ಲೀಡ್ಸ್, ಆ 26 ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಅವರು ಈ ಸೋಲು ತುಂಬಾ ನೋವು ತಂದಿದೆ. ಆದರೆ, ಇದನ್ನು ಮರೆತು ಮುಂದಿನ ಪಂದ್ಯದ ಕಡೆ ತಂಡ ಗಮನಹರಿಸುವುದು ಅಗತ್ಯವಿದೆ ಎಂದು ಹೇಳಿದರು.
ಭಾನುವಾರ ಇಲ್ಲಿನ ಹೇಡಿಂಗ್ಲೆ ಅಂಗಳದಲ್ಲಿ 359 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 286 ರನ್ ಗಳಿಗೆ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕೊನೆಯ ವಿಕೆಟ್ಗೆ 73 ರನ್ ಅಗತ್ಯವಿತ್ತು. ಈ ವೇಳೆ ಏಕಾಂಗಿ ಹೋರಾಟ ನಡೆಸಿದ ಬೆನ್ ಸ್ಟೋಕ್ಸ್ ಅಜೇಯ 135 ರನ್ ಸಿಡಿಸಿ ಇಂಗ್ಲೆಂಡ್ಗೆ ರೋಚಕೆ ಜಯ ತಂದುಕೊಟ್ಟರು. ಆದರೆ, 73 ರನ್ಗಳೊಳಗೆ ಒಂದೇ-ಒಂದು ವಿಕೆಟ್ ಪಡೆಯುವಲ್ಲಿ ಆಸ್ಟ್ರೇಲಿಯಾಭಾರಿ ಕಸರತ್ತು ನಡೆಸಿತಾದರೂ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಒಂದು ವಿಕೆಟ್ನಿಂದ ಆಸೀಸ್ ಸೋಲು ಅನುಭವಿಸಿತು.
ಈ ಪಂದ್ಯದ ಸೋಲು ನಿಜಕ್ಕೂ ತಂಡದ ಎಲ್ಲರಿಗೂ ಬಹಳ ನೋವು ತಂದಿದೆ. ಇದನ್ನು ನೆನಪಿಸಿಕೊಂಡಾಗಲೆಲ್ಲ ಬಹಳ ಬೇಸರವಾಗುತ್ತೆ. ಆದ್ದರಿಂದ ಇದನ್ನು ಮರೆತು ಮುಂದಿನ ಪಂದ್ಯದತ್ತ ಗಮನ ಕೇಂದ್ರಕರಿಸಬೇಕು. ಮ್ಯಾಂಚೆಸ್ಟರ್ನಲ್ಲಿ ಇದನ್ನೆಲ್ಲ ಮರೆತು ಅಭ್ಯಾಸ ಆರಂಭಿಸಬೇಕಿದೆ ಎಂದು ತಿಳಿಸಿದರು.
ಬೆನ್ ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ಕೊನೆಯ ವಿಕೆಟ್ಗೆ 76 ರನ್ ಗಳಿಸಿತು. ಲೀಚ್ 17 ಎಸೆತಗಳಲ್ಲಿ ಕೇವಲ ಒಂದು ರನ್ ಮಾತ್ರ ಗಳಿಸಿ ಸ್ಟೋಕ್ಸ್ ಉತ್ತಮ ಸಾಥ್ ನೀಡಿದ್ದರು. ಇದರ ಫಲವಾಗಿ ಇಂಗ್ಲೆಂಡ್ ಗೆದ್ದು 1-1 ಸಮಬಲ ಸಾಧಿಸಿಕೊಂಡಿತು.
"ಈ ರೀತಿಯ ಸೋಲಿನ ಬಗ್ಗೆ ಎಲ್ಲರಿಗೂ ಬೇಸರವಿದೆ. ಯಾರೊಬ್ಬರು ಸಮರ್ಥರಲ್ಲ, ತಪ್ಪು ಮಾಡೇ ಮಾಡುತ್ತಾರೆ. ತಪ್ಪು ಎಸಗಿದಾಗ ತಲೆಕೆಡಸಿಕೊಳ್ಳದೇ ತಂಡದೊಂದಿಗೆ ಸಾಮಾನ್ಯವಾಗಿ ಬೆರತು ಆಡಬೇಕು ಎಂದು ಪೈನ್ ಹೇಳಿದರು.
ಉಭಯ ತಂಡಗಳು ಮೂರು ಪಂದ್ಯಗಳ ಮುಕ್ತಾಯಕ್ಕೆ 1-1 ಸಮಬಲ ಕಾಯ್ದುಕೊಂಡಿವೆ. ಮುಂದಿನ ಪಂದ್ಯ ಸೆಪ್ಟಂಬರ್ 4 ರಂದು ಓಲ್ಡ್ ಟ್ರಾಫಡರ್್ನಲ್ಲಿ ನಡೆಯಲಿದೆ.