ಸಂಬರಗಿ ಗ್ರಾಮದ ಅಗ್ರಾಣಿಿ ನದಿಗೆ ನೀರು: ರೈತರಿಗೆ ಅನುಕೂಲ
Water to Agrani River in Sambaragi village: Benefit for farmers
ಸಂಬರಗಿ 02: ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದ ಹಿಂದೆ ಭಾರಿ ಮಳೆಯಾದ ಕಾರಣ ಗಡಿ ಭಾಗದ ಗ್ರಾಮಗಳಲ್ಲಿ ಇರುವ ಅಗ್ರಾಣಿ ನದಿಗೆ ನೀರು ಬಂದಿದ್ದು ಸಂಬರಗಿ, ತಾಂವಶಿ, ಪಾಂಡೇಗಾಂವ ಬಂದರಿಗೆ ನೀರು ಬಂದಿದೆ. ಈ ನೀರಿನಿಂದ ನದಿ ತೀರದ ರೈತರಿಗೆ ಅನುಕೂಲವಾಗಿದೆ. ಆದರೆ ಮುಂದಿನ ಅಗ್ರಾಣಿ ನದಿಗೆ ನೀರು ಹರಿಯುತ್ತಿಲ್ಲ.
ಸತತವಾಗಿ ಬರಗಾಲಕ್ಕೆ ಸಿಕ್ಕು ಈ ಭಾಗದ ರೈತರು ನರಳುತ್ತಿದ್ದರು. ಆದರೆ ಈ ವರ್ಷ ಮಳೆಯ ಹಂಗಾಮ ಪ್ರಾರಂಭವಾಗುವದಕ್ಕಿಂತ ಮುಂಚಿತವಾಗಿ ಮಹಾರಾಷ್ಟ್ರದಲ್ಲಿ ಮಳೆಯಾದ ನಂತರ ಅಗ್ರಾಣಿ ನದಿಗೆ ನೀರು ಬಂದು ಅಗ್ರಾಣಿ ನದಿಯ ಮೇಲೆ ಇರುವ ನಾಲ್ಕು ಬಂದರಿನಲ್ಲಿ ನೀರು ಸಂಗ್ರಹವಾದ ನಂತರ ಬಂದರಿನ ಬಾಗಿಲು ಮುಚ್ಚಿರುವ ಕಾರಣ ಮುಂದೆ ನೀರು ಹರಿಯಲು ಸ್ಥಗಿತಗೊಂಡಿದೆ. ಕರ್ನಾಟಕದ-ಮಹಾರಾಷ್ಟ್ರ ಗಡಿಯಿಂದ ಸುಮಾರು 55 ಕಿ.ಮೀ ಅಥಣಿ ತಾಲೂಕಿನ ಖೋತವಾಡಿ ಗ್ರಾಮದಿಂದ ಅಂತಹವಿದ್ದು, ಮುಂದೆ ಕೃಷ್ಣಾನದಿಗೆ ಹುಲಗಬಾಳಿ ಗ್ರಾಮಕ್ಕೆ ತಲುಪಿದೆ. ಅಗ್ರಾಣಿ ನದಿಯ ಮೇಲೆ ಪ್ರತ್ಯೇಕ ಗ್ರಾಮದ ಹತ್ತಿರ ಬಂದರು ಇದ್ದು, ಪಾಂಡೇಗಾಂವ, ಖೀಳೇಗಾಂವ, ಶಿರೂರ, ಸಂಬರಗಿ, ತಾಂವಶಿ ಗ್ರಾಮಗಳ ಹತ್ತಿರ ಬಂದರುಗಳು ಇದ್ದು, ಆ ಬಂದರುಗಳು ತುಂಬಿ ತುಳುಕಿದ್ದಾವೆ. ಆದರೆ ಬಂದರುಗಳ ಬಾಗಿಲುಗಳನ್ನು ಮುಚ್ಚಿದ ಪರಿಣಾಮ ಮುಂದೆ ನೀರು ಹರಿಯುತ್ತಿಲ್ಲ. ಹಿಂದೆ ಮಳೆ ಇಲ್ಲ. ಆ ಕಾರಣ ಈ ಸಂಗ್ರಹಗಳ ನೀರಿನಿಂದ ಅಗ್ರಾಣಿ ತೀರದಲ್ಲಿರುವ ಐದು ಗ್ರಾಮಕ್ಕೆ ಅನುಕೂಲವಾಗಿದೆ.
ಈ ವರ್ಷ ಗಡಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಸಹ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಅಗ್ರಾಣಿ ನದಿಗೆ ನೀರು ಬಂದಿದ್ದು, ರೈತರಿಗೆ ಅನುಕೂಲವಾಗಿದೆ. ಸರ್ಕಾರ ಪ್ರತಿ ಗ್ರಾಮಕ್ಕೆ ಎರಡೆರಡು ಬಂದರುಗಳನ್ನು ನಿರ್ಮಾನ ಮಾಡಿದರೆ ನೀರು ಸಂಗ್ರಹ ಮಾಡಲು ಅನುಕೂಲವಾಗುತ್ತದೆ. ಕೆವಲ ನಾಲ್ಕು ಬಂದರುಗಳಿಗೆ ಮಾತ್ರ ನೀರು ಬಂದಿದೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 