ಸಸಿ ನೆಡುವ ಮೂಲಕ ಸಹಕಾರಿ ವಾರಕ್ಕೆ ಚಾಲನೆ

ಸಸಿ ನೆಡುವ ಮೂಲಕ ಸಹಕಾರಿ ವಾರಕ್ಕೆ ಚಾಲನೆ  Cooperative Week kicked off with a sapling plantation drive

ಲೋಕದರ್ಶನ ವರದಿ 

 ಮುಂಡಗೋಡ 07 : ಕೇಂದ್ರ ಸರ್ಕಾರದ ಸಹಕಾರಿ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ‘ಸಹಕಾರಿ ವಾರ’ ಅಂಗವಾಗಿ ತಾಲೂಕಿನ ಪಿ.ಎಲ್‌.ಡಿ. ಬ್ಯಾಂಕ್ ವತಿಯಿಂದ ಸೋಮವಾರ ಬ್ಯಾಂಕ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ವೈ.ಪಿ. ಭುಜಂಗಿ, ನಿರ್ದೇಶಕರಾದ ಮಂಜುನಾಥ ಶೆಟ್, ಪಕೀರ​‍್ಪ ಒಣಿಕೇರಿ ಹಾಗೂ ರಮೇಶ್ ಜೀವಣ್ಣನವರ್ ಅವರು ಸಸಿ ನೆಟ್ಟು ಸಹಕಾರಿ ವಾರಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕ ರಮೇಶ್ ದಾಂಡೇಕರ್, ಸಹ ವ್ಯವಸ್ಥಾಪಕ ಕಲ್ಯಾಣ್ ಕುಮಾರ್ ಚೌಶೆಟ್ಟಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಹುಬ್ಬಳ್ಳಿ, ಸುಧೀರ್ ಪಾಯಣ್ಣನವರ್, ಸಂದೀಪ ರಾಯ್ಕರ್, ವಿನಯ,  ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.