ವೇಮನರು ಲೋಕಶಾಂತಿಯನ್ನು ಜಗತ್ತಿಗೇ ಸಾರಿದ ಮಹನೀಯರು: ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ 19: ಮಹಾಯೋಗಿ ವೇಮನರು ಲೋಕಶಾಂತಿಯನ್ನು ಸಾರಿದ ಮಹಾತ್ಮರು. ಅವರ ಜೀವನದ ಮೂಲಕ ಮನುಕುಲಕ್ಕೆ ಮಹತ್ತರ ಸಂದೇಶವನ್ನು ನೀಡಿದರು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವೇಮನರು ಜಾತಿ, ಧರ್ಮಗಳನ್ನು ಮೀರಿ ಲೋಕಶಾಂತಿಯನ್ನು ಸಾರಿದರು. ಆದರ್ಶದ ಜೀವನವನ್ನು ನಡೆಸಿ ಸಮಾಜಕ್ಕೆ ಅನುಕರಣೀಯ ತತ್ವಗಳನ್ನು ತಮ್ಮ ವಚನಗಳ ಮೂಲಕ ಬೋಧಿಸಿದರು. ಅವರ ಜೀವನದ ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಇರಕಲ್ಲಗಡಾದ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಸಹಾಯಕ ಪ್ರಧ್ಯಾಪಕರಾದ ಪ್ರೊ. ಶಂಕ್ರಯ್ಯ ಅಬ್ಬಿಗೇರಿಮಠ ಮಾತನಾಡಿ,  ವೇಮನರು  ಕ್ರಿ.ಶ. 1412ರಲ್ಲಿ ರಾಜಮನೆತನದ ಕುಮಾರಗಿರಿರಡ್ಡಿ ಅವರ ಮಗನಾಗಿ ಜನಿಸಿ ತತ್ವಜ್ಞಾನಿಯಾಗಿ, ರಾಜಯೋಗಿಯಾದರು. ಅವರ ಅತ್ತಿಗೆಯಾದ ಹೇಮರಡ್ಡಿ ಮಲ್ಲಮ್ಮನವರ ಪ್ರಭಾವದಿಂದ ಜೀವನದ ನಶ್ವರತೆಯನ್ನು ಅರಿತು ರಾಜಭೋಗಗಳನ್ನು ತೊರೆದು ವಿರಾಗಿಯಾದರು. ಸ್ವ-ಅನುಭವ ಸಾರ್ವಭೌಮರಾದರು. ತಮ್ಮ ಜೀವನದ ಅನುಭವಗಳಿಂದಲೇ ಜನಮಾನಸದಲ್ಲಿ ಉಳಿಯುವಂತ ತ್ರಿಪದಿ, ಚೌಪದಿಗಳನ್ನು ರಚಿಸಿದರು. ಗ್ರಾಮ್ಯ ತೆಲುಗು ಭಾಷೆಯಲ್ಲಿ ಅವರು ರಚಿಸಿದ ಅನೇಕ ತ್ರಿಪದಿ, ಚೌಪದಿಗಳನ್ನು, ಪದ್ಯಗಳನ್ನು ಹುಲಕೋಟಿಯ ವೇಮನ ಪೀಠದ ಎಸ್.ಆರ್. ಪಾಟೀಲ್ ಅವರು ವೇಮನ ಮೀಮಾಂಸೆ ಎಂಬ ಹೆಸರಿನಲ್ಲಿ ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. 

ಕಾರ್ಯಕ್ರಮದ ಮುಖ್ಯ  ಅತಿಥಿಯಾಗಿ ಆಗಮಿಸಿದ್ದ ಸಿ.ವಿ. ಚಂದ್ರಶೇಖರ ಮಾತನಾಡಿ ವೇಮನರ ತತ್ವ, ಆದರ್ಶಗಳ ಕುರಿತ ಮಾತುಗಳು ಜಯಂತಿಗೆ ಮಾತ್ರ ಮೀಸಲಾಗದೇ ನಮ್ಮ ದೈನಂದಿನ ಜೀವನದ ಕ್ರಮವಾಗಬೇಕು. ಸಮುದಾಯದ ಮಹನೀಯರಾದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಜಯಂತಿಗಳನ್ನು ಒಂದೇ ದಿನ, ಒಟ್ಟಿಗೆ ಆಚರಿಸುವಂತಾಗಬೇಕು. ಈ ಕುರಿತು ಜಿಲ್ಲೆಯ ಸಮುದಾಯದ ಮುಖಂಡರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ತಹಶೀಲ್ದಾರ ಜೆ.ಬಿ. ಮಜ್ಗಿ, ನಗರಸಭೆ ಪೌರಾಯುಕ್ತ ಮಂಜುನಾಥ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ದೊಡ್ಡಬಸಪ್ಪ ನೀರಲಕೇರಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಮಹಾಂತೇಶ ಮಲ್ಲನಗೌಡರ, ಸಮಾಜದ ಮುಖಂಡರಾದ ಪ್ರಭು ಹೆಬ್ಬಾಳ, ವಿರುಪಣ್ಣ, ಎಚ್.ಎನ್. ಹಿರೇಗೌಡರ್, ಸುರೇಶ ಮಾದಿನೂರು, ಬಸವರಡ್ಡಿ ಹಳ್ಳಿಕೇರಿ, ಭರಮಪ್ಪ ನಗರ, ಸೇರಿದಂತೆ ಸಮುದಾಯದ ಬಾಂಧವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂತರ್ಿ ದೇಸಾಯಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲರಾದ ಸಿ.ವಿ. ಜಡಿಯವರ ನಿರೂಪಿಸಿದರು. ಕಲಾವಿದರಾದ ಭಾಷಾ ಹಿರೇಮನಿ ಹಾಗೂ ಸಂಗಡಿಗರು ಸುಗಮ ಸಂಗೀತ ಹಾಗೂ ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.