ಪ್ರತ್ಯೇಕ ರಾಜ್ಯದಿಂದ ಕನರ್ಾಟಕ ಏಕೀಕರಣಕ್ಕಾಗಿ ಪಟ್ಟ ಶ್ರಮ ವ್ಯರ್ಥ: ಕುಲಿಗೋಡ

ಎಮ್ಜಿಕೆಡಿ ಫೋಟೊ1 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಮಾಜಿ ಜಿ.ಪಂ ಸದಸ್ಯ ಡಾ ಸಿ ಬಿ ಕುಲಿಗೋಡ


ಮುಗಳಖೋಡ : ಪ್ರತ್ಯೇಕ ರಾಜ್ಯದ ಒತ್ತಾಯಕ್ಕೆ ಹೋರಾಟ ನಡೆಸುವುದು ಸರಿಯಲ್ಲ. ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಮುಖ್ಯಮಂತ್ರಿಯವರೊಂದಿಗೆ ಉನ್ನತಮಟ್ಟದ ಸಭೆ ನಡೆಸುವುದರ ಮೂಲಕ ಪರಿಹಾರ ಕಂಡುಕೊಳ್ಳೋಣ ಎಂದು ಚನ್ನ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ಡಾ. ಸಿ ಬಿ ಕುಲಿಗೋಡ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಅವರ ಗೃಹ ಕಛೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪ್ರತ್ಯೇಕ ರಾಜ್ಯದ ಆಸೆಯಿಂದ ಕನರ್ಾಟಕವನ್ನು ಇಬ್ಬಾಗ ಮಾಡಿದಲ್ಲಿ ನಾಳೆಯ ದಿನಮಾನಗಳಲ್ಲಿ ಮುಂಬೈ ಕನರ್ಾಟಕ, ಹೈದರಾಬಾದ್ ಕನರ್ಾಟಕ ಮತ್ತು ಮಧ್ಯ ಕನರ್ಾಟಕವನ್ನು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಿ ಎಂಬ ಧ್ವನಿ ಏಳಬಹುದು. ಉತ್ತರ ಕನರ್ಾಟಕ ಮತ್ತು ದಕ್ಷಿಣ ಕನರ್ಾಟಕ ಎಂದು ಕನರ್ಾಟಕವನ್ನು ಒಡೆಯುವುದರಿಂದ ಕನ್ನಡಿಗರ ಒಗ್ಗಟ್ಟಿಗೆ ಕೊಡಲಿ ಏಟು ಬೀಳುವ ಸಾಧ್ಯತೆ ಇರುವುದಲ್ಲದೆ, ಕನರ್ಾಟಕದ ಗಡಿ ಭಾಗದ ಸಮಸ್ಯೆಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದು ನಮ್ಮ ನಾಡಿನ ಹಿರಿಮೆಗೆ ಹಾಗೂ ಭದ್ರತೆಗೆ ನಾವೇ ಅಪಾಯ ತಂದಂತೆ ಆಗುವುದು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಕನರ್ಾಟಕ ಏಕೀಕರಣಕ್ಕೆ ಧಕ್ಕೆ ತರುವ ಕೆಲಸ ಬೇಡ. ಕನ್ನಡಿಗರು ನಾವೆಲ್ಲ ಒಂದೇ ಎಂಬ ನಿಲುವು ನಮ್ಮೆಲ್ಲರಲ್ಲಿ ನೆಲೆಯೂರಬೇಕಿದೆ ಎಂದು ಹೇಳಿದರು.

ಶಿವಪುತ್ರ ಯಡವಣ್ಣವರ, ಪ್ರಕಾಶ ಆದಪ್ಪಗೋಳ, ಮಾರುತಿ ಹಿಪ್ಪರಗಿ, ಪುರಸಭೆ ಸದಸ್ಯ ಮಹಾವೀರ ಕುರಾಡೆ, ಬಸವರಾಜ ಕಾಖಂಡಕಿ, ಮಲ್ಲಿಕಾಜರ್ುನ ಲಕ್ಷ್ಮೇಶ್ವರ, ಶಿವು ಕನ್ನಾಳ ಇದ್ದರು.