ಲೋಕದರ್ಶನ ವರದಿ
ಗುರ್ಲಾಪೂರ 18: ಪೂರ್ವ ಜನ್ಮದ ಪುಣ್ಯದ ಫಲವಾಗಿ ನಾವು ಮಾನವರಾಗಿ ಹುಟ್ಟಿದ್ದೇವೆ. ನಾನು ಯಾರು ಎಲ್ಲಿಂದ ಬಂದೆ ಎಲ್ಲಿಗೆ ಹೋಗಬೇಕು ಎನ್ನುವು ಸತ್ಯವನ್ನು ಅರಿತಾಗ ಮಾನವ ಜನ್ಮ ಸಾರ್ಥಕವಾಗುವುದು ಎಂದು ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವತರ್ಿ ಅನ್ನದಾನೇಶ್ವರ ಶ್ರೀಗಳು ಹೇಳಿದರು.
ಅವರು ಮಂಗಳವಾರ ಸಮೀಪದ ಇಟನಾಳ ಗ್ರಾಮದ ಶ್ರೀ ದುಗರ್ಾದೇವಿ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ ದಿನನಿತ್ಯದ ಕಾಯಕದೊಂದಿಗೆ ದೇವರ ಧ್ಯಾನ, ಸತ್ಸಂಗ, ಭಜನೆ, ಕೀರ್ತನೆ ಪಾಲ್ಗೊಂಡು ದಾನ, ಧರ್ಮ ಪರಪೋಕಾರಗಳನ್ನು ಮಾಡುತ್ತಾ ಇರಬೇಕು. ಭಕ್ತರು ಭಕ್ತಿಯ ಉನ್ನತ ಹಂತ ತಲುಪಿದಾಗ ಗುರುವಿಗೆ ಪ್ರೀತಿ ಪಾತ್ರನಾಗುವನು ಚೀಟಿ, ಚಿಪಾತಿಗಳಂತಹ ಮೂಡನಂಭಿಕೆಯಿಂದ ದೂರವಿರಬೇಕು.
ನಾವು ಯಾವುದೇ ಕಾಲಕ್ಕೂ ಮೋಸ ವಂಚನೆ ಸೀಮಿ ಒತ್ತುವ ಹೀನ ಕೃತ್ಯಕ್ಕೆ ಇಳಿಯದೇ ಪುಣ್ಯದ ಮಾರ್ಗದಲ್ಲಿ ನಡೆಯಬೇಕು. ಬಂಡಿಗಣಿ ಮಠವು ನಂಬಿದ ಭಕ್ತರ ಪಾಲಿನ ಕಾಮಧೇನು ಕಷ್ಟದ ಸಮಯದಲ್ಲಿ ಭಕ್ತರು ಭಕ್ತಿಯಿಂದ ಕೂಗಿ ಕರೆದರೆ ಬಸವಣ್ಣ ಪ್ರತ್ಯಕ್ಷನಾಗುವನು. ಆಧಿಶಕ್ತಿ ದುಗರ್ಾದೇವಿಯು ಜಗತ್ತನ್ನು ಕಾಯುವ ಮಹಾಮಾತೆ ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ ಶ್ರೀ ಸಿದ್ದೇಶ್ವರ ಶರಣರು ಮಾತನಾಡಿ ಜಗತ್ತಿನಲ್ಲಿ ಅನ್ಯಾಯ, ಅನೀತಿ, ಅಧರ್ಮ ಹೆಚ್ಚಾದಾಗ ಭಗವಂತನು ಅವತಾರಿಕರ ರೂಪದಲ್ಲಿ ಅವತರಿಸುವನು, ಆ ಅವತಾರವೇ ದಾನೇಶ್ವರ ಶ್ರೀಗಳು ಅವರು ನಾಡಿನ ಮೂಲೆ ಮೂಲೆಯಲ್ಲಿ ನಡೆಸುತ್ತಿರುವ ಅನ್ನ ದಾಸೋಹ, ಜ್ಞಾನ ದಾಸೋಹ, ಅಕ್ಷರ ದಾಸೋಹಗಳಿಂದ ಜ್ಞಾನ ನೀಡುವ ದಾನೇಶ್ವರ ಶ್ರೀಗಳು ಜ್ಞಾನೇಶ್ವರ ಶ್ರೀಗಳು ಸಹ ಹೌದು, "ಇನ್ನೋಬ್ಬರ ಕಣ್ಣಿರನ್ನು ಒರೆಸುವುದ ಧರ್ಮ, ಇನ್ನೋಬ್ಬರ ಕಣ್ಣಿರನ್ನು ತರಿಸುವುದು ಅಧರ್ಮ ತಾಯಿ ದುಗರ್ಾ ಮಾತೆಯನ್ನು ದುಗರ್ಾ ಮಾತೆಯನ್ನು ಭಕ್ತಿಯಿಂದ ಪೂಜಿಸಿದರೆ ಕಾಲ ಕಾಲಕ್ಕೆ ಮಳೆ ಬೆಳೆ ಸಮೃದ್ಧಿಯಾಗುವುದು ಎಂದು ಹೇಳಿದರು.
ಭಕ್ತರು ತಮಗೆ ಆದ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ವೇದಿಕೆ ಮೇಲೆ ಗಿರಿಗೌಡ ಪಾಟೀಲ, ಮುತ್ತಪ್ಪಾ ಡಾಂಗೆ, ಚನಗೌಡ ಪಾಟೀಲ, ಧರೇಪ್ಪಾ ಬಾಗ್ಗೋಳ, ವಿಠ್ಠಲ ಅರಭಾಂವಿ, ಮಾಧು ಮಾರಾಪೂರ, ಸಿದ್ರಾಮ ಅರಭಾಂವಿ, ಬನಪ್ಪಾ ಸುಣಧೋಳಿ, ವಸಂತ ಅಂದಾನಿ, ರವಿ ಕಡಕಭಾಂವಿ, ವಿಠ್ಠಲ ಮೇತ್ರಿ, ಮಹಾದೇವ ಮುತ್ತಪ್ಪಗೋಳ, ಸದಾಶಿವ ಅಂದಾನಿ, ನಿಂಗಪ್ಪಾ ಮಾಂಗ, ಮಲ್ಲಪ್ಪಾ ಸಿದ್ಲಿಂಗಪ್ಪಗೋಳ, ಮಹಾಲಿಂಗ ಕಿರಕಿರಿ ಉಪಸ್ಥಿತರಿದ್ದರು.