ಕನ್ನಡ ಉಳಿಸಲು, ಕನ್ನಡ ಬೆಳೆಸಲು ನಾವಿಂದು ದೃಢ ಸಂಕಲ್ಪ : ಮರಾಠೆ

ಸರಕಾರ ಕನ್ನಡ ಅಂಕಿಗಳ ಬಳಕೆಗೆ ಕಡ್ಡಾಯ ಕಾನೂನು ತಂದು ಜಾರಿಗೊಳಿಸುವುದು ಅವಶ್ಯಕತೆ ಇದೆ

ಕನ್ನಡ ಉಳಿಸಲು, ಕನ್ನಡ ಬೆಳೆಸಲು ನಾವಿಂದು ದೃಢ ಸಂಕಲ್ಪ : ಮರಾಠೆ 

ಶಿಗ್ಗಾವಿ 27 : ಕನ್ನಡ ಉಳಿಸಲು, ಕನ್ನಡ ಬೆಳೆಸಲು ನಾವಿಂದು ದೃಢ ಸಂಕಲ್ಪ ಮಾಡಿದಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಕರವೇ ಗಜಪಡೆ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಮರಾಠೆ ಹೇಳಿದರು. 

      ತಾಲೂಕಿನ ತಡಸ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ, ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆ, ಕನ್ನಡ ಹಬ್ಬ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಬಾಷೆ, ಕನ್ನಡದ ಅಂಕಿಗಳು ಇಂದು ಅವಸಾನದ ಅಂಚಿನಲ್ಲಿರುವುದು ಖೇದಕರ ವಿಷಯ. ಇಂದಿನ ಮಕ್ಕಳಿಗೆ ಕನ್ನಡ ಅಂಕಿಗಳನ್ನು ಕಲಿಸಲಾಗುತ್ತಿಲ್ಲ.ಬಹುಶಃ ಕಲಿಸುವವರಿಗೂ ಅವುಗಳ ಪರಕಲ್ಪನೆ ಇದ್ದಂತಿಲ್ಲ. ಹೀಗಾದರೆ ಕನ್ನಡ ಅಂಕಿ ಸಂಖ್ಯೆಗಳ ಭವಿಷ್ಯ ಅಂತ್ಯಗೊಂಡಂತೆಯೇ ಸರಿ. ಸರಕಾರ ಕನ್ನಡ ಅಂಕಿಗಳ ಬಳಕೆಗೆ ಕಡ್ಡಾಯ ಕಾನೂನು ತಂದು ಜಾರಿಗೊಳಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.   

        ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ. ಆಶಾ ಕಾರ್ಯಕರ್ತೆಯರಿಗೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು, 

     ಈ ಸಂದರ್ಭದಲ್ಲಿ ಕರವೇ ಗಜಪಡೆ ತಾಲೂಕ ಅಧ್ಯಕ್ಷ ಶಂಕರ ಬಡಿಗೇರ, ನಾರಾಯಣ ಬಡಿಗೇರ, ಶಿಂದಯ್ಯ ಹೀರೆಮಠ, ಬ್ರಹ್ಮಾನಂದ ಕಮ್ಮಾರ, ನಾರಾಯಣ ಬಡಿಗೇರ, ಅದ್ದುಸಾಬ ಕೊಲ್ಲಾಪುರ , ಮಹಾವೀರ ಹಳ್ಳಿಯವರ, ಈರಣ್ಣ ಭೋಸ್ಲೆ, ವಿನಾಯಕ ರೇವಣಕರ, ರಾಮಣ್ಣ ಕಮ್ಮಾರ, ಮೌಲಾಲಿ ಹುಚ್ಚುಸಾಬನವರ, ಮಮಸಾಬ ಪಿಟಗಿ, ಮಹ್ಮದಗೌಸ ಅಣಿಗೇರಿ, ಶ್ರೀಧರ ಬಡಿಗೇರ ಸೇರಿದಂತೆ ಇತರರಿದ್ದರು.