ಹಲವಾರು ಗ್ರಾಮಗಳಿಗೆ ಬಸವೇಶ್ವರ ಏತ ನೀರಾವರಿ ಯೋಜನೆ ನೀರು

ಹಲವಾರು ಗ್ರಾಮಗಳಿಗೆ ಬಸವೇಶ್ವರ ಏತ ನೀರಾವರಿ ಯೋಜನೆ ನೀರು  Water from the Basaveshwara Lift Irrigation Project reaches several villages

ಸಂಬರಗಿ 28: ಗಡಿ ಪ್ರದೇಶದ ಹಲವು ಗ್ರಾಮಗಳಿಗೆ ಖಿಳೇಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರು ಕಾಲುವೆಗಳ ಮೂಲಕ ತಲುಪುತ್ತಿದ್ದು, ಮದಭಾವಿ, ಅರಳಹಟ್ಟಿ, ಜಕಾರಹಟ್ಟಿ ಸೇರಿದಂತೆ ಹಲವು ಕೆರೆಗಳು ನೀರಿನಿಂದ ತುಂಬುತ್ತಿವೆ. ಇದರಿಂದ ಈ ಪ್ರದೇಶದ ಬಾವಿಗಳ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ವಕ್ತಾರ ರಾವಸಾಹೇಬ ಐಹೊಳೆ ತಿಳಿಸಿದ್ದಾರೆ.  ಸಂಬರಗಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ನೀರು ಸಿದ್ದೇವಾಡಿ, ಮದಭಾವಿ, ವಿಷ್ಣುವಾಡಿ, ಜಕಾರಹಟ್ಟಿ, ಬೊಮ್ಮನಾಳ, ಸಂಬರಗಿ, ಜಂಬಗಿ ಹಾಗೂ ಶಿವನೂರ ಗ್ರಾಮಗಳಿಗೆ ತಲುಪಿದೆ ಎಂದು ಅವರು ತಿಳಿಸಿದರು.  

ಅಘಣಿ ನದಿಯ ಬಾಂದಾರಗಳಿಗೂ ನೀರು ತುಂಬುತ್ತಿರುವುದರಿಂದ ಈ ಭಾಗದಲ್ಲಿ ಕೃಷಿಗೆ ನೀರಿನ ಕೊರತೆ ಎದುರಾಗುವುದಿಲ್ಲ. ರೈತರು ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ಅವರು ಮನವಿ ಮಾಡಿದರು.  ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದು, ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಇದೇ ಕಾರಣಕ್ಕೆ ಜನರು ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚಿನ ನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.  ಅಶೋಕ್ ಬಾಬು ಮಾನೆ, ಹನುಮಂತ ಅಧೂರ, ಕುಮಾರ್ ಗಸ್ತಿ, ಮಹಾದೇವ ತಾಂಗೆ, ಪಾಂಡು ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.