ರಂಗಭೂಮಿ ಉಳಿವಿಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ: ಮಂಜುನಾಥ ಹಗೇದಾರ
ಧಾರವಾಡ : ಕನ್ನಡ ನಾಡು ಸಾಂಸ್ಕೃತಿಕವಾಗಿ ಸಂಪದ್ಬರಿತವಾದುದು, ವಿವಿಧ ಕಲೆಗಳಿಂದೊಡಗೂಡಿದ ಈ ನಾಡಿನಲ್ಲಿ ರಂಗಭೂಮಿಯ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ ಆದರೆ ನಮ್ಮೆಲ್ಲರ ಪ್ರೋತ್ಸಾಹದ ಕೊರತೆಯಿಂದಾಗಿ ರಂಗಭೂಮಿಯು ಬಡವಾಗುತ್ತದೆಯೆಂದು ಉತ್ತರ ಕನರ್ಾಟಕ ಚಲನಚಿತ್ರ ಮಂಡಳಿಯ ಪ್ರಧಾನ ಕಾರ್ಯದಶರ್ಿ ಹಾಗೂ ಕಲಾವಿಧ ಮಂಜುನಾಥ ಹಗೇದಾರ ತಿಳಿಸಿದ್ದಾರೆ ಅವರು ಧಾರವಾಡ ಜಿಲ್ಲಾ ಕ.ಸಾ.ಪ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಪಾಮಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಇಟಿಗಟ್ಟಿವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಆಶ್ರಯದಲ್ಲಿ ನಡೆದ ಕನ್ನಡ ನಾಡು ನುಡಿ ಕುರಿತು ಉಪನ್ಯಾಸ ಹಾಗೂ ನಾಳೆ ಬಾ ತಾಯವ್ವ ಪೌರಾಣಿಕ ಜಾನಪದ ನಾಟಕ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ರಂಗ ಭೂಮಿ ಕಲಾವಿಧರ ಆಥರ್ಿಕಾಗಿ ಮುಗ್ಗರಿಸಿದ್ದು, ಅವರಿಗೆ ಅವರದೇ ಆದ ಜೀವನದ ನೆಲೆ ಕಂಡುಕೊಳ್ಳಲು ಹಾಗೂ ರಂಗಭೂಮಿ ಬೆಳವಣಿಗೆಗೆ ನಾವೆಲ್ಲ ಸಹಾಯ ಹಸ್ತ ಮಾಡಬೇಕಾಗಿದೆಂದು ಮುಂದುವರೆದು ಮಾತನಾಡಿದರು.
ಉಪನ್ಯಾಸ ನೀಡಿ ಮಾತನಾಡಿದ ಧಾರವಾಡ ತಾಲೂಕಾ ಕ.ಸಾ.ಪ. ಅಧ್ಯಕ್ಷ ಎಫ್. ಬಿ. ಕಣವಿ ಕನ್ನಡ ನಾಡಿದ ಏಕತೆಗೆ ಅನೇಕ ಧೀಮಂತರು ಹಗಲಿರುಳು ಶ್ರಮಿಸಿ ಕನರ್ಾಟಕವನ್ನು ಏಕೀಕರಣ ಗೊಳಿಸಿದ ಈ ಸಂದರ್ಭದಲ್ಲಿ ನಾವೆಲ್ಲ ನಾಡಿನ ಅಂಖಂಡತೆಗೆ ಶ್ರಮಿಸಬೇಕಾಗಿದೆ ಎಂದರು. ಕನ್ನಡ ನಾಡು ಬೌಗೋಳಿಕವಾಗಿ ಸಾಂಸ್ಕೃತಿಕವಾಗಿ ಸರ್ವವಿಧದಲ್ಲಿ ವೈಶಿಷ್ಟ್ಯತೆಯನ್ನು ಮೆರೆದಿದ್ದು ನಾವೆಲ್ಲ ಮನಸ್ಸುಗಳು ಉತ್ತರ ದಕ್ಷಿಣವೆನ್ನದೇ ಸಮಗ್ರತೆಯ ಚಿಂತನೆ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕನರ್ಾಟಕ ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಕೇರಿ ಇಂದಿನ ಯುವಕರು ಕನ್ನಡ ನಾಡಿನ ಏಕೀಕರಣದ ಇತಿಹಾಸವನ್ನು ಸಮಗ್ರವಾಗಿ ತಿಳಿಯಬೇಕಾದ ಅವಶ್ಯಕತೆಇದ್ದು, ಅವರೆಲ್ಲ ದುಶ್ಚಟಗಳನ್ನು ದೂರು ಮಾಡಿ ನಾಡಿನ ಸಂಸ್ಕೃತಿಯ ಉಳಿವಿಗೆ ಚಿಂತನೆ ಮಾಡಬೇಕೆ ಎಂದರು.
