ಕರಾಚಿ, ಫೆ 11, 1952 ರಲ್ಲಿ ಭಾರತ ಪ್ರವಾಸ ಮಾಡಿದ ಪಾಕಿಸ್ತಾನದ ಮೊದಲ ಟೆಸ್ಟ್ ತಂಡದ ಕೊನೆಯ ಸದಸ್ಯ ವಖಾರ್ ಹಸನ್ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಇವರಿಗೆ 87 ವರ್ಷ ವಯಸ್ಸಾಗಿತ್ತು.1932ರ ಸೆಪ್ಟೆಂಬರ್ 12 ರಂದು ಜನಿಸಿದ್ದ ವಖಾರ್, 1952ರ ಅಕ್ಟೋಬರ್ 23 ರಂದು ದೆಹಲಿಗೆ ಆಗಮಿಸಿದ್ದ ಪಾಕಿಸ್ತಾನ ಟೆಸ್ಟ್ ತಂಡದ ಕೊನೆಯ ಸದಸ್ಯರಾಗಿದ್ದರು. ಭಾರತ ಪ್ರವಾಸದಲ್ಲಿ ವಖಾರ್ ಎಂಟು ಮತ್ತು ಐದು ರನ್ ಗಳಿಸಿದ್ದರು. ಲಖನೌ ಟೆಸ್ಟ್ ಪಂದ್ಯದಲ್ಲಿ 23, ಮುಂಬೈ ಪಂದ್ಯದಲ್ಲಿ 81 ಮತ್ತು 65 ರನ್, ಚೆನ್ನೈನಲ್ಲಿ 49 ಹಾಗೂ ಕೋಲ್ಕತಾ ಟೆಸ್ಟ್‌ನಲ್ಲಿ 29 ಮತ್ತು 97 ರನ್ ಗಳಿಸಿದ್ದರು.1954ರಲ್ಲಿ ವಖಾರ್ ಹಸನ್ ಒಳಗೊಂಡಿದ್ದ ಪಾಕಿಸ್ತಾನ ತಂಡ ದಿ ಓವಲ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ 24 ರನ್‌ಗಳ ಐತಿಹಾಸಿಕ ಜಯ ಸಾಧಿಸಿತ್ತು. 21 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ಪ್ರತಿನಿಧಿಸಿದ್ದ ವಖಾರ್ ಹಸನ್ ಒಟ್ಟು 1,071 ರನ್ ಗಳಿಸಿದ್ದರು.1955ರಲ್ಲಿ ಲಾಹೋರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ(189 ರನ್) ಶತಕ ಸಿಡಿಸಿದ್ದರು. ಇದರ ಮುಂದಿನ ದಿನ ಇಮ್ತಿಯಾಜ್ ಅಹಮದ್ 209 ರನ್ ಗಳಿಸಿ ಔಟಾಗಿದ್ದರು. ವಖಾರ್ ಹಾಗೂ ಇಮ್ತಿಯಾಜ್ ಜೋಡಿ ಮುರಿಯದ ಏಳನೇ ವಿಕೆಟ್‌ಗೆ 308 ರನ್ ಗಳಿಸಿ ದಾಖಲೆ ಮಾಡಿತ್ತು.ವಖಾರ್ ಹಸನ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಲವು ಹುದ್ದೆಗಳನ್ನು ನಿಬಾಯಿಸಿದ್ದಾರೆ. 1982-83ರ ಸಮಯದಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದರು.