ಧಾರವಾಡ 12: ಧಾರವಾಡ ಜಿಲ್ಲೆಯ ಪ್ರತಿ ಹೊಲಕ್ಕೂ ನೀರು ಮೇಲ್ನೋಟಕ್ಕೆ ಅಸಾಧ್ಯ ಎಂದು ಕಂಡರೂ ಸಾಧ್ಯತೆಯ ಅಂಶಗಳು ಸಮನಾಗಿ ಇವೆ ಎಂದು ಇಲ್ಲಿ ಸೇರಿದ್ದ ನೀರಾವರಿ ಪರಿಣಿತರ ಚಿಂತನ-ಮಂಥನ ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಕನರ್ಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ `ಧಾರವಾಡ ಜಿಲ್ಲೆಯ ಪ್ರತಿ ಹೊಲಕ್ಕೂ ನೀರು' ಒಂದು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮೇಲಿನ ಅಭಿಪ್ರಾಯ ಮೂಡಿ ಬಂದಿತು.
ರಾಜ್ಯ ನೀರಾವರಿ ಇಲಾಖೆಯ ಕಾರ್ಯನಿವರ್ಾಹಕ ಅಭಿಯಂತ ಲಿಂಗರಾಜ ಸರ್ದೇಸಾಯಿ ಪ್ರಾರಂಭದಲ್ಲಿ ಮಾತನಾಡಿ, ಇದ್ದ ನೀರಿನ ಸದ್ಬಳಕೆಗೆ ಮಹತ್ವ ನೀಡಬೇಕಾಗಿದೆ. ಕೃಷಿ ಕಾರ್ಯಗಳಲ್ಲಿ ನೀರಿನ ಪೋಲು ಹೆಚ್ಚಾಗುತ್ತಿವೆ ಎಂಬ ಅಂಶ ಅಧ್ಯಯನದಿಂದ ಕಂಡು ಬಂದಿದೆ. ಕೃಷಿ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ನೀರು ವ್ಯರ್ಥವಾಗಿ ಪೋಲಾಗುವುದನ್ನು ನಿಲ್ಲಿಸುವ ಕ್ರಮಗಳ ಬಗ್ಗೆ ಆಳವಾದ ಅಧ್ಯಯನ ಆರಂಭವಾಗಿರುವುದು ಸಂತೋಷದ ಸಂಗತಿಯಾಗಿದೆ. ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರಾವರಿಗೆ ಒಳಪಟ್ಟ ಕ್ಷೇತ್ರಗಳಲ್ಲಿ ಕಾಲುವೆಗಳ ಹಾಳಾಗಿದ್ದು, ನೀರಾವರಿಗೆ ಒಳಪಟ್ಟ ಕೊನೆಯ ಹಂತದ ಜಮೀನುಗಳಿಗೆ ನೀರು ದಕ್ಕದೆ ಇರುವುದು ಕಂಡು ಬಂದಿದೆ, ಹಾಗೆ ನೀರು ವ್ಯರ್ಥವಾಗಿ ಕೃಷಿಗೆ ಬಳಕೆಯಾಗದೆ ಹಳ್ಳಗಳನ್ನು ಸೇರಿ ಪೋಲಾಗುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿಯೇ ಮಲಪ್ರಭಾ ಬಲದಂಡೆ ಕಾಲುವೆಯ ಪುನರುಜ್ಜೀವನ ಮಾಡಬೇಕೆಂಬ ಯೋಜನೆ ಕಾಯರ್ಾರಂಭವಾಗಿದ್ದು, ಆ ಮೂಲಕ ನೀರಿನ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಮಲಪ್ರಭಾ ಬಲದಂಡೆ ಕಾಲುವೆಯ ನೀರಾವರಿಗೆ ಒಳಪಟ್ಟ ಕ್ಷೇತ್ರದ ತುತರ್ು ಅವಶ್ಯಕತೆಯಾಗಿದೆ, ಈ ಕಾರ್ಯ ಹಂತ-ಹಂತವಾಗಿ ನಡೆದಿದ್ದು, ಈ ಬಗ್ಗೆ ಒಂದು ಸಹಸ್ರಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮತಿ ಸಿಗುವ ನಿರೀಕ್ಷೆ ಇದೆ ಎಂದರು. ನೀರು ತಲುಪಿಸುವ ವ್ಯವಸ್ಥೆ ಮತ್ತು ವಿತರಣೆಯಲ್ಲಿ ತಾರತಮ್ಯದ ವ್ಯವಸ್ಥೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ನಡೆದಿದೆ ಮತ್ತು ಇನ್ನೂ ಪರಿಣಾಮಕಾರಿಯಾಗಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲೇಬೇಕಾದ ಅವಶ್ಯಕತೆ ಧಾರವಾಡ ಜಿಲ್ಲೆಗೆ ಇದೆ ಎಂದರು.
