ಶಿಗ್ಗಾವಿ28 : ಶ್ರೇಷ್ಠ ಸಂವಿಧಾನವನ್ನು ಹೊಂದಿದ ಭಾರತ ಇಡಿ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಹೊಂದಿದ ರಾಷ್ಟ್ರವಾಗಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾ ಸರ್ಕಾರ ಎಂಬ ಹಿನ್ನೆಲೆಯಲ್ಲಿ ಇವತ್ತು ನೈಜ ಪ್ರಜಾಸಕರ್ಾರ ಸ್ಥಾಪನೆಯತ್ತ ನಾವೆಲ್ಲರೂ ಹೆಜ್ಜೆಹಾಕಬೇಕಾಗಿದೆ, ಭಾರತದಲ್ಲಿ ಪ್ರಜಾಪ್ರಭುತ್ವ ಅದ್ಭುತ ಯಶಸ್ಸನ್ನು ಪಡೆದಿದೆ ಎಂದು ಮಾಜಿ ಸಂಸದ ಮಂಜುನಾಥ ಸಿ ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 71 ನೆಯ ಪ್ರಜಾರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇವತ್ತು ಪ್ರತಿಯೊಬ್ಬರು ದೇಶಪ್ರೇಮವನ್ನು ಬೆಳೆಸಿಕೊಂಡು ಭಾತೃತ್ವ ಹಾಗೂ ಸೌಹಾರ್ಧತೆಯ ಬದುಕನ್ನು ರೂಢಿಸಿಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸಾಮಾನ್ಯರು ಅಸಾಮಾನ್ಯರಾಗಬಹುದಾದ ಅದ್ಭುತ ಅವಕಾಶಗಳನ್ನು ಮಾಡಿಕೊಟ್ಟ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ತತ್ವಾದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಅವರು ನಮಗಾಗಿ ಕೊಟ್ಟಿರುವ ಸಂವಿಧಾನ ರಕ್ಷಿಸಿ ದೇಶ ಉಳಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರು ಇವತ್ತು ವಿದ್ಯಾಥರ್ಿಗಳಲ್ಲಿ ರಾಷ್ಟ್ರಪ್ರೇಮ ತುಂಬಬೇಕಾದ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರಣ್ಣ ಬಡ್ಡಿ, ಶಿವಪುತ್ರಪ್ಪ ಜಕ್ಕಣ್ಣವರ, ಶಶಿಧರ ಯಲಿಗಾರ, ಅಶೋಕ ಕಾಳೆ, ಎಚ್ ಎಸ್ ಹಲಸೂರ, ಮುಂತಾದವರು ಇದ್ದರು. ವಿದ್ಯಾಥರ್ಿಗಳಿಂದ ಭಾಷಣ, ನೃತ್ಯರೂಪಕಗಳು ಜರುಗಿದವು. ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ ಸ್ವಾಗತಿಸಿದರು, ಅನಿಲ ನಾಯ್ಕರ ವಂದಿಸಿದರು, ಕೆ. ಬಸಣ್ಣ ನಿರೂಪಿಸಿದರು.