ಲೋಕದರ್ಶನ ವರದಿ
ರಾಯಬಾಗ 31: ಪರಿಸರದಲ್ಲಿ ಶುದ್ಧ ಗಾಳಿ, ನೀರು ಮತ್ತು ಆಹಾರಇದ್ದರೆ ಮಾತ್ರ ನಾವು ಆರೋಗ್ಯಯುತವಾಗಿಇರಲು ಸಾಧ್ಯ. ಇದು ಸಾಧ್ಯವಾಗಬೇಕಾದರೆ ಭೂಮಿಯನ್ನು ನಿರೋಗಿ ಮಾಡುವರೋಗ ನಿರೋಧಕ ಶಕ್ತಿ ಹೊಂದಿರುವ ಗೋ ರಕ್ಷಣೆಯಿಂದ ಸಾಧ್ಯವೆಂದು ಇಚಲಕರಂಜಿ-ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ತಾಲೂಕಿನ ನಿಡಗುಂದಿ ಗ್ರಾಮದ ಐಹೊಳೆ ತೋಟದ ಮಹಾಮನೆಯಲ್ಲಿ ಲಿಂ.ಮಹಾಲಿಂಗಪ್ಪ ಐಹೊಳೆ 28ನೇ ಪುಣ್ಯ ಸ್ಮರಣೆ ನಿಮಿತ್ಯಹಮ್ಮಿಕೊಂಡಿದ್ದ ಹಾರೂಗೇರಿಯವರ ಶರಣ ವಿಚಾರ ವಾಹಿನಿಯ ಮನೆ-ಮನೆಯಿಂದ ಮನ-ಮನಕ್ಕೆ ವಚನ ವೈಭವ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ತಂದೆ-ತಾಯಿ ಪ್ರತ್ಯಕ್ಷದೇವರಾಗಿದ್ದು, ಅವರ ಸೇವೆ ಮಾಡುವುದು ಪುಣ್ಯ ಕಾರ್ಯವಾಗಿದೆ. ಅವರ ಋಣ ತೀರಿಸಲು ಎಂದೆಂದಿಗೂ ಸಾಧ್ಯವಿಲ್ಲ. ತಂದೆ-ತಾಯಿ ಮತ್ತು ಗುರುಗಳಿಗೆ ನಿತ್ಯ ನಮಸ್ಕರಿಸಿ ಗೌರವ ನೀಡುವುದು ನಮ್ಮದೇಶದ ಸಂಸ್ಕೃತಿಯಾಗಿದೆಎಂದರು.
ಮಹಾರಾಷ್ಟ್ರದದೇಶಿ ಆಕಳುಗಳ ಪಾಲನೆ ಪೋಷಣೆ ತಜ್ಞ ಅರುಣ ಪಾಟೀಲ ಅವರು ದೇಶಿ ಆಕಳಗಳ ಮತ್ತು ಸಾವಯುವ ಕೃಷಿ ಮಹತ್ವ ಹಾಗೂ ಉಪಯುಕ್ತ ಕುರಿತು ರೈತರಿಗೆ ಮಾಹಿತಿ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಬ್ಬೂರಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಪಾಲಭಾವಿ ದುರ್ಗಾದೇವಿ ದೇವಸ್ಥಾನದ ಮುರಘೇಂದ್ರ ಸ್ವಾಮೀಜಿ, ಶರಣ ಆಯ್.ಆರ್.ಮಠಪತಿ, ಕುಡಚಿ ಶಾಸಕ ಪಿ.ರಾಜೀವ, ಶಾಸಕ ಡಿ.ಎಮ್.ಐಹೊಳೆ, ಅರುಣ ಐಹೊಳೆ, ಸುಶೀಲಾ ಐಹೊಳೆ, ಮಾಯವ್ವ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಮಹೇಶ ಭಾತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.