ಜತ್ತ ತಾಲೂಕಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಟ್ಯಾಂಕರ್ ಮುಖಾಂತರ ನೀರು ಸರಬರಾಜು
Water problem in villages of Jatta taluk: Water supply through tankers
ಸಂಬರಗಿ 12: ಕರ್ನಾಟಕ ರಾಜ್ಯದ ಗಡಿ ಭಾಗದಿಂದ ಕೆಲವೇ ಅಂತರದಲ್ಲಿ ಇರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಕನ್ನಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ.
ಅಥಣಿ ತಾಲೂಕಿಗೆ ಹೊಂದಿಕೊಂಡಿರುವ ಜತ್ತ ತಾಲೂಕಿನ ಅಚ್ಚ ಕನ್ನಡಿಗರ ಗ್ರಾಮಗಳಾದ ಗೂಗವಾಡ, ಬಸರಗಿ, ವಜ್ರವಾಡ, ಯಕ್ಕುಂಡಿ, ಜಿರಗ್ಯಾಳ ಇನ್ನೀತರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಿದೆ. ಮಳೆಯಾದರೂ ಸಹ ನೀರಿನ ಸಮಸ್ಯೆ ದೂರವಾಗಿಲ್ಲ. ಸುಮಾರು ಹತ್ತು ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ವಾರದಲ್ಲಿ ಎರಡು ಸಲ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಆ ನೀರು ಗ್ರಾಮಸ್ಥರಿಗೆ ಪೂರೈಕೆ ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ. ನೀರಿನ ಸಮಸ್ಯೆ ದಿನ ದಿನಕ್ಕೆ ಹೆಚ್ಚಿತ್ತಿದೆ.
ಈ ಭಾಗದಲ್ಲಿ ಮಳೆಯಾದರೂ ಸಹ ಕೊಳವೆ ಭಾವಿಗೆ ಹಾಗೂ ತೆರೆದ ಬಾವಿಗೆ ನೀರಿನ ಮಟ್ಟ ಹೆಚ್ಚಿಲ್ಲ. ತೋಟದ ವಸತಿಗೆ ನೀರಿನ ಕೊರತೆ ಹೆಚ್ಚಿದೆ. ಮಹಾರಾಷ್ಟ್ರ ಸರಕಾರ ಗಮನ ಹರಿಸಿ ಕರ್ನಾಟಕ ಗಡಿ ಹೊಂದಿರುವ ಗ್ರಾಮಗಳಿಗೆ ದಿನನಿತ್ಯ ನೀರಿನ ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ. ವಾರಗಳ ಕಾಲ ನೀರಿನ ಸಂಗ್ರಹ ಮಾಡಿ ಸೇವಿಸುವುದಾಗಿದೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 