ವಾರ್ನರ್ ಸ್ಪೋಟಕ ಬ್ಯಾಟಿಂಗ್ ಗೆ ದಾಖಲೆ ಉಡೀಸ್

ಡೇವಿಡ್ ವಾರ್ನರ್

ಆಡಿಲೇಡ್, .30 - ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ ಅಬ್ಬರದ ತ್ರಿಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧದ ಹಗಲು ರಾತ್ರಿ ಟೆಸ್ಟ್ ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ. ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ವಾರ್ನರ್ ಅಭಿಮಾನಿಗಳಿಗೆ ಅಬ್ಬದೂಟ ಉಣಬಡಿಸಿದರು. ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದ ಡೇವಿಡ್ ಪಾಕ್ ಬೌಲರ್ ಗಳ ಬೆವರು ಇಳಿಸಿದರು. ಇವರ ಸ್ಪೋಟಕ ಬ್ಯಾಟಿಂಗ್ ಗೆ ಹಲವು ದಾಖಲೆಗಳು ಪುಡಿಯಾದವು. 

  ವಾರ್ನರ್ 418 ಎಸೆತಗಳನ್ನು ಎದುರಿಸಿ 39 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 335 ರನ್ ಸೇರಿಸಿದರು. ಇದು ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಟೆಸ್ಟ್‍ ಕ್ರಿಕೆಟ್ ನಲ್ಲಿ ದಾಖಲಿಸಿದ ಎರಡನೇ ಗರಿಷ್ಠ ರನ್. ಮ್ಯಾಥ್ಯೂ ಹೇಡನ್ 380 ರನ್ ಬಾರಿಸಿದ್ದು, ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಬಲ್ ಸೆಂಚೂರಿ ಬಾರಿಸಿದ ಆಸೀಸ್ ನ ಏಳನೇ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 

  ಹಗಲು ರಾತ್ರಿ ಟೆಸ್ಟ್ ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ವಾರ್ನರ್ ಪಾಲಾಯಿತು. ಇದಕ್ಕೂ ಮೊದಲು ಅಜರ್ ಅಲಿ, ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ ದುಬೈ ನಲ್ಲಿ ಈ ಸಾಧನೆ ಮಾಡಿದ್ದರು. ಈ ಅಂಗಳದಲ್ಲಿ ದಾಖಲಾದ ಮೊದಲ ತ್ರಿಶಕ ಇದಾಗಿದೆ. ಇದಕ್ಕೂ ಮೊದಲು ಈ ಅಂಗಳದಲ್ಲಿ 1932ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡಾನ್ ಬ್ರಾಡ್ಮನ್ ಅಜೇಯ 299 ರನ್ ಸಿಡಿಸಿದ್ದರು.