ಬೈಲಹೊಂಗಲ 26: ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ನೀರು ಕಲುಷಿತಗೊಂಡು ದುನರ್ಾತ ಹರಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ನದಿಯಲ್ಲಿ ಕಪ್ಪೆ ಮಾಸ ಬೆಳೆದಿದ್ದು ನೀರು ಸಂಪೂರ್ಣ ದುನರ್ಾತದಿಂದ ಕೂಡಿದೆ. ಕಲುಷಿತಗೊಂಡಿರುವ ನದಿ ನೀರು ಸರಿಯಾಗಿ ಶುದ್ಧೀಕರಣವಾಗದೆ ಜನರ ಮನೆ ಬಾಗಿಲಿಗೆ ಬರುವ ನಲ್ಲಿಗಳಲ್ಲಿ ನೀರು ಸಂಗ್ರಹಿಸಿ ಕುಡಿಯುವ ಜನರು ಆರೋಗ್ಯದ ಮೇಲೆ ಹೇರುಪೇರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ನದಿ ಮೇಲಿನ ಸೇತುವೆ ಮೇಲೆ ಪ್ರಯಾಣಿಸುವರು ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. 15 ದಿನಗಳ ಹಿಂದೆಯೇ ನದಿ ನೀರು ಕಲುಷಿತಗೊಂಡಿರುವ ಬಗ್ಗೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗಳಿಗೆ, ಪರಿಸರ ಅಭಿಯಂತರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಲುಷಿತಗೊಂಡು ದುನರ್ಾತ ಹರಡಿರುವ ನದಿ ನೀರು ಶುಚಿತ್ವಕ್ಕೆ ಮುಂದಾಗಿಲ್ಲ. ಇದನ್ನು ಕಂಡು ಕಾಣದಂತಿರುವ ಪುರಸಭೆ ಮುಖ್ಯಾಧಿಕಾರಿಗಳ, ಪುರಸಭೆ ಪರಿಸರ ಅಭಿಯಂತರಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ನಾಗರಿಕರಾದ ಸೋಮನಾಥ ಸೊಪ್ಪಿಮಠ, ನಾರಾಯಣ ನಲವಡೆ, ಮಂಜುನಾಥ ಜ್ಯೋತಿ, ಪ್ರಶಾಂತ ಪತ್ರಿಮಠ ಮಾತನಾಡಿ, ಅಧಿಕಾರಿಗಳು ಎಚ್ಚೆತ್ತುಕೊಂಡು ಕಲುಷಿತಗೊಂಡಿರುವ ನದಿ ನೀರು ಶುಚಿತ್ವಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಾಗುವ ದುರಂತಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಮಾತನಾಡಿ, ನದಿ ನೀರನ್ನು ಜಾಕವೇಲ ಮೂಲಕ ವಾಟರ್ ಟ್ಯಾಂಕ್ ಗೆ ಬಿಟ್ಟು ಶುದ್ಧೀಕರಣ ಮಾಡಿ ಜನರಿಗೆ ಕುಡಿಯಲು ಬಿಡಲಾಗುತ್ತದೆ. ನದಿ ದಡದಲ್ಲಿ ನೀರು ಕಲುಷಿತಗೊಂಡಿದೆ. ಸ್ಥಳ ಪರಿಶೀಲಿಸಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೀರು ಹಂಚಿಕೆ ಮಾಡಲಾಗುವುದು ಎಂದರು.