ಸತ್ತೂರಿನ ಆಶ್ರಯ ಕಾಲೋನಿಗೆ ಸರ್ಕಾರಿ ಶಾಲೆ ಬೇಕೆಂದು ಹೋರಾಟ ಮಾಡಿ, ಲಾಟಿ ಏಟನ್ನು ತಿಂದು ಸರ್ಕಾರಿ ಶಾಲೆಯನ್ನು ಕಟ್ಟಿಸಿದ್ದೇವೆ- ಸಿ ಐ ಹೊಂಗಲ್

ಸತ್ತೂರಿನ ಆಶ್ರಯ ಕಾಲೋನಿಗೆ ಸರ್ಕಾರಿ ಶಾಲೆ ಬೇಕೆಂದು ಹೋರಾಟ ಮಾಡಿ, ಲಾಟಿ ಏಟನ್ನು ತಿಂದು ಸರ್ಕಾರಿ ಶಾಲೆಯನ್ನು ಕಟ್ಟಿಸಿದ್ದೇವೆ- ಸಿ ಐ ಹೊಂಗಲ್ We fought for a government school in the shelter colony of Sattur, endured lathi charges and built a

ಧಾರವಾಡ 30: ನಗರದ ಸತ್ತೂರಿನ ಆಶ್ರಯ ಕಾಲೋನಿಯಲ್ಲಿರುವ   ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎಐಡಿಎ? ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ, 50 ವರ್ಷ ದಾಟಿದ ನಮ್ಮೂರ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ’ ಎಂದು ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ಧ್ವನಿಯೆತ್ತಿದರು. ಪ್ರತಿಭಟನೆಯನ್ನು ಉದ್ದೇಶಿಸಿ, ಎಐಡಿಎ? ಜಿಲ್ಲಾ ಅಧ್ಯಕ್ಷರು ಸಿಂಧು  ಕೌದಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ನವಲೂರು ಪ್ರೌಢ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಆಶ್ರಯ ಕಾಲೋನಿಯ ಸತ್ತುರು ಶಾಲೆಯನ್ನು ಅದರೊಂದಿಗೆ ವೀಲೀನಗೊಳಿಸಲಾಗುತ್ತಿದೆ. 50 ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಬಡ ಕೂಲಿ -ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಂದುವರೆದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಸತ್ತೂರು  ಮತ್ತು ಸತ್ತೂರು ಹಿರಿಯ ಪ್ರಾಥಮಿಕ   ಶಾಲೆ, ಸತ್ತೂರು ಉರ್ದು ಮಾಧ್ಯಮ ಶಾಲೆ, ತಡಸಿನ ಕೊಪ್ಪ ಹಿರಿಯ ಪ್ರಾರ್ಥಮಿಕ ಶಾಲೆ, ನವಲೂರು ಹರಿಜನ್ ಕೆರೆ ಶಾಲೆ  ಸೇರಿದಂತೆ 5 ಶಾಲೆಗಳನ್ನು ಮುಚ್ಚಿ ನವಲೂರು ಮ್ಯಾಗ್ನೆಟ್ ಶಾಲೆಗೆ ಸೇರಿಸಲಾಗುತ್ತಿದೆ. ಈ ರೀತಿ ಕೇವಲ ಧಾರವಾಡ ಜಿಲ್ಲೆಯಲ್ಲೇ 500 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ತಲುಪಿಸಲು ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳುತ್ತಿರುವ ಸರ್ಕಾರವು ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿ ಎಂ ಸಿ ತಲೆಯ ಮೇಲೆ ಹೊರೆಸಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಎಂದು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.  

ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ಸದಸ್ಯರಾದ ಹಾಗೂ ಊರಿನ ಹಿರಿಯರಾದ ಸಿ ಐ ಹೊಂಗಲ್ ಮಾತನಾಡಿ, ಅವರು ಈ ಶಾಲೆಗೋಸ್ಕರ ನಾವು ಊರಿನ ಜನಗಳು ದೊಡ್ಡ ಹೋರಾಟ ಮಾಡಿದ್ದೇವೆ, ಲಾಟಿ ಏಟು ತಿಂದಿದ್ದೇವೆ, ನಾವು ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಮಾತನಾಡಿ, ಬಡವರ ಮಕ್ಕಳು ಓದುವ  ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ಸರ್ಕಾರ ರಚಿಸಿದೆ. ಸರ್ಕಾರದ ಮ್ಯಾಗ್ನೆಟ್ ಯೋಜನೆಯನ್ನು ಖಂಡಿಸಿ ಮಾತನಾಡಿದರು.  ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸಿಂಧು ಕೌದಿ, ಸಂತೋಷ್ ನಂದಿಕಲ್ ಮಠ ಸಿದ್ದು, ಈರ​‍್ಪ ಕರಸಣ್ಣವರ, ಕೆ ಜಿ ಬಿಳಾಕರ ಸಿ ಐ ಹೊಂಗಲ್  ರೇಣುಕಾ ಜಿರುಗ್ವಾದ್ ಊರಿನ ಗ್ರಾಮಸ್ಥರು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.