ಬಾಂದರಗಳಲ್ಲಿ ನೀರು ಬತ್ತಿ: ಮೀನುಗಳ ಸಾವು

ಲೋಕದರ್ಶನ ವರದಿ

ಸಂಬರಗಿ 04: ಗಡಿ ಗ್ರಾಮಗಳಲ್ಲಿ ಅಗ್ರಾಣಿ ಹಾಗೂ ಬಾಂದರಗಳಲ್ಲಿ ಸಂಗ್ರಹವಾಗಿರುವ ನೀರು ಬತ್ತಿ ಹೋಗಿರುತ್ತವೆ. ನೀರಿಲ್ಲದ ಕಾರಣ ನಿರಿನಲ್ಲಿರುವ ಸಾವಿರಾರು ಮಿನುಗಳು ಮೃತಪಟ್ಟು ದುರ್ವಾಸನೆ ಬರುತ್ತಿದೆ.

ಗಡಿ ಗ್ರಾಮ ಶಿರೂರ, ಸಂಬರಗಿ, ತಾಂವಶಿ, ಪಾಂಡೇಗಾಂವ, ಖಿಳೇಗಾಂವ, ಕಲ್ಲೋತಿ, ಶಿವನೂರ ಸೇರಿದಂತೆ ಈ ಭಾಗದಲ್ಲಿರುವ ಅಗ್ರಾಣಿ ನದಿಗೆ ಬಾಂದಾರ ಇದ್ದು, ಕಳೆದ ಮೂರು ತಿಂಗಳಿನಿಂದ ಬಾಂದರಗಳಲ್ಲಿ ನೀರು ಸಂಗ್ರಹವಿತ್ತು ಕಳೆದ ಹದಿನೈದು ದಿನಗಳಿಂದ ಬಾಮದರಗಳು ನೀರಿನಿಂದ ಖಾಲಿಯಾಗಿದ್ದು ನೀರಿನಲ್ಲಿರುವ ಮಿನುಗಳು ನೀರಿನ ಕೊರತೆಯಿಂದ ನರಳಾಡಿ ಮೃತಪಟ್ಟಿತುತ್ತವೆ. ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು ಈ ಭಾಗಕ್ಕೆ ಭೆಟ್ಟಿ ನೀಡಿಲ್ಲ, ಬಾಂದಾರಗಳು ನೀರು ತುಂಬಿದ ನಂತರ ಚಿಕ್ಕ ಮಿನುಗಳನ್ನು ಬಿಟ್ಟ ನಂತರ ಮರಳಿ ನೋಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿರುವ ಬಾಂದಾರಗಳು ಹಾಗೂ ಅಗ್ರಾಣಿ ನೀರಿಲ್ಲದ ಪರಿಣಾಮ ಮಿನುಗಳು ಮೃತಪಟ್ಟು ದುರ್ವಾಸನೆಯಿಂದ ಆ ದಾರಿಯಲ್ಲಿ ಹೋಗುವ ಜನರಿಗೆ ತೀರಾ ತೊಂದರೆಯಾಗಿದ್ದು ಹಲವಾರು ರೋಗಗಳು ಹಬ್ಬುವ ಸಾಧ್ಯತೆ ಇವೆ. ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಹೊರಾಟಗಾರರಾದ ಬಸನಗೌಡಾ ಪಾಟೀಲ ಬೊಬನಾಳ ಇವರನ್ನು ಸಂಪರ್ಕಿಸಿದಾಗ ಅಗ್ರಾಣಿಯಲ್ಲಿ ನೀರಿದ್ದಾಗ ಮಿನುಗಳಿಗೆ ಅನುಕೂಲವಾಗಿತ್ತು. ಆದರೆ ಬತ್ತಿ ಹೋದ ನಂತರ ದುವರ್ಾಸನೆ ಎದ್ದಿದೆ. ಈ ಭಾಗದಲ್ಲಿ ಇನ್ನುವರೆಗೆ ಮಿನುಗಾರಿಕೆ ಇಲಾಖೆ ಭೆಟ್ಟಿ ನೀಡಿಲ್ಲ. ಇಲಾಖೆ ಅಧಿಕಾರಿಗಳು ಭೆಟ್ಟಿನೀಡಿ ಪರಿಹಾರಗೋಳಿಸಬೇಕು. ಇಲ್ಲವಾದರೆ ಹೋರಾಟಮಾಡಲಾಗುವದೆಂದು ಎಚ್ಚರಿಸಿದರು.