ನಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು: ರಾಜೇಶ ಸಾಂಗಾವಿ

ಲೋಕದರ್ಶನ ವರದಿ

ಗುರ್ಲಾಪೂರ:  ಕನ್ನಡ ರಾಜ್ಯೋತ್ಸವದ ಆಚರಣೆಯ ಹಿಂದಿನ ಮಹೋನ್ನತ ಉದ್ದೇಶಗಳನ್ನು ಹಿಡಿದುಕೊಂಡು ಆಚರಣೆಗೆ ಅಣಿಯಾಗಬೇಕು. ನಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು. ನಾವುಗಳು ಪಾಶ್ಚಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮ ಮಕ್ಕಳ ಶಿಕ್ಷಣ ಕುಂಠಿತಕ್ಕೆ ನಾವೇ ಕಾರಣವಾಗುತ್ತಿದ್ದೇವೆ ಎಂದು ಪ್ರಾಧ್ಯಾಪಕರಾಕರಾದ ರಾಜೇಶ ಸಾಂಗಾವಿ ಎಂದು ಹೇಳಿದರು. 

ಅವರು ನ.1 ರಂದು ಸಾಯಂಕಾಲ ಸ್ಥಳೀಯ ಮಲ್ಲಿಕಾಜರ್ುನ ರಂಗಮಂಟಪದಲ್ಲಿ ವೀರ ಕನ್ನಡಿಗರು ಸಂಘಟನೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡದ ಭಾಷೆ ಇತಿಹಾಸವನ್ನು ನೋಡಿದಾಗ ಅತ್ಯಂತ ಉತ್ಕೃಷ್ಠವಾದ ಸಾಹಿತ್ಯ ರಚನೆ ಕನ್ನಡದಲ್ಲಿಯೇ ಆಗಿದೆ, ಆದಿಕವಿ ಪಂಪನಿಂದ ಮೊದಲು ಬಂದು ಆಧುನಿಕ ಕವಿಗಳವರೆಗೆ ಕನ್ನಡದ ಸುಗಂಧ ಪಸರಿಸಿದನ್ನು ನಾವು ಕಾಣುತ್ತೇವೆ. ಪಂಪ ಮಹಾಕವಿಗಳು ನನ್ನ ಇನ್ನೊಂದು ಜನ್ಮವಿದ್ದರೆ ಪವಿತ್ರವಾದ ಕರುನಾಡಲ್ಲಿ ನನ್ನ ಜನ್ಮವಾಗಲಿ ಎಂದು ಹೇಳಿದ್ದಾರೆ. ಇಂತಹ ಗತವೈಭವ ಸಾರುವ ಕನ್ನಡವನ್ನು ಉಳಿಸೋಣ, ಬೆಳೆಸೋಣ, ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ ಎಂದು ಹೇಳಿದರು. 

ಷಣ್ಮುಖ ಸೋನಾವಣಿ ಮಾತನಾಡಿ ಕನ್ನಡ ರಾಜ್ಯೋತ್ಸವ ನ.1ರ ಉತ್ಸವವಾಗಬಾರದು ವರ್ಷದುದ್ದಕ್ಕೂ ಕನ್ನಡಗೋಷ್ಕರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ. ಓದದೇ ಒಂದು ಕಾವ್ಯ ಪ್ರಯೋಗ ಮಾಡುವ ಶಕ್ತಿ ಕನ್ನಡಿಗರಲ್ಲಿ ಇದೆ, ಮತ್ತು ಕನ್ನಡ ಭಾಷೆಯಲ್ಲಿ ಇದೆ, ಪಕ್ಕದ ಮುಧೋಳ ತಾಲೂಕಿನಲ್ಲಿ ಹುಟ್ಟಿದಂತಹ ರನ್ನ ಮಹಾಕವಿಯೂ ಸರಸ್ವತಿ ಶಬ್ದಗಳ ಭಂಡಾರ ಮುದ್ರೆಯನ್ನೆ ನಾನು ಒಡದಿದ್ದೇನೆಂದು ಹೇಳಿರುತ್ತಾರೆ. ಇಂತಹ ದಿಟ್ಟತನ ಇರುವಂತಹ ಭಾಷೆಯನ್ನು ನಾವು ಮರೆಯುತ್ತಿದ್ದೇವೆ. ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು. 

