ನವದೆಹಲಿ, ಆ 22 ದೇಶದ ಹಿರಿಯ ರಾಜಕಾರಣಿ, ಮಾಜಿ ಸಚಿವರನ್ನು ಮಧ್ಯರಾತ್ರಿಯಲ್ಲಿ ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮ, ವೈಯಕ್ತಿಕ ಪ್ರತೀಕಾರ ಹಾಗೂ ರಾಜಕೀಯ ಪ್ರೇರಿತ ಎಂದು ಕಿಡಿಕಾರಿರುವ ಕಾಂಗ್ರೆಸ್, ಕಾನೂನಿನ ಮೇಲೆ ವಿಶ್ವಾಸವಿದ್ದು, ಚಿದಂಬರಂ ಬೆಂಬಲಕ್ಕಿದ್ದೇವೆ ಎಂದು ತಿಳಿಸಿದೆ
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತ್ ಚಿದಂಬರಂ ಪಾತ್ರವೇನೂ ಇಲ್ಲ, ಎಫ್ಐಆರ್ ನಲ್ಲಿಯೂ ಕೂಡ ಚಿದಂಬರಂ ವಿರುದ್ಧ ಯಾವುದೇ ಅಪರಾಧಗಳನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದೆ.
ಕಳೆದ ಎರಡು ದಿನಗಳಲ್ಲಿ, ಭಾರತವು ಹಾಡ ಹಗಲೇ ಪ್ರಜಾಪ್ರಭುತ್ವ ಹಾಗೂ ಕಾನೂನಿನ ನಿಯಮದ ಹತ್ಯೆಗೆ ಸಾಕ್ಷಿಯಾಗಿದೆ ಆಡಳಿತಾರೂಢ ಪಕ್ಷ ವೈಯಕ್ತಿಕ ಪ್ರತೀಕಾರಕ್ಕಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡಿದೆ ಎಂದು ದೂರಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲ, ಈ ಪ್ರಕರಣದಲ್ಲಿ ಚಿದಂಬರಂ ಅಮಾಯಕರೆಂದು ಸಾಬೀತಾಗುವ ಅಚಲ ವಿಶ್ವಾಸವಿದೆ ಕಾಂಗ್ರೆಸ್ ಅವರ ಬೆನ್ನಿಗೆ ನಿಂತಿದೆ ಎಂದು ಹೇಳಿದ್ದಾರೆ
ರಾಜಕೀಯ ಮುಖಂಡರನ್ನು ಮೆಚ್ಚಿಸುವ ಉತ್ಸಾಹದಲ್ಲಿರುವ ಅಧಿಕಾರಿಗಳಿಗೆ, ಆಯ್ದ ದೃಶ್ಯ ಮಾಧ್ಯಮಗಳಿಗೆ ಚಿದಂಬರಂ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು, ಪ್ರಧಾನಿ ಮತ್ತು ಗೃಹ ಸಚಿವವರಿಗೆ ಸತ್ಯ ಹೇಳುವ ಧೈರ್ಯವಿದೆ ಎಂದು ನಾವು ಭಾವಿಸುತ್ತೇವೆ
ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಆಕ್ರಮಣಕ್ಕೊಳಗಾದ ಕಾನೂನಿನ ನಿಯಮವು ಮೇಲುಗೈ ಸಾಧಿಸುತ್ತದೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಜೀವನ ಮತ್ತು ಸ್ವಾತಂತ್ರ್ಯವು ನಿರ್ಜಿವ ಪತ್ರವಾಗುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.