ರಾಣೇಬೆನ್ನೂರು08: ಮಹಿಳೆಯರನ್ನು ಭೂಮಿತಾಯಿಗೆ ಹೋಲಿಸಿದ ದೇಶ ನಮ್ಮದು. ಪುರುಷ ಪ್ರಧಾನ ಸಮಾಜವೆಂದು ಬೊಬ್ಬೆ ಇಡುವ ಕಾಲವೊಂದಿತ್ತು. ಆದರೆ, ಕಾಲ ಬದಲಾಗಿದೆ. ಪುರುಷರಿಗಿಂತ ಮಹಿಳೆ ಇಂದು ಎಲ್ಲ ರಂಗಗಳಲ್ಲಿ ಸಶಕ್ತಳಾಗಿ ತನ್ನ ಕಾರ್ಯ ನಿಭಾಯಿಸುವುದರ ಮೂಲಕ ಗುರುತಿಸಿಕೊಳ್ಳುವಂತಾಗಿದೆ ಎಂದು ನಗರಸಭೆ ಪೌರಾಯುಕ್ತ ಡಾ|| ಎನ್. ಮಹಾಂತೇಶ್ ಹೇಳಿದರು.
ಅವರು ಶನಿವಾರ ಇಲ್ಲಿನ ನಗರಸಭೆ ಸರ್.ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಗರಸಭೆ ಕಾರ್ಯಾಲಯ ಡೇ-ನಲ್ಮ್ ಯೋಜನೆ ಅಡಿಯಲ್ಲಿ ನಡೆದ ನಗರದ ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ಪ್ರದೇಶಮಟ್ಟದ ಒಕ್ಕೂಟಗಳು ಆಯೋಜಿಸಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಹಿಳೆಯರು ಮನಸ್ಸು ಮಾಡಿದರೆ, ಏನನ್ನಾದರೂ ಸಾಧಿಸಬಹುದಾಗಿದೆ ಎನ್ನುವುದಕ್ಕೆ ನಲ್ಮ್ ಯೋಜನೆಯಲ್ಲಿ ಆರಂಭಗೊಂಡಿರುವು ವಿವಿಧ ಹಂತದ ಸ್ವಯಂ ಉದ್ಯೋಗವೇ ಇಂದು ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿದೆ. ಇಷ್ಟಕ್ಕೆ ಪರಿಪೂರ್ಣತೆ ಸಾಧ್ಯವಾಗುವುದಿಲ್ಲ. ಹೆಚ್ಚಾಗಿ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಂಡು ಸಾಗಿದರೆ, ಇನ್ನಷ್ಟು ಹೆಚ್ಚಿನ ಪ್ರಗತಿಯ ಜೊತೆಗೆ ಆರ್ಥಿಕ ವಾಗಿ ಪರಿಪೂರ್ಣ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಸೇರಿದ ನೂರಾರು ಮಹಿಳೆಯರಿಗೆ ಕರೆ ನೀಡಿದರು.
ನಗರಸಭಾ ಸದಸ್ಯೆ ಮಂಜುಳಾ ಹತ್ತಿ ಮಾತನಾಡಿ ಮಹಿಳೆಯರಿಗೆ ಸಮಾಜದಲ್ಲಿ ವೇದ-ಇತಿಹಾಸ ಕಾಲಗಳಿಂದಲೂ ವಿಶೇಷವಾದ ಸ್ಥಾನ-ಮಾನ ಮತ್ತು ಗೌರವವಿದೆ. ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡರೆ, ಭಾರತೀಯ ಮಹಿಳೆಯರಿಗೆ ಮತ್ತಷ್ಟು ಸಂತೋಷವಾಗುತ್ತದೆ ಎಂದ ಅವರು ಉದ್ಯಮದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರಕ್ಕೆ ಮಾತ್ರ ಸೀಮಿತವಾಗಬೇಕು. ವ್ಯಾಪಾರಿಗಳಾದವರು ಯಾವುದೇ ಕೌಟುಂಬಿಕ ಸಮಸ್ಯೆಗಳ ಕುರಿತು ಅಲ್ಲಿ ಚರ್ಚೆ ಯಾಗಬಾರದು ಇದರಿಂದ ಬೆಳವಣಿಗೆಗೆ ಮಾರಕವಾಗಲಿದೆ ಎಂದರು.
ಇನ್ನೋರ್ವ ಸದಸ್ಯೆ ಜಯಶ್ರೀ ಪಿಸೆ. ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ ಸೇರಿದಂತೆ ಮತ್ತಿತರ ಮಹಿಳೆಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಆಥರ್ಿಕ ಪ್ರಗತಿಯ ಪಾತ್ರ ವಿಷಯ ಕುರಿತಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತೆ ಮಂಜುಳಾ ಮುಂಡಾಸದ, ಸಹಾಯಕ ಅಭಿಯಂತ ಬಿ.ಎಸ್.ಪಾಟೀಲ, ವ್ಯವಸ್ಥಾಪಕ ಶಂಕರ, ನಗರಸಭಾ ಸಿಬ್ಬಂದಿಗಳಾದ ಪುಪ್ಪಲತಾ, ಮಾಲಾ ಬೀರಾಳ, ರಾಜೇಶ್ವರಿ ಹರಪನಹಳ್ಳಿ, ವಾಣಿಶ್ರೀ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ರಾಧಾ ಕನವಳ್ಳಿ ಪ್ರಾಥರ್ಿಸಿದರು, ಸಿ.ಎಂ.ಪುಟ್ಟಕ್ಕಳವರ ಸ್ವಾಗತಿಸಿದರು, ಮಾರುತಿ ಪಾಟೀಲ ನಿರೂಪಿಸಿ, ಸಿ.ನವನಾಥ ವಂದಿಸಿದರು. ಅರ್ಥಪೂರ್ಣವಾಗಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಗರದ ವಿವಿಧ ಮಹಿಳಾ ಮಂಡಳದ ಮುಖಂಡರು, ಸದಸ್ಯರು, ಒಕ್ಕೂಟದ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.