ವಿಜಯಪುರ: ಕೆರೆ ತುಂಬಿಸುವ ಯೋಜನೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ವಿಜಯಪುರ ಜಿಲ್ಲೆ ಇದೀಗ ರಕ್ಷಣಾ ಇಲಾಖೆ ವ್ಯಾಪ್ತಿಯ ನಗರದ ಸೈನಿಕ ಸ್ಕೂಲ್ನಲ್ಲಿ ನೂತನವಾಗಿ ಕೆರೆಯನ್ನು ನಿಮರ್ಿಸಿದ್ದು, ಆ ಕೆರೆಗೆ ಕೃಷ್ಣಾ ನದಿನೀರು ತುಂಬಿಸುತ್ತಿರುವ ಮೂಲಕ ಮತ್ತೊಮ್ಮೆ ನಾಡಿನ ಗಮನ ಸೆಳೆದಿದೆ.
ವಿಜಯಪುರದಲ್ಲಿ 1963 ರಲ್ಲಿ ಅಥಣಿ ರಸ್ತೆಯಲ್ಲಿ 406 ಎಕರೆ ವಿಸ್ತೀರ್ಣದ ಸೈನಿಕ್ ಶಾಲೆ ಆವರಣ ಮಡ್ಡಿ ಭೂಮಿಯ ಒಣಪ್ರದೇಶ. ಇಲ್ಲಿ ನೀರಿನ ಸೌಲಭ್ಯ ಕಡಿಮೆ. ಹೀಗಾಗಿ ಸೇವೆ ಸಲ್ಲಿಸಿರುವ ಎಲ್ಲ ಪ್ರಾಚಾರ್ಯರು ಸೈನಿಕ್ ಸ್ಕೂಲ್ ಪ್ರದೇಶವನ್ನು ಹಸಿರಿಕರಣ ಮಾಡಲು ಅಪಾರ ಶ್ರಮ ವಹಿಸಿ 15ಸಾವಿರ ಗಿಡಗಳನ್ನು ಇಲ್ಲಿ ಪೋಷಿಸಿಕೊಂಡು ಬರಲಾಗಿದೆ.
ಪ್ರಾಚಾರ್ಯ ತಮೊಜಿತ ಬಿಸ್ಪಾಸ್ ಕೊರಿಕೆಯ ಮೆರೆಗೆ 2016ರಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ಇಲ್ಲಿನ ಹೂಳು ತುಂಬಿ ಮುಚ್ಚಿ ಹೋಗಿದ್ದ ಆದಿಲ್ಶಾಹಿ ಕಾಲದ 6 ಬಾವಡಿಗಳನ್ನು ಪುನರುಜ್ಜೀವನಗೊಳಿಸಿದ್ದು, ಈಗ ಈ ಭಾವಿಗಳು ಮರಭೂಮಿಯಲ್ಲಿ ಓಯಾಸಿಸ್ ಎಂಬಂತೆ ಸೈನಿಕ್ಸ್ಕೂಲ್ನ ಮಡ್ಡಿ ಪ್ರದೇಶದಲ್ಲಿ ಜೀವ ಸೆಲೆಯಾಗಿದೆ. ಅದರಿಂದ ಪ್ರೇರಣೆಗೊಂಡ ಸಿಬ್ಬಂದಿ ಟಕ್ಕೆ ಪ್ರದೇಶಕ್ಕೆ ಹೊಂದಿಕೊಂಡ ತಮ್ಮ ಆವರಣದಲ್ಲಿ ಸಣ್ಣ ಕೆರೆಯನ್ನು ನಿಮರ್ಿಸಲು ನಿವೇಶನ ಸೂಕ್ತವಾಗಿದ್ದು, ತಾವೇ ಮುತುವಜರ್ಿ ವಹಿಸಿ, ಅನುದಾನ ನೀಡಿ ಕೆರೆ ನಿಮರ್ಿಸಬೇಕು ಎಂದರು.
ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಹಾನಗರ ಪಾಲಿಕೆಯಿಂದ 30ಲಕ್ಷ ಅನುದಾನ ಒದಗಿಸಿ 2 ಎಕರೆ ಪ್ರದೇಶದಲ್ಲಿ ಕೆರೆ ನಿಮರ್ಿಸಿದ್ದಲ್ಲದೆ, ತಾವಾಗಿಯೇ ಒಂದು ಹೆಜ್ಜೆ ಮುಂದೆ ಹೋಗಿ ಸೈನಿಕಸ್ಕೂಲ್ ಬದಿಯ ರಿಂಗ್ರೋಡ್ಗೆ ಹೊಂದಿಕೊಂಡಂತೆ ಐತಿಹಾಸಿಕ ಬೇಗಂ ತಲಾಬ್, ಭೂತನಾಳ ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಪೈಪ್ಲೈನ್ನಿಂದ ಸೈನಿಕ್ಸ್ಕೂಲ್ ನೂತನ ಕೆರೆಗೂ ಜೋಡಣೆ ಮಾಡಿದರ ಪರಿಣಾಮ ಇಂದಿನಿಂದ ಇಲ್ಲಿನ ಕೆರೆ ತುಂಬುತ್ತಿದೆ.
ಸೈನಿಕ ಸ್ಕೂಲ್ ಪ್ರದೇಶ ರಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇದು ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಪಾದಚಾರಿಗಳ, ವಾಹನಗಳ ಹಾವಳಿ ಇಲ್ಲದೆ ಇರುವದರಿಂದ ಇಲ್ಲಿ ಹೇರಳವಾಗಿ ನವಿಲು, ಕೊಕ್ಕರೆ, ಪಕ್ಷಿ ಸಂಕುಲಗಳ ಸಂಖ್ಯೆ ಹೆಚ್ಚು. ಈ ಕೆರೆ ತುಂಬುವದರಿಂದ ಕೇವಲ ಸೈನಿಕ್ಸ್ಕೂಲ್ ಆವರಣವಲ್ಲದೇ ಸುತ್ತಿಲಿನ ಖಾಜಾಅಮೀನ ದಗರ್ಾ, ಟಕ್ಕೆ, ಟ್ರೇಜರಿ ಕಾಲೋನಿಗಳಲ್ಲಿ ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವದು. ಮತ್ತು ಸ್ಕೂಲ್ನ ವ್ಯಾಪ್ತಿಯಲ್ಲಿರುವ 50ಎಕರೆ ಪ್ರದೇಶದಲ್ಲಿರುವ ತೋಟಕ್ಕೆ ವಿಫುಲವಾಗಿ ನೀರು ದೊರೆಯುವದಲ್ಲದೆ, ಇಡೀ ಪ್ರದೇಶ ಹಸಿರಿನಿಂದ ಕಂಗೊಳಿಸಲು ಸಹಕಾರಿಯಾಗಲಿದೆ ಎಂದು ಆಡಳಿತಾಧಿಕಾರಿ ಮುರಳಿಧರನ್ ತಿಳಿಸಿದ್ದಾರೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ಸೈನಿಕ ಸ್ಕೂಲ್ ಅಧಿಕಾರಿಗಳ ಕೋರಿಕೆ ಮೆರೆಗೆ ಈ ಹಿಂದೆ ಆದಿಲ್ಶಾಹಿ ಕಾಲದ ಇಲ್ಲಿನ 6ಬಾವಡಿಗಳನ್ನು ಹೂಳು ತೆಗೆದು, ಸುತ್ತಲೂ ಫೆನಿಶಿಂಗ್ ಅಳವಡಿಸಲಾಗಿತ್ತು. ನಂತರ ನಾನೇ ಮಹಾನಗರ ಪಾಲಿಕೆ ಅನುದಾನ ಒದಗಿಸಿ, ಕೆರೆ ನಿಮರ್ಾಣಕ್ಕೆ ಚಾಲನೆ ನೀಡಿದ್ದೆ. ಅಲ್ಲದೆ ಆ ಕೆರೆಗೆ ಭೂತನಾಳ ಕೆರೆ ತುಂಬಿಸುವ ಪೈಪ್ಲೈನ್ಗೆ ಜೊಡಣೆ ಮಾಡಿ ತುಂಬಲು ಯೋಜನೆ ಮಾಡಿದ್ದು, ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಸೈನಿಕ್ಸ್ಕೂಲ್ ಆವರಣಕ್ಕೆ ವಿಶೇಷ ಕಳೆ ಬಂದಿದೆ ಎಂದು ಹೇಳಿದ್ದಾರೆ.