ಮುಖ್ಯ ಅತಿಥಿ ಶಿವನಾಂದ ಅಮರಶೆಟ್ಟಿ, ಇಮಾಮಸಾಬ ವಲ್ಲೆಪ್ಪನವರ, ಎಕರೆಪ್ಪ ನಡವಿನಮನಿ, ಸಿದ್ಧಲಿಂಗ ಕುಲಕಣರ್ಿ ಅನೇಕ ಕಲಾವಿದರು ಉಪಸ್ಥಿತರಿದ್ದರು. ಆರಂಭದಲ್ಲಿ ಶಕುಂತಲಾ ಮನ್ನಂಗಿ ಪ್ರಾಥರ್ಿಸಿದರು, ಜಿ.ಟಿ. ದೊಡ್ಡಮನಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರಿಯಾಂಕರವರು ವಂದಿಸಿದರು, ಶಾರದಾ ಕೌರಿ ನಿರೂಪಿಸಿದರು.
ನಂತರ ಸೋಮಶೇಖರ ಜಾಡದ ರಚಿಸಿದ ಪ್ರಭು ಕುಂದರಗಿ ನಿದರ್ೆಶಿಸಿ ಸಂಗೀತ ಸಂಯೋಜನೆಯೊಂದಿಗೆ ಕರಬಸಪ್ಪ ಕರೆಪ್ಪ ರೇವಡಿಹಾಳ ಕಲಾ ತಂಡದಿಂದ ನಾಳೆ ಬಾ ತಾಯವ್ವ ಎಂಬ ಪೌರಾಣಿಕ ಜಾನಪದ ನಾಟಕ ಪ್ರದರ್ಶನಗೊಂಡಿತು. ಮಹದೇವನ ಪಾತ್ರದಲ್ಲಿ ಬಸವರಾಜ ಗುಡ್ಡೆಪ್ಪನವರ ತಾಯವ್ವನ ಪಾತ್ರದಲ್ಲಿ ವಿಜಯ ಪಟ್ಯಾಳ, ಮೇರಿಯಮ್ಮನ ಪಾತ್ರದಲ್ಲಿ ನಿಷಾಂಬ ಹಡಪದ, ಈಶಪ್ಪನ ಪಾತ್ರದಲ್ಲಿ ಶ್ರೀಶೈಲ ಹಂಚನಾಳ, ಡಂಗರು ಸಾರುವ ಪಾತ್ರದಲ್ಲಿ ಬಸವರಾಜ, ಕಾಶೀಮಸಾಬ ಪಾತ್ರದಲ್ಲಿ ಪ್ರಭು ಕುಂದರಗಿ, ದೇವಿ ಪಾತ್ರದಲ್ಲಿ ವಂದನಾ ಕುಂದರಗಿ, ಗೌಡನ ಪಾತ್ರದಲ್ಲಿ ಕರಬಸಪ್ಪ ರೇವಡಿಹಾಳ, ಕೆಂಚವ್ವನ ಪಾತ್ರದಲ್ಲಿ ಶಾಂತವ್ವ ಅಂಬಿಗೇರ, ಭೀಮವ್ವನ ಪಾತ್ರದಲ್ಲಿ ಮೇಘನಾ ಕೊತಬಾಳ ಅಭಿನಯಿಸಿ ಈ ನಾಟಕಕ್ಕೆ ಜೀವತುಂಬುವಲ್ಲಿ ಯಶಸ್ವಿಯಾದರು.