ಬೆಣ್ಣೆ ಮತ್ತು ತುಪ್ಪರಿ ಹಳ್ಳ ಯೋಜನೆಗಳ ಅನುಷ್ಠಾನ ಆದಲ್ಲಿ ಪ್ರತಿವರ್ಷವೂ ಸುಮಾರು 11 ಟಿ.ಎಂ.ಸಿ ಅಡಿ ನೀರು ಧಾರವಾಡ ಸೇರಿದಂತೆ ನೆರೆ ಜಿಲ್ಲೆಗಳಿಗೆ ಲಭ್ಯವಾಗುವ ನಿರೀಕ್ಷೆ ಇದೆ. ಇದಲ್ಲದೇ ಧಾರವಾಡ ಮತ್ತು ಕಲಘಟಗಿ ಅರೆಮಲೆನಾಡು ಪ್ರದೇಶದಲ್ಲಿ ಶಾಲ್ಮಲಾ ಇಲ್ಲವೆ ಬಿಡತಿ ಹಳ್ಳದ ತಡೆಗಟ್ಟುವಿಕೆಯಿಂದ ಸುಮಾರು 125 ಕೋಟಿ ರೂಪಾಯಿಯ ಯೋಜನೆ ಪ್ರಸ್ತಾಪವೂ ಇದೆ. ಇದರಿಂದ ಕಲಘಟಗಿ ತಾಲೂಕುಗಳಲ್ಲಿಯ ಸುಮಾರು 40 ಕೆರೆಗಳಿಗೆ ನೀರು ತುಂಬುವ ಯೋಜನೆಯೂ ಇದೆ, ಹೀಗಾಗುವುದರಿಂದ ಕೊಳವೆ ಬಾವಿಗಳ ಅಂತರ್ಜಲ ಮಟ್ಟವು ಹೆಚ್ಚಾಗುತ್ತಿದೆ, ಇಡೀ ಜಿಲ್ಲೆಯಲ್ಲಿ ಕುಂದಗೋಳ ತಾಲೂಕಿನ ಪರಿಸ್ಥಿತಿ ಹದಗೆಟ್ಟಿದ್ದು ಅಲ್ಲಿ ಯಾವುದೇ ಜಲಸಂಪನ್ಮೂಲಗಳು ಇಲ್ಲ, ಬೆಣ್ಣೆ-ತುಪ್ಪರಿ ಹಳ್ಳದ ನೀರಿನಿಂದ ಕುಂದಗೋಳ ಮತ್ತು ಹುಬ್ಬಳ್ಳಿ ಗ್ರಾಮೀಣ ಕೆಲ ಭಾಗಕ್ಕೆ ನೀರು ಸಿಗುವ ಸಾಧ್ಯತೆ ಇದೆ ಎಂದು ಲಿಂಗರಾಜ ಸರ್ದೇಸಾಯಿ ಹೇಳಿದರು.
