ರಾಣೇಬೆನ್ನೂರು17: ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಹಿನ್ನಲೆಯಲ್ಲಿ ಕಾಕೋಳ ಜಿಪಂ ವ್ಯಾಪ್ತಿಯಲ್ಲಿನ ಹಳ್ಳಿಗಳ ರಸ್ತೆ ಮತ್ತಿತರ ಅಭಿವೃದ್ದಿ ಕಾಮಗಾರಿಗಳಿಗಾಗಿ ವಿಶೇಷ ಯೋಜನೆ ಅಡಿಯಲ್ಲಿ 5 ಕೋಟಿ ರೂ ಮಂಜೂರಾಗಿದೆ ಎಂದು ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು.
ಸೋಮವಾರ ತಾಲೂಕಿನ ಬೇವಿನಹಳ್ಳಿಯಲ್ಲಿ 2019-2020ನೇ ಸಾಲಿನ ನೆರೆಹಾವಳಿಯ 50-50 ಯೋಜನೆಯ ಅಡಿಯಲ್ಲಿನ ಮೈದೂರು ಕ್ರಾಸನಿಂದ ಬೇವಿನಹಳ್ಳಿಯವರೆಗೆ ಅಂದಾಜು 26.50 ಲಕ್ಷ ರು ವೆಚ್ಚದ ರಸ್ತೆ ಡಾಂಭರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಗಳ ಸವರ್ಾಂಗೀಣ ಅಭಿವೃದ್ದಿಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಮುಂದಾಗಬೇಕು. ನಾಗರೀಕರು ಸಹ ಅಭಿವೃದ್ದಿ
ಗೆ ಕೈಜೋಡಿಸಬೇಕು ಎಂದರು.
ಎಇಇ ರಾಮಣ್ಣ ಬಜಾರಿ, ಬಸವರಾಜ ಮಾಳಗಿ, ಓಂಕಾರ ಪಾಂಚಾಳ, ಸೈಯದ ಮುಜೀದ, ಹನುಮಪ್ಪ ತೋಪೀನ, ಫಕ್ಕಿರಗೌಡ ಪಾಟೀಲ, ಕರಬಸಪ್ಪ ಭಾವಗೌಡ್ರ ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಮತ್ತಿತರರು ಇದ್ದರು.