ಮೂಡಲಗಿ ಪಿ.ಎಸ್.ಆಯ್. ಎಮ್.ಎನ್. ಸಿಂಧೂರ ಮಾತನಾಡಿ ಹಿಂದಿನ ಮಹಾಕವಿಗಳು ಕನ್ನಡ ಸಾಹಿತ್ಯ ಮತ್ತು ಭಾಷೆಗಳನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ ಈಗ ನಾವು ಭಾಷೆಗಳ ತೊಳಲಾಟದಲ್ಲಿ ಒದ್ದಾಡುತ್ತಿದ್ದೆವೆ. ದೊಡ್ಡ ದೊಡ್ಡ ಪಟ್ಟಣದಲ್ಲಿ ಕನ್ನಡ ಮರೆಯಾಗುತ್ತಿದೆ, ಆ ಸಂಸ್ಕೃತಿ ಹಳ್ಳಿಗೂ ಬರಬಹುದು ಅದಕ್ಕಾಗಿ ನಾವು ಎಚ್ಛೆತ್ತುಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ದಾಬಾ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಸ್ಟಾರ್, ಗುಟಕಾ, ಸರಾಯಿಗಳಂತಹ ಚಟಗಳಿಗೆ ದಾಸನಾಗುತ್ತಿದ್ದಾರೆ. ತಂದೆ-ತಾಯಿಗಳು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಒಳ್ಳೆಯ ದಾರಿಗೆ ಸೇರಿಸಬೇಕು. ಸ್ವಾಮಿ ವಿವೇಕಾನಂದರ, ಭಗತಸಿಂಗರವರ ಆದರ್ಶ ತತ್ವಗಳನ್ನು ಪಾಲನೆ ಮಾಡಬೇಕು. ನಮ್ಮ ಕನ್ನಡಾಂಭೆಯನ್ನು ಶ್ರೀಮಂತಗೊಳಿಸೋಣ ಎಂದು ಹೇಳಿದರು. ಬಿ.ಸಿ. ಮುಗಳಖೋಡ, ಎಸ್.ಜಿ. ಹಂಚಿನಾಳ, ಮಹಾಲಿಂಗ ಹಂಚಿನಾಳ ಮಾತನಾಡಿದರು. ಶಿವಾನಂದ ಹಿರೇಮಠ ಆಶೀರ್ವಚನ ನೀಡಿದರು. 

ಈ ಸಂದರ್ಭದಲ್ಲಿ ಎಸ್.ಜಿ. ಹಿರೇಮಠ, ಆರ್.ಬಿ. ನೇಮಗೌಡರ, ಮಲ್ಲಪ್ಪಾ ನೇಮಗೌಡರ, ಪುರಸಭೆ ಸದಸ್ಯ ಆನಂದ ಟಪಾಲದಾರ, ಎಲ್.ಎನ್. ಮರಾಠೆ, ಟಿ.ಡಿ.ಗಾಣಿಗೇರ, ಡಿ.ಎಮ್. ಮುಗಳಖೋಡ, ಶಿವಲಿಂಗ ಪುಠಾಣಿ, ರವಿ ಶಾಬನ್ನವರ, ಸಿದ್ದು ಗಡ್ಡೇಕಾರ, ಮಲ್ಲು ಉಪ್ಪಾರ, ಆರ್.ಬಿ. ಪತ್ತಾರ, ಎಸ್.ಆಯ್. ಭಾಗೋಜಿ, ಸುರೇಶ ಪಾಟೀಲ, ಪ್ರಕಾಶ ಮುಗಳಖೋಡ, ಶ್ರೀಶೈಲ ಮುಗಳಖೋಡ, ಹಣಮಂತ ಮುಗಳಖೋಡ, ಲಕ್ಷ್ಮಣ ಗೌರಾಣಿ, ಎನ್.ಬಿ. ಬಗಲಿ ಮತ್ತು ವೀರ ಕನ್ನಡಗರ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸ್ವಾಗತ ಮಹಾದೇವ ಕುಲಗೋಡ, ನಿರೂಪಣೆ ಎಮ್.ಎಸ್. ಅಲಿ