ರಾಜೇಂದ್ರ ಪೋದ್ದಾರ ಸನ್ಮಾನ
ರಾಜ್ಯದ ಪ್ರತಿಷ್ಠಿತ ಜಲ-ನೆಲ ನಿರ್ವಹಣಾ ಸಂಸ್ಥೆ(ವಾಲ್ಮಿ) ನಿದರ್ೆಶಕರಾದ ಡಾ. ರಾಜೇಂದ್ರ ಪೋದ್ದಾರ ಅವರಿಗೆ ಕೇಂದ್ರ ಸರಕಾರದ 'ಜಲ ಪ್ರಹರಿ' ಪ್ರಶಸ್ತಿ ನೀಡಿದರ ಹಿನ್ನೆಲೆಯಲ್ಲಿ ರಾಜೇಂದ್ರ ಮತ್ತು ಹೇಮಲತಾ ಪೋದ್ದಾರ ದಂಪತಿಗಳನ್ನು ಕ.ವಿ.ವ. ಸಂಘದ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ಸನ್ಮಾನಕ್ಕೆ ಉತ್ತರಿಸಿದ ಡಾ. ಪೋದ್ದಾರ, ವಾಲ್ಮಿ ಪುನರುಜ್ಜೀವನ ಸಕಾಲದಲ್ಲಿ ತಾವು ನಿದರ್ೇಶಕರಾಗಿ ಬಂದಿದ್ದು ದೇಶದಲ್ಲಿಯೇ ಪ್ರಥಮ ಕ್ರಮಾಂಕದ ಸಂಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ 'ಜಲ ಪ್ರಹರಿ' ಪ್ರಶಸ್ತಿ ಒತ್ತಾಸೆ ನೀಡಿದೆ ಎಂದರು.
ಇಡೀ ವಿಶ್ವದಲ್ಲಿಯೇ ಜಲಕ್ಷಾಮ ಮುಂದಿನ ದಶಕಗಳಲ್ಲಿ ಆವರಿಸುವ ಭೀತಿ ಇದೆ. ನದಿಗಳನ್ನು ನಾವು ಹಾಳು ಮಾಡುತ್ತಿದ್ದೇವೆ. ಅದರಲ್ಲಿಯ ಶ್ವಾಸಕೋಶದಂತಿರುವ ಮರಳನ್ನು ಲೂಟಿ ಮಾಡುವ ಮೂಲಕ ನದಿಗಳೇ ಸತ್ತು ಹೋಗುತ್ತಿವೆ. ಕೆಲವೇ ವರ್ಷಗಳ ಹಿಂದೆ ರಾಜ್ಯದಲ್ಲಿ 43 ಸಾವಿರ ಕೆರೆಗಳು ಇದ್ದವು. ಈಗ ಬರೀ 28 ಸಾವಿರ ಉಳಿದಿವೆ. ಹಲವು ತಿಪ್ಪೆಗಳಾಗಿವೆ ಇಲ್ಲವೇ ಅತೀಕ್ರಮಣಗೊಂಡಿವೆ ಎಂದು ವಿಷಾದದಿಂದ ಹೇಳಿದರು.
ಧಾರವಾಡ ಜಿಲ್ಲೆಯ ಎಲ್ಲ ಹೊಲಕ್ಕೂ ನೀರು ಒದಗಿಸುವುದು ಅಸಾಧ್ಯದ ಮಾತೇನಲ್ಲ. ಆದರೆ, ನೀರಿನ ಬಳಕೆಯಲ್ಲಿ ಶಿಸ್ತು ಸಾಕ್ಷರತೆ ಬೇಕಾಗಿದೆ. ಈಗಿರುವ ತಂತ್ರಜ್ಞಾನ ಮೀರಿಸುವ ಅತ್ಯಾಧುನಿಕ ತಂತ್ರಜ್ಞಾನವು ತೆಲಂಗಾಣದ ಕಾಲೇಶ್ವರದಲ್ಲಿ ಇದನ್ನೇ ಮಾಡಲಾಗಿದೆ. ಇಂತಹ ತಂತ್ರಜ್ಞಾನದ ಬಳಕೆ ಈಗ ಬೇಕಿದೆ. ಆದರೆ, ಜನಸಂಖ್ಯೆಗೆ ಅನುಗುಣವಾದ ನೀರಿನ ಪೂರೈಕೆ ಇಲ್ಲದಿರುವುದು ಸದಾ ಎಚ್ಚರದಲ್ಲಿ ಇರುವ ಮಾತು ಎಂದರು. ಧಾರವಾಡದ ಯೋಗಕ್ಷೇಮ ವೇದಿಕೆ ಜಿಲ್ಲೆಯ ಎಲ್ಲ ಹೊಲಕ್ಕೂ ನೀರು ಎಂಬ ವಿಷಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಾಲ್ಮಿ ಸಂಸ್ಥೆ ವಿವರಗಳನ್ನು ಕಲೆಹಾಕಿ ವಿಸ್ತೃತ ಯೋಜನಾ ವರದಿಯನ್ನು ಶೀಘ್ರದಲ್ಲಿಯೇ ಸಲ್ಲಿಸಲಿದೆ ಎಂದು ಡಾ. ಪೋದ್ದಾರ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಹಿಂದಿನ ಶಾಸಕ ಮತ್ತು ಯೋಗಕ್ಷೇಮ ವೇದಿಕೆ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸಿ, ಧಾರವಾಡ ಜಿಲ್ಲೆಯಲ್ಲಿ ಎಲ್ಲ ಬೆಳೆಗಳಿಗೂ ಫಲವತ್ತಾದ ಮಣ್ಣು ಇದೆ. ಇದರ ಸದುಪಯೋಗ ಆಗಬೇಕಾದಲ್ಲಿ ಬೇಡಿಕೆಗೆ ತಕ್ಕಂತೆ ನೀರಿನ ಪೂರೈಕೆ ಆಗಬೇಕಾಗಿದೆ ಎಂದು ಹೇಳಿ ಕೃಷಿ ಉದ್ಯಮಿ ಆಗಲೇಬೇಕೆಂದು ಬಲವಾಗಿ ಪ್ರತಿಪಾದಿಸಿದರು.
ಸಭೆಯಲ್ಲಿ ನೀರಾವರಿ ಇಲಾಖೆಯ ಎ.ಇ.ಇ. ಜಾಲಗಾರ ಮಾತನಾಡಿ, ಬೆಣ್ಣೆ ಮತ್ತು ತುಪ್ಪರಿ ಹಳ್ಳಗಳ ಯೋಜನೆಯ ವಿವರ ನೀಡಿದರು.
ಪ್ರಾರಂಭಕ್ಕೆ ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಪರಿಚಯ ಮತ್ತು ಪ್ರಾಸ್ತಾವಿಕವಾಗಿ ವಿಜ್ಞಾನ ಮಂಟಪದ ಸಂಚಾಲಕ ಮನೋಜ ಪಾಟೀಲ ಮಾತನಾಡಿದರು. ಹಿರಿಯ ಶಿಕ್ಷಕ ಮಹಾಂತೇಶ ನರೇಗಲ್ ಆಭಾರ ಮನ್ನಿಸಿದರು.
ಸಭೆಯಲ್ಲಿ ಸಂಘದ ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ, ಎಂ.ವ್ಹಿ. ವಡ್ಡಿನ, ಮಾರ್ಕಂಡೇಯ ದೊಡಮನಿ ಮಾಲಾರ್ಪಣೆ ಮಾಡಿದರು. ವೇದಿಕೆಯಮೇಲೆ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಸಭೆಯಲ್ಲಿ ಕಾರ್ಯಕಾರಿ ಸಮತಿ ಸದಸ್ಯರಾದ ಶಾಂತೇಶ ಗಾಮನಗಟಿ, ವಸಂತ ಅಕರ್ಾಚಾರ, ಮಹೇಶ ಕುಲಕಣರ್ಿ, ಗುರುಮೂತರ್ಿ ಯರಗಂಬಳಿಮಠ, ಬಸವಾಜ ವಿಭೂತಿ, ಪ್ರೊ. ಪರಮೇಶ್ವರಪ್ಪ. ಭರತ ಜಾಧವ, ಕುಂದರಗಿ ಸೇರಿದಂತೆ ವಾಲ್ಮಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.