ಕಾಗವಾಡ: ಪ್ಲಾಸ್ಟಿಕ್ ಬಳಿಕೆ ಮಾಡಬಾರದೆಂದು ಎಚ್ಚರಿಕೆ

ಲೋಕದರ್ಶನ ವರದಿ

ಕಾಗವಾಡ 18:  ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಉದ್ದಿಮೆದಾರರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಿಕೆ ಮಾಡಬಾರದು. ಮಾಡಿದಲ್ಲಿ ನಿಮ್ಮ ಮೇಲೆ ಕ್ರಮ ಜರುಗಿಸುವದಾಗಿ ಉಗಾರ ಪುರಸಭೆ ಕಚೇರಿಯ ವ್ಯವಸ್ಥಾಪಕ ಉದಯ ಘಟಕಾಂಬಳ ೆತಮ್ಮ ಸಿಬ್ಬಂದಿದೊಂದಿಗೆ ಪಟ್ಟಣದಲ್ಲಿ ಓಣಿ, ಓಣಿಗಳಲ್ಲಿ ಸುತ್ತಾಡಿ ಅಂಗಡಿಧಾರಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ರಂದು ಉಗಾರ ಪಟ್ಟಣದಲ್ಲಿಯ ಅಂಗಡಿಗಳಿಗೆ ಪುರಸಭೆ ಅಧಿಕಾರಿಗಳು ಭೇಟಿನೀಡಿಕ, ರಾಜ್ಯ ಸರಕಾರ ಈಗಾಗಲೇ ಪ್ಲಾಸ್ಟಿಕ್ ಮಾರಾಟ ನಿಶೇಧಿಸಿದೆ. ನೀವು ಯಾವುದೇ ಕಾರಣಕ್ಕಾಗಿ ಪ್ಲಾಸ್ಟಿಕ್ ಮಾರಾಟ ಮಾಡಬೇಡಿ ಎಂದು ವಿನಂತಿಸುತ್ತಿದ್ದಾರೆ.ಪ್ರಾರಂಭದಲ್ಲಿ ನಾವು ನಿಮಗೆ ಸೂಚನೆ ನೀಡುತ್ತಿದ್ದು, ಈ ನಂತರ ಪ್ಲಾಸ್ಟಿಕ್ ಮಾರಾಟ ಅಂಡಿಗಳ ಮೇಲೆ ಕ್ರಮ ಜರುಗಿಸಿ ದಂಡ ಆಕಾರಣೆ ಮಾಡಲಿದ್ದೇವೆ ಎಂದು ಉದಯ ಘಟಕಾಂಬಳೆ ಹೇಳಿದರು.

ಪುರಸಭೆಯ ಹಿರಿಯ ಆರೋಗ್ಯ ನೀರಿಕ್ಷಕ ಕರ್ಯಪ್ಪಾ ಗಾವಡೆ ಮಾಹಿತಿ ನೀಡುವಾಗ, ಉಗಾರದಲ್ಲಿ 540 ಅಂಗಡಿಗಳಿದ್ದು. ಇವುಗಳಲ್ಲಿ 12 ಅಂಗಡಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಹೇಳಿ, ಉಗಾರದ ವಿದ್ಯಾನಂದ ನಾಂಗಾವೆ ಇವರ ಅಂಗಡಿಯ ಮೇಲೆ ಕ್ರಮ ಜರುಗಿಸಿದರು.

ಸರಕಾರ ಈಗಾಗಲೇ ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚ, ಕ್ಯಾರಿ ಬ್ಯಾಗ್, ಊಟದ ಮೇಜಿನ್ ಹರಡುವ ಹಾಳಿ, ಪ್ಲಾಸ್ಟಿಕ್, ಭಿತ್ತಿ ಪತ್ರ ಪ್ಲಾಸ್ಟಿಕ ತೋರಣ, ಪ್ಲೆಕ್ಸ್ ಬಾವುಟಗಳು ಇವುಗಳೊಂದಿಗೆ ಥಮರ್ಾಕಾಲ್ ಮತ್ತು ಮೈಕ್ರೋಬಿಡ್ಸ್ನಿಂದಾ ತಯಾರಿಸಿದ ವಸ್ತುಗಳನ್ನು ಮಾರಾಟ ಹಗೂ ದಾಸ್ತಾನು ಮಾಡಬಾರದು. ಒಂದು ವೇಳೆ ಮಾರಾಟ ಮತ್ತು ದಾಸ್ತಾನ ಮಾಡಿದಲ್ಲಿ ಪುರಸಭೆ ಜಪ್ತಿಮಾಡಿ ನಿಯಮ ಉಲ್ಲಂಘಿಸಿದವರ ಪರಿಸರ ಸೌರಕ್ಷಣ ಕಾಯಿದೆ 1986 ಪ್ರಕಾರ ಪ್ರಕರಣ-19ರ ಅನ್ವಯ ಮೊಕದಮ್ಮೆಯನ್ನು ದಾಖಲಿಸಲಾಗುವದೆಂದು ಹೇಳಿದರು.

ಪ್ಲಾಸ್ಟಿಕ್ ತಯಾರಿಸುವರ ಮೇಲೆ ಯಾಕೇ ಕ್ರಮ ಜರುಗಿಸುವದಿಲ್ಲಾ?

ಪ್ಲಾಸ್ಟಿಕ್ ನಿಷೇಧ ಕಾಯಿಲೆ ಉಲ್ಲಂಘನ ಮಾಡಿರುವ ವಿದ್ಯಾನಂದ ನಾಂಗಾವೆ ಇವರು ಅಧಿಕಾರಿಗಳಿಗೆ ನೇರವಾಗಿ, ಈ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನಾವು ಮನೆಯಲ್ಲಿ ತಯಾರಿಸಿಲ್ಲಾ, ಖರಿದಿಸಿದ್ದೇವೆ. ನಮ್ಮ ಮೇಲೆ ಕ್ರಮ ಜರುಗಿಸುವ ಪೂರ್ವದಲ್ಲಿ ಯಾರು ನಿಮರ್ಿಸುತ್ತಿದ್ದಾರೆ, ಅವರ ಮೇಲೆ ಯಾಕೇ ಕ್ರಮ ಜರುಗಿಸುತ್ತಿಲ್ಲಾ? ಎಂದು ಪ್ರಶ್ನಿಸಿದರು.ಆಗ ಅಧಿಕಾರಿಗಳು ನಮ್ಮ ಹಿರಿಯ ಅಧಿಕಾರಿಗಳು ನಗರದಲ್ಲಿ ರೆಡ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಸಹ ಕಾಮರ್ಿಕರಾದ ಪ್ರಕಾಶ ಕಾಂಬಳೆ, ರವಿ ಹಳ್ಳೂರ್, ಪ್ರಕಾಶ ಗುರವ, ಪುರಸಭೆ ಸದಸ್ಯ ಪ್ರಕಾಶ ಥಬಾಜ್, ಮಾಜಿ ಗ್ರಾಪಂ ಆಧ್ಯಕ್ಷ ದಿಲೀಪ ಹುಲ್ಲೋಳಿ, ಸೇರಿದಂತೆ ಅನೇಕರು ಇದ್ದರು.