ಜಾತ್ರೆಗೆ ಬಂದ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ
Water arrangement for devotees who came to the fair
ಜಾತ್ರೆಗೆ ಬಂದ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ
ದೇವರಹಿಪ್ಪರಗಿ 09: ಪಟ್ಟಣದ ಆರಾಧ್ಯ ದೈವ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪಿ.ಆರ್.ಕುಲಕರ್ಣಿ ಅವರು ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಪಟ್ಟಣದ ಮುಖ್ಯ ಬಜಾರ ರಸ್ತೆಯಲ್ಲಿರುವ ಕುಲಕರ್ಣಿ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪಿ.ಆರ್.ಕುಲಕರ್ಣಿ ಹಾಗೂ ಜನರಲ್ ಸ್ಟೋರ್ಸ್ ಮಾಲೀಕರಾದ ದಿನೇಶಗೌಡ ಪಾಟೀಲ ಅವರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬುಧವಾರದಂದು ನಡೆದ ರಾವತರಾಯ ಪುರ ಪ್ರವೇಶ ಸಂದರ್ಭದಲ್ಲಿ ಬಜಾರ ಮೂಲಕ ಹೋಗುವ ರಸ್ತೆಯಲ್ಲಿ ಭಕ್ತರಿಗೆ ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತರ ದಾಹ ನೀಗಿಸಿದರು.
ಪಟ್ಟಣದಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಸಂತೋಷ ಕುಲಕರ್ಣಿ, ಪ್ರಮೀಳಾ ಕುಲಕರ್ಣಿ, ಲತಾ ಬಾಸುತ್ಕರ, ಸರೋಜ ಬಾಸುತ್ಕಾರ, ಪದ್ಮಾವತಿ ಬಾಸುತ್ಕಾರ, ಸಮೀರ್ ಅತ್ತಾರ, ಅಬ್ದುಲ್ ಸತ್ತರಾ, ವಿರೇಶ ಬಾಸುತ್ಕರ, ಈಶ್ವರ ಬಾಸುತ್ಕರ, ಮೋಹನ ಬಾಸುತ್ಕರ, ಸಂದೀಪ್ ಬಾಸುತ್ಕರ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 