ಲೋಕದರ್ಶನವರದಿ
ರಬಕವಿ-ಬನಹಟ್ಟಿ೧೧ : ದೇಶ ಧರ್ಮಕ್ಕಾಗಿ ಶ್ರಮಿಸಿದವರ ಕೀತರ್ಿ ಅಜರಾಮರವಾಗಿರುವದು, ಅನ್ಯಾಯ ಮಾಡಿದವರು ಅಪಕೀರ್ತವಂತರು ಆಗುವರು ಸತ್ಯ ಧರ್ಮದ ಮಾರ್ಗ ಹಿಡಿದು ಅಧರ್ಮ ದಾರಿ ಬಿಟ್ಟು ಧರ್ಮದ ದಾರಿಯಲ್ಲಿ ಸಾಗೋಣಾ ಎಂದು ಚಕ್ರವತರ್ಿ ಅನ್ನದಾನೇಶ್ವರರು ಹೇಳಿದರು
ಬಂಡಿಗಣಿ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದಲ್ಲಿ ಅನುಭವ ಹೇಳಿ ಅನುಭವ ಕೇಳಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅನ್ನದಾನೇಶ್ವರರು, ವ್ಯಸನಕ್ಕೆ ಬಿದ್ದು ಶ್ರೇಷ್ಠ ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿ, ಸಮರ್ಥ ಗುರುವಿನಲ್ಲಿ ಕೋಟಿ ತಾಯಿ ಹೃದಯವನ್ನು ಹೊಂದಿರುತ್ತಾರೆ ಗುರು ಮಾಡಿದ ಉಪಕಾರ ಮರೆಯದೆ ಸದಾ ಸ್ಮರಿಸಬೇಕು. ಉಪಕಾರ ಮಾಡಿದವರಿಗೆ ಅಪಕಾರ ಮಾಡುವದು ಮಹಾಪಾಪ. ಶ್ರೀ ಕೃಷ್ಣ ಪರಮಾತ್ಮ ರಾಧಾನ ಮೇಲೆ ಬಹಳ ಹಂಬಲವಿತ್ತು ಬಂಡಿಗಣಿ ಮಠವು ನಂಬಿದ ಭಕ್ತರನ್ನು ಹಂಬಲದಿಂದ ಕಾಣುತ್ತದೆ. ಮಹಾತ್ಮರ ಮಾತು ಲಕ್ಷ್ಯವಿಟ್ಟು ಕೇಳಿ ಜೀವನದಲ್ಲಿ ಅಳವಡಿಸಿದರೆ ಮಾನವ ಜನ್ಮ ಉದ್ದಾರವಾಗುವದು. ಮಾಧವಾನಂದರಂಥ ಮಹಾತ್ಮರು ಭೂಮಿಗೆ ಅವತರಸಿ ಬಂದಾಗ ತಿಳಿಯದೆ ನಿಂದಿಸಿ ಪಾಪಕ್ಕೆ ಗುರಿಯಾಗಬೇಡಿರಿ.
ಮಾರ್ಕಂಡಯನಿಗೆ ಹದಿನಾರು ವರ್ಷಕ್ಕೆ ಆಯುಷ್ಯ ಮುಗಿದಿತ್ತು ಯಮ ಒಯ್ಯುವ ಸಮಯದಲ್ಲಿ ಶಿವಾ ತ್ರಿಶೂಲದದಿಂದ ಹೊಡೆದಾಗ ಮಾರ್ಕಂಡಯನಿಗೆ ಆಯುಷ್ಯ ವೃದ್ಧಿಯಾಯಿತು. ಯಮಬಾಧೆ ತಪ್ಪಿಸುವ ಶಕ್ತಿ ಸಮರ್ಥ ಗುರುವಿನಿಂದ ಮಾತ್ರ ಸಾಧ್ಯ. ಶ್ರೀಶೈಲ ದಂತ ಪುಣ್ಯಕ್ಷೇತ್ರಗಳಲ್ಲಿ ಭಕ್ತಿ ಸೇವೆ ಸಲ್ಲಿಸಿದರೆ ಪುಣ್ಯ ಲಭಿಸುವದು ಎಂದು ಹೇಳಿದರು.
ನಬಿಸಾಬ ಮುಲ್ಲಾ ಮಾತನಾಡಿ ಬಂಡಿಗಣಿ ಮಠದಲ್ಲಿ ಭೇದಭಾವವಿಲ್ಲ ಮಠದ ಕೀತರ್ಿ ಸೂರ್ಯ ಚಂದ್ರರಿರುವ ತನಕ ಅಜರಾಮರವಾಗಿರುತ್ತದೆ ಮಹಾತ್ಮರ ಮಾರ್ಗದರ್ಶನದಲ್ಲಿ ಸಾಗಿದರೆ ಒಳ್ಳೆಯದಾಗುವದು ಎಂದರು, ವಿಜಯ ವೇದಾಂಗ ಶ್ರೀಗಳೂ. ಸುಮಂಗಲಾ ತಾಯಿ ಪಾಟೀಲ ಸೇರಿದಂತೆ ಅನೇಕ ಭಕ್ತಾದಿಗಳು ತಮಗೆ ಆದ ಅನುಭವ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಪರಪ್ಪ ಹುಕ್ಕೇರಿ, ಎಸ್.ಎಸ್.ಸವದಿ, ಮಲ್ಲಪ್ಪ ತವನಿಧಿ ವಿಠ್ಠಲ ತೊಡಕರ ಹಾಗೂ ಅನೇಕರು ಉಪಸ್ಥಿತರಿದ್ದರು