ಲೋಕದರ್ಶನ ವರದಿ
ಬೆಳಗಾವಿ : ನ,. 10- ಹೊಲಗಳಿಗೆ ಅತೀಯಾದ ಗೊಬ್ಬರ ಕೀಟನಾಶಕ ಹಾಕಿ ಹಾಕಿ ಹೊಲದ ಆರೋಗ್ಯ ಹಾಳು ಮಾಡಿದವರು ನಾವೇ ಹೀಗಾಗಿ ನಮ್ಮ ಆರೋಗ್ಯವೂ ಈ ಹೊಲದಿಂದಲೇ ಹದಗೆಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ಹಸಿರು ಕ್ರಾಂತಿ ಹಾಗೂ ಸವರ್ೋದಯ ಸೇವಾ ಬಳಗ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಮಾರ್ಗದರ್ಶನದಲ್ಲಿ ಪ್ರತಿ ಶನಿವಾರ ವಾರದ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸದ್ಯಕ್ಕೆ ಸಿರಿಧಾನ್ಯಗಳು ತುಂಬ ಮಹತ್ವವಾದ ಅವಶ್ಯಕವಾಗಿ ಬೇಡಿಕೆಯಲ್ಲಿರುವ ಧಾನ್ಯಗಳು ಮಧುಮೇಹಿ ರೋಗಿಗಳಿಗೆ ನಿತ್ಯ ಬೇಕಾಗುವ ಧಾನ್ಯಗಳನ್ನು ಒಂದೆಡೆ ರೈತರೇ ಮಾರಲು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದು ತುಂಬ ಶ್ಲಾಘನೀಯ ಎಂದರು.
ರೈತರು ಕಬ್ಬು ಬೆಳೆಯುವ ಮೂಲಕ ಹೊಲಕ್ಕೆ ಅತೀಯಾದ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದರಿಂದ ಕೃಷ್ಣಾ ನದಿಯ ನೀರು ಸವುಳಾಗಿದೆ. ಸಾಕಷ್ಟು ಉದ್ದಿಮೆದಾರರು ಸಾಲ ಮಾಡಿ ಸಕರ್ಾರಕ್ಕೆ ತುಂಬದೆ ದೇಶ ಬಿಟ್ಟು ಓಡಿ ಹೋಗಿರುವುದನ್ನು ನಾವು ನೋಡಿದ್ದೇವೆ. ಆದರೆ ರೈತ ತುಂಬ ಸ್ವಾಭಿಮಾನಿ ಸಾಲ ಮಾಡಿ ಬೆಳೆದ ಬೆಳೆ ಕೈ ಕೊಟ್ಟಾಗ ಅಥವಾ ಯೋಗ್ಯ ಬೆಲೆ ಸಿಗದೇ ಹೋದಾಗ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಮುಂದಾಗುತ್ತಾನೆ.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಸುರೇಶ ಅಂಗಡಿ ರೈತ ಬೆಳೆದ ಪ್ರತಿ ಬೆಳೆಗೂ ಸಕರ್ಾರ ದರ ನಿಗದಿಗೊಳಿಸಿದೆ ಆ ದರಕ್ಕಿಂತ ಕಡಿಮೆ ಮಾರುವ ಅಗತ್ಯವಿಲ್ಲ. ರೈತ ಧೃತಿಗೆಡಬೇಕಾದ ಅಗತ್ಯವಿಲ್ಲ. ಸಾಲಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಡಿಮೆ ಮಾಉವ ನಿಟ್ಟಿನಲ್ಲಿ ಕಾನೂನಾತ್ಮಕ ತಿಳುವಳಿಕೆ ಹಾಗೂ ಸಲಹೆಗಳನ್ನು ನೀಡುವ ಕಾರ್ಯಕ್ರಮಗಳು ಅಗತ್ಯವಿದೆ. ವ್ಯವಸ್ಥಿತ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರಿಗೆ ಮಾರ್ಗದರ್ಶನದ ಅವಶ್ಯವಿದೆ ಎಂದರು.
