ತಾಪಂಗೆ ಅಧಿಕಾರಿಗಳ ಬರ, ಜನತೆಗೆ ನೀರಿನ ಬರ

ಲೋಕದರ್ಶನ ವರದಿ 

ಯಲಬುರ್ಗಾ  07: ತಾಲೂಕಿನಲ್ಲಿ ಬೀಕರ ಬರಗಾಲ ಉಂಟಾಗಿದ್ದು ಜನತೆ ನೀರಿಗಾಗಿ ಪರದಾಡುವ ಪರಸ್ಥಿತಿಯಿದ್ದಿರುವದು ಒಂದು ಕಡೆ ಸಮಸ್ಯೆಯಾದರೆ ಅಧಿಕಾರಿಗಳಿಲ್ಲದೆ ತಾಪಂಗೂ ಬರದ ಪರಸ್ಥಿತಿ ಎದುರಾಗಿರುವದು ತಾಲೂಕಿನ ದೊಡ್ಡ ದುರಂತವೇ ಸರಿ, ತಾಪಂ ಇಓ ತಿಮ್ಮಪ್ಪನವರನ್ನು ಕುಷ್ಟಗಿಗೆ ವಗರ್ಾವಣೆ ಮಾಡಿ ಇಲ್ಲಿಗೆ ಪ್ರಭಾರಿಯನ್ನಾಗಿ ನೆಮಿಸಿದೆ ಅವರು ಇಲ್ಲಿಗೆ ಬರುವದು ಯಾವಾಗಲೋ ಒಮ್ಮೆ ಜನತೆಯ ಸಮಸ್ಯೆಯನ್ನು ಆಲಿಸುವವರು ಯಾರು ಇಲ್ಲಾ ಅದರಂತೆ ಎಡಿ ಸ್ಥಾನವು ಖಾಲಿ ಇದ್ದು ಅದಕ್ಕೆ ಸ್ಥಳೀಯ ಪಿಡಿಓರವರನ್ನು ಪ್ರಭಾರಿಯನ್ನಾಗಿ ನೇಮಿಸಲಾಗಿದೆ ಇಲ್ಲಿಯ ತಾಪಂನ ಪ್ರಮುಖ ಏರಡು ಹುದ್ದೆಗಳು ಖಾಲಿ ಇದ್ದು ಜನತೆ ತಮ್ಮ ಸಮಸ್ಯೆಯನ್ನು ಯಾರ ಮುಂದೆ ಕೇಳಬೇಕು ಎನ್ನುವ ಗೊಂದಲದಲ್ಲಿದ್ದಾರೆ ಮೇಲಾಧಿಕಾರಿಗಳು ಇಲ್ಲದ್ದರಿಂದ ಪಿಡಿಓಗಳು ತಮಗೆ ಇಷ್ಟ ಬಂದಾಗ ಗ್ರಾಪಂ ಕಛೇರಿಗೆ ಬೇಟಿ ನೀಡುತ್ತಾರೆ ಇದರಿಂದ ಜನರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.

ಸಭೆ ಸಮಾರಂಭಗಳಿಗೆ ಸಿಮಿತವಾದ ತಾಪಂ ಅಧ್ಯಕ್ಷರು: ತಾಪಂ ಅದ್ಯಕ್ಷರು ಕೇವಲ ಸಭೆ ಹಾಗೂ ಸಮಾರಂಭಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದು ಉಳಿದಂತೆ ಅವರು ತಾಪಂ ತಮ್ಮ ಕಛೇರಿಗೆ ಆಗಮಿಸಿ ಜನತೆಯ ಅಹವಾಲು ಆಲಿಸಿರುವ ಉದಾಹರಣೆಗಳೆ ಇಲ್ಲಾ ಕೆವಲ ಕೆಡಿಪಿಯಲ್ಲಿ ಭಾಗವಹಿಸಿ ಅದರಲ್ಲಿಯೂ ಏನನ್ನು ಪ್ರಶ್ನೆ ಮಾಡದೆ ತಮಗೂ ಸಭೆಗೂ ಸಂಬಂದವೆ ಇಲ್ಲಾ ಎಂಬಂತೆ ಕುಳಿತು ಎದ್ದು ಹೊಗುವ ಅಧ್ಯಕ್ಷರಿಂದ ಜನತೆ ನಿರಿಕ್ಷಿಸಿದಂತೆ ಕಾರ್ಯ ಮಾಡಲು ಆಗುತ್ತಿಲ್ಲಾ ಎಂಬುವದು ಜನರ ನೋವಾಗಿದೆ.

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅತೀಯಾದ ತೊಂದರೆ ಉಂಟಾಗಿದೆ ಇದಕ್ಕೆ ಜನ ಪ್ರತಿನಿಧಿಗಳಾಗಲಿ ಮೇಲಾಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲಾ ಎಂದು ಜನತೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶಾಸಕರು ಇತ್ತ ಗಮನ ಹರಿಸಿ ತಾಪಂಗೆ ಖಾಯಂ ಅಧಿಕಾರಿಗಳನ್ನ ನೆಮಕ ಮಾಡಿಸಿಕೊಂಡು ಜನತೆಯ ನೊವಿಗೆ ಸ್ಪಂದಿಸಬೇಕು ಎನ್ನುವದು ಜನತೆಯ ಆಶಯವಾಗಿದೆ.