ಬದುಕನ್ನೆ ಬದಲಿಸುವ ತತ್ವ ಸಿದ್ಧಾಂತ ಪ್ರತಿಪಾದಿಸಿದ ವೇಮನರು: ಶಾಸಕ ಪಾಟೀಲ

ಗದಗ 19: ಬಸವವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ತತ್ವಗಳನ್ನು 14ನೇ ಶತಮಾನದಲ್ಲಿ ಜನಸಾಮಾನ್ಯರ ಆಡು ಭಾಷೆಯಲ್ಲಿ ಕಠೋರತೆಯಿಂದ ಪ್ರತಿಪಾದಿಸಿದ ವೇಮನರು ಒಂದು ಜಾತಿ ಧರ್ಮ ವರ್ಗ ಹಾಗೂ ಕಾಲಕ್ಕೆ ಸೀಮಿತರಲ್ಲ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ಗದಗ ಬೆಟಗೇರಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘ ಗದಗ ಇವರ ಸಹಕಾರದಲ್ಲಿ ಆಯೋಜಿತ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಗ್ರಹ ಪೂಜೆಯನ್ನು ವಿರೋಧಿಸಿದ ಅವರು ಬಂಂ ಬಂಂದ ವಸ್ತ್ರಗಳು ನಿಮಗೇಕಯ್ಯ ಎಂದು ದೇವರನ್ನೆ ಪ್ರಶ್ನಿಸಿದ ವೇಮನರ ಸಂದೇಶಗಳು ಭಾರತ ಸಂವಿಧಾನ ಅಳವಡಿಸಿಕೊಂಡು ದಶಕಗಳೇ ಉರುಳಿದರೂ ಸಮಾನತೆ ಇನ್ನೂ ಮರೀಚಿಕೆಯಾಗಿರುವ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಭಾತೃತ್ವ ಮೂಡಿಸುವಲ್ಲಿ ಇಡೀ ಊರಿಗೆ ಒಂದೇ ಊಟದ ತಟ್ಟೆಯನ್ನು ಇಟ್ಟ ಮಹಾನುಭಾವ ವೇಮನರ ತತ್ವಸಿದ್ದಾಂತಗಳು ಬದುಕನ್ನೇ ಬವದಲಿಸುವ ಶಕ್ತಿ ಹೊಂದಿವೆ. ಕನರ್ಾಟಕ ವಿಶ್ವ ವಿದ್ಯಾಲಯದ ವೇಮನ ಪೀಠ ಅವರ ಸಂದೇಶಗಳ ಪ್ರಕಟನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಎಚ್.ಕೆ.ಪಾಟೀಲರು ನುಡಿದರು.

ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮುಗಳಖೋಡ ಅಬ್ಬಿಗೇರಿ ಶಾಖಾ ಮಠದ ಬಸವರೆಡ್ಡಿ ಸ್ವಮಿಜಿ ಸಾನಿಧ್ಯವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ. ಅವರು ಮಾತನಾಡಿ ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು ಸಂತರು ಶರಣರು ಬಹು ಮಹತ್ವದ ಪಾತ್ರವಹಿಸಿದ್ದು ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ. ಅವರ ಆಡುಭಾಷೆಯ ಪದ್ಯಗಳಲ್ಲಿನ ತತ್ವಗಳು ಮನಪರಿವರ್ತನೆಗೊಳಿಸುವ  ಮಾರ್ಗದಶರ್ಿ ಸೂತ್ರಗಳನ್ನು ಹೊಂದಿವೆ. ಮುಂದಿನ ಮಾನವ ಪೀಳಿಗೆಗೆ ಅವರ ತತ್ವ ಸಿದ್ದಾಂತಗಳನ್ನು ಪರಿಚಯಿಸಲು ಅವರ ಜಯಂತಿ ಆಚರಣೆ ಸಮಯೋಚಿತವಾಗಿದೆ ಎಂದರು.

