ಕೊಪ್ಪಳ 07: ``ಜಲಶಕ್ತಿ ಅಭಿಯಾನ'' ಕಾರ್ಯಕ್ರಮದಡಿ ಜಲಸಂರಕ್ಷಣೆಯ ಕುರಿತು ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನಕ್ಕೆ ಕೇಂದ್ರ ತಂಡ ಕೊಪ್ಪಳ ಜಿಲ್ಲೆಗೆ ಇಂದು (ಆಗಸ್ಟ್.07) ಭೇಟಿ ನೀಡಿತು.
ಜಲಶಕ್ತಿ ಅಭಿಯಾನದ ಕುರಿತು ಜಲಸಂರಕ್ಷಣೆಯ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ಮಾಡಲು ಭಾರತ ಸಕರ್ಾರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರಾದ ಪ್ರವೀಣ ಮೆಹತೋ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶಕರಾದ (ಎಚ್.ಕ್ಯೂ) ಎಸ್.ಕೆ. ಝಾ ಮತ್ತು ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಜಲಶಕ್ತಿ ಅಭಿಯಾನ ಮಂತ್ರಾಲಯದ) ವಿಜ್ಞಾನಿ ಪರಾಗ್ ಅರುಣ ಕಶ್ಯಪ್ ರವರನ್ನೊಳಗೊಂಡ ಕೇಂದ್ರ ತಂಡವು ಜಿಲ್ಲೆಗೆ ಆಗಮಿಸಿದ್ದು, ಯಲಬುರ್ಗಾ ತಾಲ್ಲೂಕು ಪಂಚಾಯತ್ ಆವರಣದಲ್ಲಿ ದೇವರಾಜ್ ಅರಸು ಭವನದಲ್ಲಿ ನಿರ್ಮಾಣ ಮಾಡಲಾದ ಮಳೆ ನೀರು ಕೊಯ್ಲು ಕಾಮಗಾರಿ, ಕೆಂಪು ಕೆರೆ, ಮುಧೋಳ ಕೆರೆ ಹಾಗೂ ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮಳೆ ನೀರು ಕೋಯ್ಲಿನ ಕಾಮಗಾರಿ, ಇಂಗು ಗುಂಡಿ ಕಾಮಗಾರಿಗಳ ಕುರಿತು ಪರಿವೀಕ್ಷಣೆ ಮಾಡಿದರು.
ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತು ಇತರೆ ಜಲ ಮೂಲಗಳನ್ನು ಅಭಿವೃದ್ಧಿ ಪಡಿಸಲು ಸಾಂಪ್ರದಾಯಕ ಜಲ ಮೂಲಗಳನ್ನು ಪುನಶ್ಚೇತನಗೊಳಿಸಬೇಕು. ಮಳೆ ನೀರನ್ನು ಸಂರಕ್ಷಿಸಲು ಮಳೆ ನೀರಿನ ಕೊಯ್ಲಿನ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು. ಮಳೆ ನೀರನ್ನು ಭೂಮಿಗೆ ಇಂಗಿಸಲು ಇಂಗು ಗುಂಡಿಗಳನ್ನು ಹೆಚ್ಚು ಹೆಚ್ಚಾಗಿ ನಿಮರ್ಿಸಬೇಕು. ಕಂದಕ ಬದು ನಿಮರ್ಾಣ ಹಾಗೂ ಹೆಚ್ಚು ಗಿಡಮರಗಳನ್ನು ನೆಡಬೇಕು ಎಂದು ಕೇಂದ್ರ ತಂಡವು ಸಲಹೆ ನೀಡಿತು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂತರ್ಿ, ಉಪ ಕಾರ್ಯದರ್ಶಿ ಎನ್.ಕೆ. ತೊರವಿ, ಯಲಬುಗರ್ಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಮೋಹನ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.