ಜಲ ಸಂರಕ್ಷಣೆ, ನಮ್ಮೆಲ್ಲರ ಹೋಣೆ, ಅದರಿಂದ ಆತ್ಮ ನಿರ್ಭರ ಭಾರತ ಸಾಧ್ಯ
Water conservation is our common concern, it makes a self-reliant India possible
ಗದಗ 07 : ನಗರದ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ದಿನಾಂಕ 06-12-2025 ಶನಿವಾರದಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಎನ್. ಎಸ್. ಎಸ್. ಘಟಕದವತಿಯಿಂದ ವಾರ್ಷಿಕ ವಿಶೇಷ ಶಿಬಿರದ ಎರಡನೆ ದಿನವನ್ನು ವಿವಿಧ ಕಾರ್ಯಗಳಿಂದ ಪುರ್ಣಗೊಳಿಸಿದರು.ಮುಂಜಾನೆ ಧ್ವಜಾರೋಹಣಕ್ಕೆ ಹೊಂಬಳ ಗ್ರಾಮದ ಮಾಜಿ ಸೈನಿಕರು, ಶಂಕರಲಿಂಗ ದೇವಸ್ಥಾನದ ಸದಸ್ಯರು ಹಾಗೂ ಪ್ರಸ್ಥುತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಾನಂದ ಸಜ್ಜನ ಅವರು ಆಗಮಿಸಿದ್ದರು, ದೇಶ ಸೇವೆಯಂತಹ ಉತ್ತಮ ಕಾರ್ಯ ಬೆರೆಯಿಲ್ಲ, ಸಮಾಜ ಸೇವೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದು ಹೇಳುತ್ತಾ ಶಬಿರದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು, ನಂತರದಲ್ಲಿ ಎಲ್ಲ ಎನ್. ಎಸ್. ಎಸ್. ಸ್ವಯಂಸೇವಕರು ಶ್ರಮದಾನಕ್ಕೆತೆರೆಳಿದರು, ಹೊಂಬಳ ಬಸ್ ನಿಲ್ದಾಣ, ಶಂಕರಲಿಂಗ ದೇವಸ್ಥಾನದ ಹೊಂಡವನ್ನು ಸ್ವಚ್ಛಗೊಳಿಸಿದರು ಮತ್ತು ಸಂಗ್ರಹಿಸಲಾದ ತ್ಯಾಜ್ಯವನ್ನು ಪಂಚಾಯತಿಯವರ ಸಹಾಯದಿಂದ ತ್ಯಾಜ್ಯ ಸಂಗ್ರಹಾರಕ್ಕೆ ವಿಲೆವಾರಿ ಮಾಡಲಾಹಿತು.
ಸಂಜೆ ಜಲ ಸಂರಕ್ಷಣೆಯ ವಿಷಯದ ಕುರಿತು ಹೊಂಬಳ ಗ್ರಾಮದ ಓಣಿಗಳಲ್ಲಿ ಎನ್. ಎಸ್. ಎಸ್. ಸ್ವಯಂಸೇವಕರು ಮತ್ತು ಇನ್ನರ್ ವಿಲ್ ಕ್ಲಬ್ ಗದಗ-ಬೆಟಗೇರಿಯ ಅಧ್ಯಕ್ಷರಾದ ಅಶ್ವಿನಿ ಜಗತಾಪ, ಸಂಪಾದಕರಾದ ವೀಣಾ ಕಾವೇರಿ, ಮಾಜಿ ಅಧ್ಯಕ್ಷರಾದ ಸುಲೋಚನಾ ಐವಳ್ಳಿ, ಸ್ಮಿತಾ ಹೊಸೂರು ಅವರು ಜಾಥಾ ಮಾಡಿ ನೀರನ್ನು ಸಂರಕ್ಷಿಸುವುದು ಅತೀ ಮುಖ್ಯ ಎಂದು ಗ್ರಾಮಸ್ಥರಿಗೆ ಅರಿವು ಮೂಡಿಸುವುದರ ಜೊತೆಗೆ ಒಂದು ಕೀರು ನಾಟಕವನ್ನು ಪ್ರಸ್ಥುತ ಪಡಿಸಿದರು, ಆತ್ಮ ನಿರ್ಭರ ಭಾರತ ಎಂಬ ವಿಷಯದ ಕುರಿತು ಉಪನ್ಯಾಸ ಮಾಡಲು ಉಪನ್ಯಾಸಕರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೋತ್ಥಾನ ಪರಿಷತನ ವಿಭಾಗ ಸಂಯೋಜಕರಾದ ಪ್ರಶಿಕ್ಷಣ ಭಾರತಿ, ಗದಗ ವಿಭಾಗದ ಶ್ರೀ. ವಿರೇಂದ್ರಗೌಡ ಪಾಟೀಲ ಅವರು ಮಾತನಾಡುತ್ತಾ ಭಾರತ ಅದ್ಭುತ ರಾಷ್ಟ್ರ, ಕೋವಿಡ ಸಮಯದಲ್ಲಿ ಜಗತ್ತಿಗೆ ಭಾರತದ ಕೊಡುಗೆ ಅಪಾರ, ಜಾತಿ ವ್ಯವಸ್ಥೆಯನ್ನು ತೊಲಗಿಸ ಬೇಕಾಗಿರುವುದು ಅತೀ ಅವಶ್ಯಕ, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಆತ್ಮ ವಿಶ್ವಾಸ ಮೂಡುವಂತಹ ನೈತಿಕ ಶಿಕ್ಷಣ ಗುಣಗಳನ್ನು ಅಳವಡಿಸುವುದು ಮುಖ್ಯವಾಗಿದೆ ಎಂದು ಹಲವಾರು ವಿಷಯಗಳನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಹಿರಿಯರಾದ.ಯಲ್ಲಪ್ಪಾ ಪದ್ಮಣ್ಣವರ, ವಿಜಯಕುಮಾರ ಬಯಲಿ,ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ . ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಗಳಾದ ಕುಮಾರ. ಆಕಾಶ ಕಳಗಣ್ಣನವರ, ಕುಮಾರ. ಪ್ರಶಾಂತ ಕಲಬುರ್ಗಿ, , ಸೋಮಶೇಖರ ಕುರಿ,. ಐಶ್ವರ್ಯ ಶಲವಡಿ ಮತ್ತು ಎನ್. ಎಸ್. ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು, ಕುಮಾರಿ. ಸಂಗಮ್ಮ ತಳವಾರ ಅವರು ನೀರುಪಿಸಿದರು, ಮಾಲನ್ ಜಾಲಾಲನವರ ಅವರು ಸ್ವಾಗತಿಸಿದರು,. ಅಕ್ಷತಾ ದೊಡ್ಡಗೌಡ್ರ ಅವರು ಎಲ್ಲರಿಗೂ ವಂಧಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 