ಸಾವಯವ ಕೃಷಿ ಫೆಡರೇಶನ್ ಮುಖ್ಯಸ್ಥ ಅಶೋಕ ತುಬಚಿ ಮಾತನಾಡಿ ಸಾವಯವ ಕೃಷಿ ನೀತಿ ಕಳೆದ ಒಂದೂವರೆ ವರ್ಷದಿಂದ ಜಾರಿಗೆ ಬಂದಿದ್ದು, 14 ಪ್ರಾಂತೀಯ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ದುಬೈ ನಲ್ಲಿ ಈ ತಿಂಗಳ 18 ರಿಂದ 21 ರ ವರೆಗೆ ಸಾವಯವ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ತಿಳಿಸಿದರು.
ಮಾಜಿ ಸಂಸದ ಎಸ್.ಬಿ ಸಿದ್ನಾಳ ಮಾತನಾಡಿ ರೈತ ಕೃಷಿಯೊಂದಿಗೆ ಜೇನು ಸಾಕನೆ, ಹೈನುಗಾರಿಕೆ, ಕುರಿ ಸಾಕಣೆ ಮುಂತಾದ ಆದಾಯ ಬರುವ ಕೆಲಸಗಳನ್ನು ಮಾಡುವತ್ತ ಗಮನ ಹರಿಸಬೇಕು. ರೈತರು ಹಸಿರು ಟಾವೆಲ್ ಹಾಕಿಕೊಂಡು ಡಿ.ಸಿ ಕಚೇರಿ ಮುಂದೆ ಭಿಕ್ಷೆ ಬೇಡುವ ಬದಲು ಸ್ವಾವಲಂಬಿ ಕೃಷಿಯತ್ತ ಮುಂದಾಗಬೇಕು ಎಂದರು.
ಅಭಯ ಮುತಾಲಿಕ ದೇಸಾಯಿ ಭವಿಷ್ಯದಲ್ಲಿ ಸಾವಯವ ಕೃಷಿ ಅತೀ ಅವಶ್ಯವಾಗುವ ಸೂಚನೆ ಕಾಣುತ್ತಿದೆ. ರೈತ ಸ್ವಾವಲಂಬಿ ಕೃಷಿಕನಾಗಬೇಕು ಬಿತ್ತುವ ಬೀಜದಿಂದ ಹಿಡಿದು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕೂಡ ಕಂಡುಕೊಳ್ಳುವತ್ತ ರೈತ ಮುಂದಾಗುವಂತೆ ಸಲಹೆ ನೀಡಿದರು. ಗ್ರಾಹಕನಿಗೆ ತಾನು ತಿನ್ನುವ ಆಹಾರ ಎಲ್ಲಿಂದ ಬರುತ್ತಿದೆ ಅದರ ಗುಣಮಟ್ಟ ಏನು ಎಂಬ ಪರಿಕಲ್ಪನೆ ಬರಬೇಕು ಬರೀ ಪ್ಯಾಕೆಟ್ಟಿನ ಮೋಹಕ್ಕೆ ಒಳಗಾಗದೇ ಗುಣಮಟ್ಟ ಉಳ್ಳ ಆಹಾರ ಸೇವಿಸುವಂತೆ ಹೇಳಿದರು.
ಮಾಜಿ ಮೇಯರ್ ಸಿದ್ದನಗೌಡ ಪಾಟೀಲ, ಸಾವಯವ ಕೃಷಿಕ, ಶಂಕರ ಲಂಗಟಿ, ಕಲ್ಲಪ್ಪ ನೇಗಿನಾಳ, ಮಾತನಾಡಿದರು.
ರೈತ ಮುಖಂಡ ಕಲ್ಯಾಣರಾವ ಮುಚಳಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಕ್ಷಿ ಶಿವಪೂಜಿಮಠ ಪ್ರಾರ್ಥನಾ ಗೀತೆ ಹಾಡಿದರು. ವಿಜಯಲಕ್ಷ್ಮೀ ರೈತ ಗೀತೆ ಹಾಡಿದರು. ಎಸ್.ಆರ್. ಹಿರೇಮಠ ನಿರೂಪಿಸಿದರು ಶಂಕರಯ್ಯ ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ ವಿ.ಬಿ.ಜಾವೂರ, ಎಸ್.ಎಸ್.ಕಿವಡಸನ್ನವರ, ಸಿ.ಎನ್.ವಾಲಿ, ಡಾ.ಜಗದೀಶ ಹಾರುಗೊಪ್ಪ ಮುಂತಾದವರು ಉಪಸ್ಥಿತರಿದ್ದರು.