ಮಹಾಯೋಗಿ ವೇಮನರ ಜೀವನ ಮತ್ತು ಸಂದೇಶ ಕುರಿತು ಡಾ.ಕೆ. ರವೀಂದ್ರನಾಥ ಉಪನ್ಯಾಸ ನೀಡಿ ವರ್ಣ, ಲಿಂಗ, ಕೆಳ, ಮೇಲ್ವರ್ಗ ಎಂಬ ಬೇಧ ಭಾವವಿಲ್ಲದೇ ನಾಲ್ಕುಸಾಲಿನ ಮುಕ್ತಗಳ ಮೂಲಕ ದಾಕ್ಷಿಣ್ಯವಿಲ್ಲದೇ, ಸಮಾಜದಲ್ಲಿನ ಅನಿಷ್ಟ ಪರಂಪರೆ, ಪದ್ಧತಿಗಳ ವಿರುದ್ಧ ವೇಮನರು ಬಂಡಾಯ ಸಾರಿದ್ದರು ಎಂದರು. ಮೂಲತಹ ಜಗದ ಮಾನವರೆಲ್ಲ ಒಂದೇ ಎಂದು ವಿಶ್ವಧರ್ಮ ಪ್ರತಿಪಾದಿಸಿದ ವೇಮನ ಶ್ರೇಷ್ಠ ದಾರ್ಶನಿಕರು.  ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳು ರಚಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣದಲ್ಲಿ ವೇಮನರ ಜೀವನ ಕುರಿತು ಸಾಕಷ್ಟು ಸಂಗತಿಗಳು ಕಾಣಸಿಗುತ್ತವೆ. 1324 ರಿಂದ 1424ರ ಶತಮಾನದ ಅವಧಿಯ ರಡ್ಡಿ ಸಮುದಾಯದ ಚರಿತ್ರೆಯಲ್ಲಿ ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮ ಅವರು ಸಾಂಸ್ಕೃತಿಕ ನಾಯಕರಾಗಿ ಅಜರಾಮರರಾಗಿದ್ದಾರೆ ಎಂದು ಡಾ. ರವೀಂದ್ರನಾಥ ನುಡಿದರು.  

ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್. ಪಾಟೀಲ, ನರಗುಂದ ತಾ.ಪಂ. ಅಧ್ಯಕ್ಷ ವಿಠ್ಠಲ ಗೋವಿಂದರಡ್ಡಿ ತಿಮ್ಮರಡ್ಡಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ಡಾ. ಪ್ರವೀಣ ಸಾಲಿಗೌಡರ, ರವೀಂದ್ರನಾಥ ಜಿ ದೊಡ್ಡಮೇಟಿ, ವಿರುಪಾಕ್ಷಪ್ಪ ಮೇಟಿ, ರಮೇಶಪ್ಪ ಭೂಮರಡ್ಡಿ, ಎನ್.ಬಿ. ಪಾಟೀಲ,  ಎನ್.ಎನ್. ಗೋಕಾವಿ, ಎಸ್.ಜಿ. ಕೋನರಡ್ಡಿ, ಆರ್.ಎಸ್.ಪಾಟೀಲ, ಕೆ.ಬಿ. ಗಡಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಾಯೋಗಿ ವೇಮನ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಅಧ್ಯಕ್ಷ ರವೀಂದ್ರನಾಥ ಮೂಲಿಮನಿ ಜಿಲ್ಲಾ ರಡ್ಡಿ ಸಮುದಾಯದ ಗಣ್ಯರಾದ ಕರಬಸಪ್ಪ ಹಂಚಿನಾಳ, ಶೇಖರರಡ್ಡಿ, ಜಯಶ್ರೀ ಕೋಲ್ಕಾರ, ಶಿವನಗೌಡ ಹಳ್ಳೂರ, ಗುರುಹಿರಿಯರು, ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ  ಸ್ವಾಗತಿಸಿದರು. ಜೇನುಗೂಡು ಕಲಾಂಡದಿಂದ ನಾಡಗೀತೆ ಹಾಗೂ ವಿರೇಶ್ವರ ಪುಣ್ಯಾಶ್ರಮದ ಕಲಾವಿದರಿಂದ ಸಂಗೀತಸೇವೆ ನಡೆಯಿತು.