ಲೋಕದರ್ಶನವರದಿ
ಮುಧೋಳ 02: ನಮ್ಮ ದೇಶ ವಿವಿಧ ರಾಜ್ಯಗಳು, ವಿವಿಧ ಭಾಷೆಗಳು, ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿದ್ದು ನಾವು ಕನರ್ಾಟಕದ ಜನ ನಮ್ಮ ಮಾತೃ ಭಾಷೆ ಕನ್ನಡ ಗೌರವಿಸುವದರ ಜೊತೆಗೆ, ಅದನ್ನು ಬೆಳೆಸಬೇಕು. ಅಲ್ಲದೇ ಮುಖ್ಯವಾಗಿ ನಾವು ಭಾರತೀಯರು ಎಂಬ ಹೆಮ್ಮೆ, ದೇಶಪ್ರೇಮ ನಮ್ಮದಾಗಬೇಕು. ಹೀಗಾಗಿ ನಾವು ಭಾರತೀಯ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಬೇಕು ಎಂದು ತಿಳಿಸಿದರು.
ನಗರದ ಡಾ||ಎಮ್.ಎಮ್.ಘಾರಗೆ ವಿದ್ಯಾವರ್ಧಕ ಸಂಘದ ಎಮ್.ಕೆ.ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಎಂದರೆ ಮಾತೃಭಾಷೆ, ಹಿಂದಿ ಆಯಿ ಭಾಷೆ, ಇಂಗ್ಲೀಷ ಸಂಪರ್ಕ ಭಾಷೆ ಹೀಗೆ ಎಲ್ಲ ಭಾಷಾ ಜ್ಞಾನ ಹೊಂದಬೇಕು. ನಾವು ಕನ್ನಡಿಗರು ಸಹೃದಯಿಗಳು, ಎಲ್ಲರನ್ನು ಒಪ್ಪಿಕೊಳ್ಳುವುದರ ಜೊತೆಗೆ ವಿಶ್ವದೆಲ್ಲೆಡೆ ಕನ್ನಡಿಗರು ನಮ್ಮ ಕನ್ನಡವನ್ನು ಪಸರಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತ ಮಹಾಂತೇಶ.ಈ.ಕರೆಹೊನ್ನ ಮಾತನಾಡಿ, ನಮ್ಮ ರಾಜ್ಯ ಕನರ್ಾಟಕ, ನಾವು ಕನ್ನಡಿಗರು ಎಂಬ ಹೆಮ್ಮೆಯ ಜೊತೆಗೆ ನಮ್ಮ ರಾಜ್ಯದ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನಮ್ಮ ರಾಜ್ಯದ ಪ್ರಮುಖ ವಿಷಯಗಳು, ನಮ್ಮ ರಾಜ್ಯದ ವೈವಿಧ್ಯತೆಗಳು, ನಮ್ಮ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪಡೆದವರು ಹೀಗೆ ಎಲ್ಲ ವಿಷಯಗಳನ್ನು ಸಂಪೂರ್ಣವಾಗಿ ಅರಿತುಕೊಂಡು ನಾವು ಎಲ್ಲಿಯೇ ಹೋದರೂ ನಮ್ಮ ರಾಜ್ಯದ ಬಗ್ಗೆ ಹೆಮ್ಮೆಯಿಂದ ಹೇಳುವುದರ ಮೂಲಕ ನಮ್ಮ ಕನರ್ಾಟಕದ ಕೀತರ್ಿ ಪತಾಕೆ ಹಾರಿಸಬೇಕು ಎಂದರು.
ಮುಖ್ಯ ಅತಿಥಿ ಪತ್ರಕರ್ತ ಗಣಪತಿರಾವ.ಎಸ್.ಮಾನೆ ಮಾತನಾಡಿ, ಕನರ್ಾಟಕ ಏಕೀಕರಣ, ಕನರ್ಾಟಕ ರಾಜ್ಯದ ಇತಿಹಾಸ ಹಾಗೂ ರಾಜ್ಯದ ಪ್ರಾಮುಖ್ಯತೆಗಳ ಕುರಿತು ಸಂಪೂರ್ಣವಾಗಿ ವಿವರಿಸಿದರು.
ಸಂಸ್ಥೆಯ ಕಾರ್ಯದಶರ್ಿ ಹಾಗೂ ಉಪನ್ಯಾಸಕ ಪಿ.ಎಸ್.ಕುಮಕಾಳೆ ಮಾತನಾಡಿ, ನಮ್ಮ ಸಂಸ್ಥೆಯನ್ನು ಆರಂಭಿಸುವಾಗ ನಮ್ಮ ರಾಜ್ಯದ ಧ್ವಜ ಹೊಂದಿರುವ ಬಣ್ಣಗಳೆರಡನ್ನೂ ನಮ್ಮ ಸಂಸ್ಥೆಯ ಲೋಗೋದಲ್ಲಿ ಅಳವಡಿಸಿಕೊಂಡಿದ್ದೇವೆ. ಕೆಂಪು ಹಾಗೂ ಹಳದಿ ಎರಡೂ ನಮ್ಮ ಲೋಗೋದಲ್ಲಿವೆ. ಇದು ನಮ್ಮ ಸಂಸ್ಥೆ ನಮ್ಮ ರಾಜ್ಯದ ಮೇಲೆ ಹೊಂದಿರುವ ಅಭಿಮಾನದ ಸಂಕೇತವಾಗಿದೆ ಎಂದರು.
ಪ್ರಾಚಾರ್ಯ ಎಸ್.ಬಿ.ಹೆಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಮಗದುಮ್ ಸ್ವಾಗತಿಸಿದರು. ಆನಂದ ಡೋಣಿ ಮತ್ತು ಮಧುಪತಿ ಪಟ್ಟಣಶೆಟ್ಟಿ ನಿರೂಪಿಸಿದರು. ಪಿ.ಜಿ.ವಂದಾಲ ವಂದಿಸಿದರು.
ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.