ಹನುಮ ಮಾಲೆ ಧರಿಸಿ ವೃತ ಆಚರಣೆ

ಹನುಮ ಮಾಲೆ ಧರಿಸಿದ ಮಾಲಾದಾರಿಗಳು.

ಲೋಕದರ್ಶನವರದಿ

ಮುಗಳಖೋಡ12: ಹನುಮಾನ ದೇವರು ಹುಟ್ಟಿದ ಕಿಸ್ಕಿಂದೆ ಅಂದರೆ ಈಗಿನ ಹಂಪಿ ಎದರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪವಮಾನ ಹೋಮ ಜರುಗುವುದು ಆ ಸಮಯದಲ್ಲಿ ಹನುಮ ಮಾಲೆ  ಧರಿಸಿಕೊಂಡು ಯಜ್ಞದಲ್ಲಿ ಬಾಗಿಯಾಗಲು ಮುಗಳಖೋಡ ಪಟ್ಟಣದ ಭಕ್ತರು ಹನುಮ ಮಾಲೆಯನ್ನು ಧರಿಸಿ 9 ದಿನಗಳ ವೃತ ಆಚರಿಸುತ್ತದ್ದಾರೆ.

  ಪಟ್ಟಣದ ಹನುಮಾನ ದೇವಸ್ಥಾನದಲ್ಲಿ  ಬೆಳಿಗ್ಗೆ 6 ಗಂಟೆಗೆ ಹನುಮಾನ ದೇವಸ್ಥಾನದ ಅರ್ಚಕರಿಂದ 50 ಜನ ಹನುಮಾನ ಮಾಲೆಯನ್ನು ಧರಿಸಿದರು.

  ವಿಠಲ ಪೂಜೇರಿ, ರಾಯಪ್ಪ ಪೂಜೇರಿ, ಶ್ರೀಪಾಲ ಕುರಬಳ್ಳಿ, ರಾಜು ನಾಯಿಕ, ಹಣಮಂತ ಬಿರಾದಾರ, ಭಗವಂತ ಕಡಪಟ್ಟಿ, ಸಧಾಶಿವ ಕಳಸನ್ನವರ, ರಾಮಪ್ಪ ಹೊಸೂರ, ಜೊತೆಪ್ಪ ಕಂಠಿಕಾರ, ಅಜ್ಜು ಶೇಗುಣಶಿ ಮುಂತಾದವರು ಮಾಲಾದಾರಿಗಳು ಇದ್ದರು.