಿ. 18ರಂದು ಭೇಟಿಯಾಗಿ ಮಾದಿಗ ಸಮಾಜದ ಜನಾಂಗದ ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ಸಾಕಷ್ಟು ಜಾತಿ ನಿಂದನೆ, ದೌರ್ಜನ್ಯ ಹಾಗೂ ಸಮಾಜದಿಂದ ಮಾದಿಗ ಸಮಾಜವನ್ನು ದೂರ ಇಡುವಂತ ಷ್ಯಡ್ಯಂತರ ಸಮಾಜದಲ್ಲಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಕಾನೂನು ಶಿಬಿರಗಳು ಹಾಗೂ ಜಾಗೃತಿ ಶಿಬಿರಗಳು, ಬಿತ್ತಿ ಪತ್ರಗಳ ಮುಖಾಂತರ ಪ್ರಕಟಿಸುವ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಜಾರಿ ಹೋರಾಟ ಸಮನ್ವಯ ಸಮಿತಿಯ ರಾಜ್ಯಧ್ಯಕ್ಷರಾದ ಮುತ್ತಣ್ಣ ಬೆಣ್ಣೂರವರು ಕೊಪ್ಪಳ ಪೋಲಿಸ್ ವರಿಷ್ಠಾಧಿಕಾರಿಗಳ ಹತ್ತ್ತಿರ ವಿನಂತಿಸಿಕೊಂಡರು.
ಇದಕ್ಕೆ ಪ್ರತಿಯಾಗಿ ಕೊಪ್ಪಳ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ.ಸಂಗೀತಾ ಮೇಡಂ ರವರು ಸಕರ್ಾರಿ ಇಲಾಖೆಗಳು ಇರುವುದೇ ಅನ್ಯಾಯದ ವಿರುದ್ಧ ನ್ಯಾಯ ಒದಗಿಸುವುದಕ್ಕೆ ಇರುವುದು. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೆ ಜಾತಿ ನಿಂದನೆ ಆದ ಗ್ರಾಮಗಳಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಾಗಿದೆ ಮತ್ತೆ ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಜೊತೆಗೆ ಸಮಾಜದಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾಗಿದೆ. ಇಲಾಖೆಗಳ ಜೊತೆ ಜೊತೆಗೆ ತಾವೆಲ್ಲರೂ ಜಾಗೃತಿ ಮೂಡಿಸಿದಾಗ ಸಮಾಜದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಸಾಧ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತು ಸುರಕೋಡ್, ವೀರೇಶ ಮೋಚಿ, ಮುನಿಕೃಷ್ಣ, ಜಿಲ್ಲಾಧ್ಯಕ್ಷರಾದ ಗಣೇಶ್ ಹೊರತಟ್ನಾಳ, ಪ್ರಭುರಾಜ ಕಿಡದಾಳ, ಮಂಜುನಾಥ ಮುಸಲಾಪುರ, ನಾಗಲಿಂಗ ಮಾಳೆಕೊಪ್ಪ, ದೇವರಾಜ ಕಿನ್ನಾಳ, ಸಮಾಜದ ರಾಜ್ಯ ನಾಯಕರು ಮತ್ತು ಯುವಕರು ಪಾಲ್ಗೊಂಡಿದ್ದರು.