ಬೆಳಗಾವಿ: ಕೃಷಿ ವಿಜ್ಞಾನ ಕೇಂದ್ರಕ್ಕೆ ನೀರು ರಾಜೇಂದ್ರ ಸಿಂಗ್ ಭೇಟಿ

ಲೋಕದರ್ಶನ ವರದಿ

ಬೆಳಗಾವಿ 31:  ದೇಶದ ನೀರಿನ ಮನುಷ್ಯನೆಂದೆ ಹೆಸರಾದ ರಾಜಸ್ಥಾನ ಮೂಲದ ಜಲ ತಜ್ಞ ಸಂರಕ್ಷಣೆ ಹಾಗೂ ಪರಿಸರ ತಜ್ಞ ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಹಾಗೂ ಸ್ಟಾಕೊಮ್ ನೀರು ಪ್ರಶಸ್ತಿ ಪಡೆದ ರಾಜೇಂದ್ರ ಸಿಂಗ್ರವರು ಮತ್ತಿಕೊಪ್ಪದ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಆವರಣವನ್ನು ವೀಕ್ಷಿಸಿ, ನೀರು ಸಂರಕ್ಷಣೆ ಕುರಿತು ತಜ್ಞರೊಂದಿಗೆ ಚಚರ್ಿಸಿ ಸಲಹೆ ನೀಡಿದರು.  ನೀರು ಇಂದಿನ ಅಗತ್ಯವಾಗಿದ್ದು, ಪ್ರತಿಯೊಂದು ಜಮೀನಿನ ನೀರು ಅದೇ ಜಮೀನಿನಲ್ಲಿ ಹಾಗೂ ಪ್ರತಿ ಗ್ರಾಮದ ನೀರು ಅದೇ ಗ್ರಾಮದಲ್ಲಿ ಸಂರಕ್ಷಿಸಿ ಉಪಯೋಗಿಸುವ ತತ್ವಗಳ ಆಧಾರದ ಮೇಲೆ ಸೂಕ್ತ ತರಬೇತಿಗಳ ಮೂಲಕ ಸಮುದಾಯವನ್ನು ಉತ್ತೇಜಿಸಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಭೇಟಿ ವೇಳೆ ಕೃಷಿ ವಿಜ್ಞಾನ ಕೇಂದ್ರದ ಚೇರ್ಮನ್, ಬಿ.ಆರ್. ಪಾಟೀಲ, ಡಾ.ಪ್ರಭುಕುಮಾರ, ನಿವೃತ್ತ ನಿದರ್ೆಶಕರು, ಐಸಿಎಆರ್- ಕೃಷಿ ತಂತ್ರಜ್ಞಾನ ಮತ್ತು ಸಂಶೋಧನಾ ಅನುಷ್ಠಾನ ಸಂಸ್ಥೆ, ವಲಯ-1, ಮುಖ್ಯಸ್ಥೆ ಶ್ರೀದೇವಿ, ವಿಜ್ಞಾನಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. 

ಮಳೆ ನೀರು ಕೊಯ್ಲನ್ನು ಮಾಡಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ನೀರು ಹಾಯಿಸಿ ಅಧಿಕ ಇಳುವರಿ ಪಡೆಯಬಹುದು. ಹೊಲಗಳಲ್ಲಿ ಬದುಗಳನ್ನು ನಿಮರ್ಿಸಿ ಮಣ್ಣು ಕೊಚ್ಚಿ ಹೋಗುವುದನ್ನು ತಡೆದು, ಅಲ್ಲಿ ಬಿದ್ದ ಮಳೆ ನೀರನ್ನು ಹೊಲದಲ್ಲಿ ಇಂಗುವಂತೆ ಮಾಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ರೈತರ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಹೇಳಿದರು.