ಭಕ್ತಿ ಮಾರ್ಗದಲ್ಲಿ ನಡೆಯಿರಿ: ಡಾ.ಮುರಘರಾಜೇಂದ್ರ ಶ್ರೀಗಳು

ಲೋಕದರ್ಶನ ವರದಿ

ಮುಗಳಖೋಡ 22: ಪಟ್ಟಣದ ಲಿಂ.ಶ್ರೀ ಯಲ್ಲಾಲಿಂಗೇಶ್ವರ ಪುಣ್ಯಾರಾಧನೆಯ ಕೊನೆಯ ದಿನದಂದು ಬೆಳಗ್ಗೆ 10.30ಕ್ಕೆ ನಡೆದ ಕಾರ್ಯಕ್ರಮದಲ್ಲಿ ಪ.ಪೂ ಡಾ.ಶ್ರೀಮುರಘರಾಜೇಂದ್ರ ಶ್ರೀಗಳು ಸುವರ್ಣ ಕಿರೀಟಧಾರನೆಯೊಂದಿಗೆ ಸಿಂಹಾಸನಾರೋಡರಾಗಿ ನೆರೇದ ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ ಮುಗಿದ ಕೈ ಬಾಗಿದ ತಲೆಯಂತೆ ನಡೆದರೆ ನಮ್ಮ ಧರ್ಮವನ್ನು ಉಳಿಸಲು ಸಾಧ್ಯ. ಶ್ರೀಮಠಕ್ಕೆ ಭಕ್ತಿಯಿಂದ ನಡೆದುಕೊಂಡರೆ ಈ 2020 ನೇ ವರ್ಷದಲ್ಲಿ ಅವಧಿಯಲ್ಲಿ ನಿಮ್ಮ ಬದಕು ಸಮೃದ್ದಿಯಾಗುವುದು, ಮುಂದೆ ಬರುವ ಕಾಲ ಕೆಡಗಾಲ ಇರುವುದರಿಂದ ಎಲ್ಲರೂ ಎಚ್ಚರದಿಂದ ನಡೆಯಿರಿ, ಅದರೊಂದಿಗೆ ಭಕ್ತ ಮಾರ್ಗ, ದಾನ ಧರ್ಮದಲ್ಲಿ ತೊಡಿಗಿಕೊಂಡರಡ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರು, ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳು ನಿಮ್ಮ ಕೈ ಬಿಡುವುದಿಲ್ಲವೆಂದು ಆಶೀರ್ವಚನ ನೀಡಿದರು. 

ಬುಧವಾರ ಬೆಳಿಗ್ಗೆ ಶ್ರೀ ಲಿಂ. ಸದ್ಗುರುಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಕತೃ ಗದ್ದುಗೆಗೆ ಮಹಾರುದ್ರಾಭೀಷೇಕ, ವಿಶೇಷ ಪೂಜೆ, ಪುಷ್ಪಾರ್ಚಣೆ ಹಾಗೂ ಮಹಾಮಂಗಳಾರತಿಯೊಂದಿಗೆ ಬೀರಸಿದ್ದೇಶ್ವರ ಮಹಾಪುರಾಣ ಮಂಗಲಗೊಂಡಿತು. ಈ ಕಾರ್ಯಕ್ರಮದಲ್ಲಿ ಪ್ರವಚಣಕಾರರಿಗೆ "ಪ್ರಬುದ್ಧ ಪ್ರವಚನ ಸಿದ್ಧ" ಎಂಬ ಪ್ರಶಸ್ತಿ ಮತ್ತು ಗಾಯಕರಿಗೆ "ಸಿದ್ಧಶ್ರೀ ಗಾಣಸೀರಿ ಪ್ರಶಸ್ತಿ"ಯನ್ನು ಡಾ.. ಮುರುಘರಾಜೇಂದ್ರ ಮಹಾಸ್ವಾಮಿಗಳು ನೀಡಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಆಗಮಿಸುವ ಮಹಾತ್ಮರು, ಸಾಧು ಶರಣರು, ಸಂತರು, ರಾಜಕಾರಣಿಗಳು ಸೇರಿದಂತ್ತೆ  ವಿವಿಧ ಅನುಭಾವಿಗಳಿಂದ ವಿಶೇಷ ಉಪನ್ಯಾಸ, ಚಿಂತನಗೋಷ್ಠಿ, ಸತ್ಸಂಗ ಜರುಗಿ ಅಪ್ಪಾಜಿ ಅವರಿಂದ ಆಶೀರ್ವಚನ ಕಾರ್ಯಕ್ರಮದೊಂದಿಗೆ ಮಹಾಮಂಗಲಗೊಂಡಿತು. 

ಈ ಸಂದರ್ಭದಲ್ಲಿ ಜೇವಗರ್ಿ ಶಾಸಕ ಅಜಯಸಿಂಗ್, ಸುಭಾಷ ಗುತ್ತೇದಾರ, ಕುಡಚಿ ಶಾಸಕ ಪಿ.ರಾಜೀವ, ಅಜರ್ುನ ನಾಯಕವಾಡಿ, ತೇಜಶ್ವಿನಿ ನಾಯಕವಾಡಿ, ಪ್ರವಚನಕಾರರು, ಸಾಧು ಶರಣರು, ಸಂತರು ಹಾಗೂ ಕನರ್ಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂದ್ರ ಹಾಗೂ  ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಲಕ್ಷಾಂತರ ಭಕ್ತ ಸಮೂಹದವರು ಪಾಲ್ಗೊಂಡಿದ್ದರು.